ಆರೋಗ್ಯಆಹಾರಜೀವನ ಶೈಲಿ

ನೆಲ್ಲಿಕಾಯಿಯಲ್ಲಡಗಿದೆ ಆರೋಗ್ಯ ರಹಸ್ಯ…!

ಬೆಂಗಳೂರು, ನ.08: ನೆಲ್ಲಿಕಾಯಿಗೆ ಪ್ರಾಚೀನಾ ಕಾಲದಿಂದಲೂ ಆಯುರ್ವೇದದಲ್ಲಿ ಭಾರಿ ಮಹತ್ವವಿದೆ. ನೋಡಲು ಪುಟ್ಟದಾಗಿದ್ದರೂ, ತನ್ನ ಒಡಲಲ್ಲಿ ಬಹಳಷ್ಟು ಜೌಷಧಿಯ ಗುಣಗಳನ್ನು ಹೊಂದಿರುವ ನೆಲ್ಲಿಕಾಯಿ, ಸೌಂದರ್ಯವರ್ಧಕವಾಗಿ, ಆರೋಗ್ಯವರ್ಧಕವಾಗಿ ಬಳಕೆಯಾಗುವ ದಿನನಿತ್ಯದ ವಸ್ತು.  ಆಹಾರ, ಕಾಸ್ಮೆಟಿಕ್, ಶ್ಯಾಂಪೂ ಹೀಗೆ ಹಲವು ರೀತಿಯ ವಸ್ತುಗಳನ್ನು ನೆಲ್ಲಿಕಾಯಿಯ ರಸದಿಂದ ತಯಾರಿಸುತ್ತಾರೆ. ಅಂದಹಾಗೆ ನೆಲ್ಲಿಕಾಯಿಯ ಸೇವನೆಯಿಂದ ಆಗುವ ಆರೋಗ್ಯ ಲಾಭಗಳ ಕುರಿತಂತೆ ನಾವು ನಿಮಗೆ ಹೇಳುತ್ತೇವೆ ನೋಡಿ.

ಸಕ್ಕರೆ ಮಟ್ಟ ಕಾಪಾಡಲು

ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಸರಿದೂಗಿಸುವ ಸಲುವಾಗಿ ನಮಗೆ ನೆಲ್ಲಿಕಾಯಿ ಜ್ಯೂಸ್ ಅತ್ಯಗತ್ಯ. ಹೀಗಾಗಿ ನೆಲ್ಲಿಕಾಯಿ ರಸವನ್ನು ಬರಿ ಹೊಟ್ಟೆಯಲ್ಲಿ ಬೆಳಗ್ಗೆ ಸೇವಿಸಿದರೆ ಆರೋಗ್ಯಕ್ಕೆ ಅತ್ಯುತ್ತಮ.

ಹೃದಯ ಸಮಸ್ಯೆ ನಿವಾರಕವಾಗಿ

ಖಾಲಿಹೊಟ್ಟೆಗೆ ನೆಲ್ಲಿಕಾಯಿ ಜ್ಯೂಸ್ ಸೇವಿಸುವುದರಿಂದ ಹೃದಯಸಂಬಂಧಿ ಕಾಯಿಲೆಯಿಂದ ದೂರವಾಗಬಹುದು. ನೆಲ್ಲಿಕಾಯಿಯಲ್ಲಿ ಕ್ರೋಮಿಯಂ ಅಂಶ ಇರುವುದಿರಂದ  ಇದು ದೇಹದಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಹೊಟ್ಟೆಯಲ್ಲಿನ ಸಮಸ್ಯೆ ನಿವಾರಣೆಗೆ

ಅಂದಹಾಗೆ ಜೀರ್ಣವ್ಯವಸ್ಥೆಗೆ ಪೂರಕವಾಗುವ ಅಂಶ ನೆಲ್ಲಿಕಾಯಿಯಲ್ಲಿದೆ. ಇದು ನಾರಿನಾಂಶವನ್ನು ಹೊಂದಿದ್ದು, ಕರುಳಿನ ಕ್ರಿಯೆಯೂ ಸರಾಗವಾಗಿ ಸಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ ಗ್ಯಾಸ್ಟ್ರಿಕ್, ಮಲಬದ್ದತೆಯನ್ನು ಇದು ಕಡಿಮೆಗೊಳಿಸುತ್ತದೆ ಎಂಬುದು ಆಯುರ್ವೇದ ತಜ್ಞರ ಅಭಿಪ್ರಾಯ.

ಮಧುಮೇಹ ನಿವಾರಕವಾಗಿ

ನೆಲ್ಲಿಕಾಯಿಯಲ್ಲಿರುವ ಕ್ರೋಮಿಯಂ ಅಂಶ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಗೆ ನೆರವಾಗುತ್ತದೆ. ಇದರಿಂದ ಮಧುಮೇಹ ರೋಗ ನಿಯಂತ್ರಣಕ್ಕೆ ಬರುತ್ತದೆ ಅಲ್ಲದೆ ದೇಹದಲ್ಲಿ ಗ್ಲೂಕೋಸ್ ಅಂಶ ಹೆಚ್ಚಿಸಿ ಪಚನ ಕ್ರಿಯೆಗೆ ಸಹಕಾರಿಯಾಗುತ್ತದೆ.

ಕ್ಯಾಲ್ಸಿಯಂ ಪ್ರಮಾಣ ಹೆಚ್ಚಳ

ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಪ್ರಮಾಣವನ್ನು ನಾವು ಸೇವಿಸುವ ಆಹಾರದಿಂದ ಹೀರಿ ಅದನ್ನು ದೇಹಕ್ಕೆ ಪೂರೈಕೆ ಮಾಡುವಲ್ಲಿ ನೆಲ್ಲಿಕಾಯಿ ಜ್ಯೂಸ್ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಮುಂಜಾನೆ ಬರೀ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಅಂಶವನ್ನು ಪೂರೈಸುವಲ್ಲಿ ಇದು ಸಹಕಾರಿಯಾಗಿದೆ.

ಸಮೃದ್ಧಿಯಾಗಿದೆ ವಿಟಮಿನ್ ಸಿ

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ನೈಸರ್ಗಿಕ ಆಮ್ಲೀಯ ಗುಣ ಹೊಂದಿದೆ. ಆದರೆ ಕೆಲವರಿಗೆ ನೆಲ್ಲಿಕಾಯಿ ಜ್ಯೂಸ್ ಅಲರ್ಜಿಯನ್ನು ಉಂಟು ಮಾಡಬಹುದು. ಹೀಗಾಗಿ ವೈದ್ಯರ ಸಲಹೆ ಪಡೆದು ಸೇವಿಸುವುದು ಉತ್ತಮ.

Tags