ಆರೋಗ್ಯಆಹಾರಜೀವನ ಶೈಲಿ

ಸಂಜೆಯ ರಂಗನ್ನು ಹೆಚ್ಚಿಸುವ ಬಿಸಿ ಬಿಸಿ ಪಕೋಡಾವನ್ನು ಇಂದೇ ಟ್ರೈ ಮಾಡಿ

ಬೆಂಗಳೂರು, ಜ.07: ಮಾಗಿ ಕಾಲ ಶುರುವಾದರೆ ಸಾಕು, ಮೈಯಲ್ಲಿ ಸಣ್ಣಗೆ ಚಳಿ ಕಾಣಿಸಿಕೊಳ್ಳುತ್ತದೆ. ಬಾಯಿ ಬಿಸಿ ಬಿಸಿಯಾದ ಪದಾರ್ಥವನ್ನು ಬೇಡುತ್ತದೆ. ಚಳಿಗೂ ಬಿಸಿಗೂ ಏನೋ ಒಂದು ರೀತಿಯ ನಂಟು. ಸಂಜೆ ಆಫೀಸ್‍ ಮುಗಿಸಿಕೊಂಡು ಬಂದ ಮೇಲಂತೂ ಬಿಸಿ ಬಿಸಿಯಾದ ಬಾಯಿಗೆ ರುಚಿಯೆನಿಸುವ ಏನಾದರೂ ತಿನ್ನಬೇಕು ಎನ್ನಿಸುವುದು ಸಹಜ. ಅದಕ್ಕಾಗಿಯೇ ಸಂಜೆಯ ರಂಗು ಹೆಚ್ಚಿಸುವ ಪಕೋಡವನ್ನು ಒಮ್ಮೆ ಟ್ರೈ ಮಾಡಿ, ಸಂಜೆಯ ರಂಗನ್ನು ಆನಂದಿಸಿ.

ಬೇಕಾಗುವ ಪದಾರ್ಥಗಳು:

ಈರುಳ್ಳಿ-2, ಹಸಿಬಟಾಣಿ-1/2 ಕಪ್‍, ಆಲೂಗೆಡ್ಡೆ-1, ದಪ್ಪಮೆಣಸಿನಕಾಯಿ-1, ಅಕ್ಕಿ ಹಿಟ್ಟು – ¼ ಕಪ್‍, ಕಡಲೆಹಿಟ್ಟು-1 ಕಪ್‍, ಅಡುಗೆ ಎಣ್ಣೆ ಕರಿಯಲು ಬೇಕಾಗುವಷ್ಟು, ಉಪ್ಪು ರುಚಿಗೆ ತಕ್ಕಷ್ಟು, ಓಂಕಾಳು-1/4 ಚಮಚ, ಅಚ್ಚ ಖಾರದ ಪುಡಿ-ಖಾರಕ್ಕೆ ತಕ್ಕಂತೆ, ಅರಿಶಿನ-ಚಿಟಿಕೆ, ಗರಂ ಮಸಾಲೆ-ಚಿಟಿಕೆ.

Image result for onion pakoda

ಮಾಡುವ ವಿಧಾನ:

ಈರುಳ್ಳಿ, ದಪ್ಪಮೆಣಸಿಕಾಯಿ, ಆಲೂಗೆಡ್ಡೆ, ಹಸಿ ಬಟಾಣಿ (ಬೇಯಿಸಿದ)ಯನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ. ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಕಾದ ಎಣ್ಣೆ (2 ಚಮಚ), ಅಚ್ಚಖಾರದ ಪುಡಿ, ಚಿಟಿಕೆ ಅರಿಶಿನ, ಓಂಕಾಳು, ಗರಂ ಮಸಾಲೆ ಹಾಕಿ ಹಿಟ್ಟನ್ನು ಪಕೋಡಾ ಹದಕ್ಕೆ ಕಲೆಸಿಕೊಳ್ಳಿ. ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿಯಿರಿ. ಮಾಗಿ ಚಳಿಗೆ ಬಿಸಿ ಬಿಸಿ ಪಕೋಡಾ ಸವಿಯಲು ಸಿದ್ಧ.

Image result for onion pakoda

 

Tags