ಜೀವನ ಶೈಲಿಫ್ಯಾಷನ್ಸೌಂದರ್ಯ

ಎಣ್ಣೆ ಚರ್ಮವನ್ನು ತೊಲಗಿಸಲು ಇಲ್ಲಿದೆ ಸರಳ ಮನೆಮದ್ದು

ಬೆಂಗಳೂರು, ಜ.23:

ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿ ತಮ್ಮ ಬ್ಯೂಟಿ ಬಗ್ಗೆ ಹೆಚ್ಚಾಗಿ ಕಾಳಜಿವಹಿಸುತ್ತಾರೆ. ಅದನ್ನು ಕಾಪಾಡುವ ಸಲುವಾಗಿ ಬಗೆ ಬಗೆಯ ಕ್ರೀಮ್ ಗಳನ್ನು ಬಳಸುವುದಲ್ಲದೇ, ಯಾರು ಏನು ಹೇಳುತ್ತಾರೋ ಅದನ್ನೆಲ್ಲ ಹಚ್ಚಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಪಡುತ್ತಿರುತ್ತಾರೆ. ಇದೀಗ ನಾವು ಹೇಳುತ್ತಿರುವುದೇನೆಂದರೆ, ಈಗಿನ ಪೀಳೆಗೆಯ ಬಹುತೇಕ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತಿರುವುದು ಎಣ್ಣೆಯ ಚರ್ಮ. ಹೌದು, ಮುಕ್ಕಾಲು ಭಾಗ ಹೆಣ್ಣು ಮಕ್ಕಳ ಮುಖದಲ್ಲಿ ಎಣ್ಣೆ ಚರ್ಮವನ್ನು ನಾವು ಕಾಣಬಹುದಾಗಿದೆ. ಈಗ ತಾನೇ ಮುಖವನ್ನು ತೊಳೆದುಕೊಂಡು ಬಂದಿದ್ದರು ಸಹ ಮುಖದ ತುಂಬಾ ಎಣ್ಣೆ  ಜಿಡ್ಡುಕಾಣುತ್ತದೆ. ಇದರ ಸಲುವಾಗಿ ಯಾವ ಕಾರ್ಯಕ್ರಮಗಳಿಗೂ ಭೇಟಿ ನೀಡಲು ಆಗುತ್ತಿಲ್ಲವೆಂದು ಹಲವಾರು ಜನ ಹೆಣ್ಣು ಮಕ್ಕಳು ತೊಂದರೆ ಪಡುವಂತಾಗಿದೆ. ಅದಕ್ಕಾಗಿ ಯಾವುದೇ ಖರ್ಚುವೆಚ್ಚವಿಲ್ಲದೇ ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ನಮ್ಮ ಎಣ್ಣೆ ಚರ್ಮವನ್ನು ತೊಲಗಿಸಿಕೊಳ್ಳಬಹುದಾಗಿದೆ.

ಮೊಟ್ಟೆ

ತಮ್ಮ ಮುಖದಲ್ಲಿನ ಎಣ್ಣೆ ಚರ್ಮವನ್ನು ತೊಲಗಿಸಲು ಮೊಟ್ಟೆ ಪ್ರಮುಖ ಪಾತ್ರವಹಿಸುತ್ತದೆ. ಒಂದು ಮೊಟ್ಟೆಯ ಬಿಳಿ ಭಾಗವನ್ನು ಅರ್ಧ ನಿಂಬೆ ಹಣ್ಣಿನ ರಸದೊಂದಿಗೆ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿರಿ. 15 ನಿಮಿಷಗಳ ನಂತರ ಬಿಸಿ ನೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಮಾಡುವುದರಿಂದ ಚರ್ಮದಲ್ಲಿನ ವ್ಯತ್ಸಾಸವನ್ನು ಕಾಣಬಹುದು ಹಾಗೂ ಇದು ಅತಿಯಾದ ಎಣ್ಣೆ ಚರ್ಮವನ್ನು ಹೀರಿಕೊಳ್ಳುತ್ತದೆ..

 

ಟೊಮ್ಯಾಟೊ

ಟೊಮ್ಯಾಟೋ ಹಣ್ಣನ್ನು ಎರಡು ಭಾಗ ಮಾಡಿ ಅದನ್ನು ನೇರವಾಗಿ ಮೊಖಕ್ಕೆ ಉಜ್ಜಿ ಮತ್ತು ಅದರ ರಸವನ್ನು ಮುಖಕ್ಕೆ ಸವರಿ. ಹೀಗೆ ಮಾಡಿದ 15 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ಪ್ರತಿ ನಿತ್ಯ ಮಾಡುವುದರಿಂದ ಮುಖದಲ್ಲಿನ ಜಿಡ್ಡಿನ ಪ್ರಮಾಣವನ್ನು ಕಡಿಮೆಮಾಡಬಹುದಾಗಿದೆ.

ಬಾಳೆಹಣ್ಣು

ಬಾಳೆಹಣ್ಣು ಬಹುಉಪಯೋಗಕಾರಿ ಹಣ್ಣು. ಈ ಹಣ‍್ಣನ್ನು ವಿಧ ವಿಧವಾಗಿ ತಿಂಡಿ ತಿನಿಸು ಮಾಡುವ ಮೂಲಕ ಉಪಯೋಗಕಾರಿಯಾಗುತ್ತದೆ. ಬಾಳೆಹಣ್ಣಿನ ಪೂರ್ಣ ಪ್ರಮಾಣದಲ್ಲಿ ಮಸೆದು ಅದಕ್ಕೆ ಜೇನುತುಪ್ಪ ಮತ್ತು ನಿಂಬೆಹಣ್ಣಿನ ರಸವನ್ನು ಬೆರೆಸಿದ ಮಿಶ್ರಣವನ್ನು ಮುಖಕ್ಕೆ ಹಚ್ಚಿರಿ. ಇದಾದ 20 ನಿಮಿಷಗಳ ನಂತರ ಮುಖವನ್ನು ತೊಳೆದು, ಬಿಸಿ ನೀರಿನಲ್ಲಿ ಅದ್ದಿದ ಬಟ್ಟೆಯನ್ನು ಮುಖಕ್ಕೆ ಶಾಖವನ್ನು ಕೊಡಿ. ಹೀಗೆ ಮಾಡುತ್ತಾ ಬಂದರೆ ನಿಮ್ಮ ಮುಖದಲ್ಲಿನ ಎಣ್ಣೆ ಅಂಶವನ್ನು ತೊಡೆದುಹಾಕುವುದಲ್ಲದೇ, ಮುಖದಲ್ಲಿ ಕಾಂತಿಯನ್ನು ಹೆಚ್ಚಿಸುತ್ತದೆ.

#balkaninews #oilskin #beautytips

Tags