ಆರೋಗ್ಯಆಹಾರಜೀವನ ಶೈಲಿ

ಆರೋಗ್ಯದ ಕಣಜ ‘ನುಗ್ಗೆ ಸೊಪ್ಪು’: ನೈಸರ್ಗಿಕ ಇನ್ಸುಲಿನ್ ಇದು

ಬೆಂಗಳೂರು, ಸೆ.12: ಸೊಪ್ಪು ತರಕಾರಿಗಳು ದೇಹಕ್ಕೆ ಆರೋಗ್ಯಕ್ಕೆ ಎಷ್ಟು ಒಳಿತು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅದರಲ್ಲೂ ಸೊಪ್ಪುಗಳಿಂದ ನಮ್ಮ ದೇಹಕ್ಕೆ ಹಲವಾರು ಪೋಷಕಾಂಶಗಳು ಲಭ್ಯವಾಗುತ್ತವೆ. ಮುಖ್ಯವಾಗಿ ನುಗ್ಗೆ ಸೊಪ್ಪಿನಲ್ಲಿ ಹೆಚ್ಚಾಗಿ ವಿಟಮಿನ್‌ ಬಿ, ಸಿ, ಕೆ, ಬೀಟಾ-ಕ್ಯಾರೋಟೀನ್‌ ಹಾಗೂ ಪ್ರೋಟೀನ್‌ ಸೇರಿದಂತೆ ಇನ್ನಿತರ ಪೋಷಕಾಂಶಗಳಿವೆ. ಅಲ್ಲದೆ ಕೆಲವು ಸಂಶೋಧನೆಗಳ ಮೂಲಕ ನುಗ್ಗೆ ಸೊಪ್ಪಿನಲ್ಲಿ ಮಧುಮೇಹ ನಿವಾರಕ ಗುಣಗಳಿರುವುದನ್ನು ಖಚಿತಪಡಿಸಲಾಗಿದೆ. ನುಗ್ಗೆ ಸೊಪ್ಪು ತಿನ್ನುವುದರಿಂದ ಏನು ಲಾಭ?ನುಗ್ಗೆ ಸೊಪ್ಪಿನ ಪ್ರಯೋಜನಗಳು

* ನುಗ್ಗೆಸೊಪ್ಪು ದೇಹದಲ್ಲಿನ ಇನ್ಸುಲಿನ್‌ ಪ್ರಮಾಣವನ್ನು ಹೆಚ್ಚಿಸಲು ಪ್ರಚೋದನೆ ನೀಡುತ್ತದೆ. ಈ ಮೂಲಕ ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಯಾಗಲು ನೆರವಾಗುತ್ತದೆ.* ದೇಹದಲ್ಲಿ ಫ್ರೀ ರಾರ‍ಯಡಿಕಲ್‌ ಗಳು ಹೆಚ್ಚುತ್ತಿದ್ದಂತೆಯೇ ಕೆಲವು ಅಂಗಗಳು ನಿಧಾನವಾಗಿ ತಮ್ಮ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಬರುತ್ತವೆ. ನುಗ್ಗೆ ಸೊಪ್ಪಿನಲ್ಲಿ ಜೈವಿಕ ಕ್ರಿಯೆ ಉತ್ತಮಗೊಳಿಸುವ ರಾಸಾಯನಿಕಗಳಿದ್ದು, ಹೆಚ್ಚಿನ ಆ್ಯಂಟಿ ಆಕ್ಸಿಡೆಂಟು ಗುಣವಿದೆ. ಇವು ಫ್ರೀ ರಾರ‍ಯಡಿಕಲ್‌ ಕಣಗಳ ವಿರುದ್ಧ ಹೋರಾಡುವ ಮೂಲಕ ಘಾಸಿಯನ್ನು ತಡೆಯುತ್ತವೆ. ಮಧುಮೇಹದ ನಿಯಂತ್ರಣದಲ್ಲಿ ಈ ಗುಣ ಮಹತ್ತರದ್ದಾಗಿದೆ.* ನುಗ್ಗೆ ಸೊಪ್ಪಿನಲ್ಲಿರುವ ಪೋಷಕಾಂಶಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಕಾರಣ ಆಯುರ್ವೇದದಲ್ಲಿ ಸಾವಿರಾರು ವರ್ಷಗಳಿಂದ ಬಳಸುತ್ತಾ ಬರಲಾಗಿದೆ.

 

* ನುಗ್ಗೆ ಸೊಪ್ಪು ಹೆಚ್ಚಿನ ತೂಕವನ್ನು ಕಳೆದುಕೊಳ್ಳಲು ನೆರವಾಗುತ್ತದೆ.

* ರಕ್ತದೊತ್ತಡದ ಮೇಲೆ ನೇರ ಪರಿಣಾಮ ಬೀರುವುದಿಲ್ಲವಾದರೂ ರಕ್ತನಾಳಗಳ ಒಳಗೆ ಕೆಟ್ಟ ಕೊಲೆಸ್ಟ್ರಾಲ್‌ ಅಂಟಿಕೊಳ್ಳದಂತೆ ತಡೆಯುವ ಮೂಲಕ ಪರೋಕ್ಷವಾಗಿ ರಕ್ತದೊತ್ತಡ ಕಡಿಮೆಯಾಗಲು ನೆರವಾಗುತ್ತದೆ.

Tags

Related Articles