ಆರೋಗ್ಯಆಹಾರಜೀವನ ಶೈಲಿ

ನೀಲಿ ಸುಂದರಿ ನೇರಳೆ ಹಣ್ಣು

ಬೆಂಗಳೂರು, ಏ.14:

ಒಮ್ಮೆ ತಿಂದರೆ ಸಾಕು, ಮತ್ತೊಮ್ಮೆ ಸವಿಯಬೇಕು ಎಂದೆನಿಸುವ ಈ ನೀಲಿ ಸುಂದರಿಯನ್ನುಇಷ್ಟಪಡದವರಾರು ಹೇಳಿ? ವರುಷಕ್ಕೊಮ್ಮೆ ಕಾಣಸಿಗುವ ಈ ಹಣ್ಣು ಎಲ್ಲರಿಗೂ ಪ್ರಿಯ. ರೋಗ ಶಮನ ಮಾಡುವಲ್ಲಿ ಪ್ರಮುಖ ಔಷಧಿಯಾಗಿ ಕಾರ್ಯನಿರ್ವಹಿಸುವ ಈ ನೇರಳೆ ಹಣ್ಣು ಇತ್ತೀಚಿನ ದಿನಗಳಲ್ಲಿ ಕಾಣಸಿಗುವುದೇ ಅಪರೂಪ.

ಕಬ್ಬಿಣ, ಪೊಟಾಶಿಯಂ, ಮೇಗ್ನೇಶಿಯಂ, ಪ್ರೋಸ್ಫರಸ್, ವಿಟಮಿನ್ ಸಿ ಅಂಶಗಳನ್ನು ಹೊಂದಿದ ನೇರಳೆ ಹಣ್ಣು ಬರೀ ಆರೋಗ್ಯಕಾರಕ ಮಾತ್ರವಲ್ಲ, ಸೌಂದರ್ಯವರ್ಧಕವೂ ಹೌದು. ತಿನ್ನಲು ರುಚಿರುಚಿಯಾದ ಈ ಹಣ್ಣು ಹಲವು ರೋಗಗಳಿಗೆ ರಾಮಬಾಣ ಎಂದರೆ ನಂಬಲು ಸಾಧ್ಯವೇ..?

ರಕ್ತಹೀನತೆ, ಕಾಮಾಲೆ ರೋಗ, ಹೃದಯ ಸಂಬಂಧ ಕಾಯಿಲೆ, ಹೊಟ್ಟೆ ಹುಣ್ಣು, ಬೇಧಿ, ಆ್ಯಸಿಡಿಟಿಯಂಥ ಹತ್ತು ಹಲವು ಕಾಯಿಲೆಗಳನ್ನು ಹೋಗಲಾಡಿಸುವ ಶಕ್ತಿ ಈ ನೀಲಿ ಸುಂದರಿಗಿದೆ. ಅಷ್ಟೇ ಅಲ್ಲದೇ ಹದಿಹರೆಯದ ಯುವಕ ಯುವತಿಯರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡುವ ಮೊಡವೆಯನ್ನು ಹೋಗಲಾಡಿಸಿ ತ್ವಚೆಯ ಅಂದ ಹೆಚ್ಚಿಸುವ ಶಕ್ತಿ ಇದಕ್ಕಿದೆ. ಆ್ಯಂಟಿ ಬ್ಯಾಕ್ಟೀರಿಯಾ ಅಂಶ ಹೊಂದಿದ ಈ ನೇರಳೆ ಹಣ್ಣಿನ ಎಲೆಗಳನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆ ತಡೆಗಟ್ಟಬಹುದು. ಜಾಂಬೋಲಿನ್ ಎಂಬ ಗ್ಲೂಕೋಸ್ ಅಂಶ ಇದರಲ್ಲಿರುವ ಕಾರಣ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಡಯಾಬಿಟಿಸ್ ಇರುವವರು ಕೂಡ ಯಾವುದೇ ಆತಂಕವಿಲ್ಲದೆ ಈ ಹಣ್ಣನ್ನು ತಿನ್ನಬಹುದು. ನೇರಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಜೀರ್ಣ ಕ್ರಿಯೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುವ ಇದು ರಕ್ತ ಶುದ್ಧಿ ಮಾಡುವಲ್ಲಿ ಸಹಕಾರಿಯಾಗಿದೆ. ಇನ್ನು ಆಯಿಲ್ ಸ್ಕೀನ್ ನಿಂದ ಕಂಗಲಾಗಿರುವವರಿಗೆ ಇದು ಹೇಳಿ ಮಾಡಿಸಿದ ಮದ್ದು.

ಅಷ್ಟೇ ಅಲ್ಲದೇ ಇದರ ತಿರುಳನ್ನು ಜೆಲ್ಲಿ, ಜ್ಯಾಮ್, ವೈನ್ ಗಳ ತಯಾರಿಕೆ ಬಳಸಲಾಗುತ್ತದೆ. ಅಗಾಧ ಔಷಧಿಯ ಗುಣ ಹೊಂದಿದ ಈ ಹಣ್ಣು ತಿನ್ನಲು ತುಂಬಾ ರುಚಿ. ನೇರಳೆ ಹಣ್ಣು ಸೇವಿಸಿ ಬಾಯಿ ಚಪ್ಪರಿಸಿಕೊಳ್ಳುವುದು ಮಾತ್ರವಲ್ಲ. ಸೌಂದರ್ಯದ ಜೊತೆಗೆ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

ಅನಿತಾ ಬನಾರಿ

ಔಷಧಿಗಳ ಆಗರ ಈ ಶಂಖಪುಷ್ಪ

#neralehannu #balkaninews #lifestyle #beautytips #neralehannufruit

Tags