ಆರೋಗ್ಯಜೀವನ ಶೈಲಿ

ಎಲ್ಲರನ್ನು ಕಣ್ಣೀರಿಳಿಸುವ ಈರುಳ್ಳಿಯಿಂದ ಇಷ್ಟೊಂದು ಲಾಭವಿದೆಯೇ??

ಎಲ್ಲರನ್ನು  ಕಣ್ಣೀರಿಳಿಸುವ ಈರುಳ್ಳಿಯನ್ನು ತಿಳಿಯದವರಾರು? ಹೆಚ್ಚಾಗಿ ಈರುಳ್ಳಿಯಿಲ್ಲದ ಮನೆಯೇ ಇಲ್ಲ. ಇದು ಅಡುಗೆ ಕೋಣೆಯಲ್ಲಿ ಪ್ರಥಮ ಪ್ರಾಶ್ರಸ್ತ್ಯವನ್ನು ಪಡೆದಿರುತ್ತದೆ. ಹಾಗೆಯೇ ಮಲಗುವ ಕೋಣೆಯಲ್ಲಿಯೂ ಸ್ಥಾನ ಪಡೆದುಕೊಂಡಿದೆ ಎಂದರೆ ನೀವು ಆಶ್ಚರ್ಯ ಚಕಿತರಾಗುವಿರಿ! ಇದರಲ್ಲಿರುವ ಜೀವಸತ್ವಗಳು ಆರೋಗ್ಯಕ್ಕೆ ಹೇಗೆ ಒಳ್ಳೆಯದೋ ಅದೇ ರೀತಿ ಈರುಳ್ಳಿಯನ್ನು ತುಂಡರಿಸಿ ಮಲಗುವ ಕೋಣೆಯಲ್ಲಿ  ಒಂದು ತಟ್ಟೆಯಲ್ಲಿಟ್ಟು ಮಲಗಿದರೆ ಕೋಣೆಯಲ್ಲಿರುವ ಬ್ಯಾಕ್ಟೀರಿಯಾ ಸುಲಭವಾಗಿ ಹೀರಿಕೊಂಡು ನಮಗೆ ಬರುವಂತಹ ರೋಗಕಾರಕ ಅಂಶಗಳಿಂದ ದೂರವುಳಿಯಲು ಸುಲಭ ಪರಿಹಾರ.

Image result for onion

ಈರುಳ್ಳಿಯಲ್ಲಿರುವ ಸಲ್ಫರಿಕ್ ಅಂಶಗಳು ರೋಗ ಹರಡುವ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುತ್ತದೆ ಇದು ವಾಸನೆ ಮತ್ತು ಮಸಾಲೆಯಂಶದ ರುಚಿಯಿಂದ ಕೂಡಿದೆ.

ನೀವೇ ಸುಲಭವಾಗಿ ಮಾಡುವಂತಹ ಪ್ರಯೋಗ ಹೇಗೆಂದರೆ ಈರುಳ್ಳಿಯನ್ನು ನಾಲ್ಕು ಭಾಗವಾಗಿ ತುಂಡರಿಸಿ ಅದನ್ನು ನಿಮ್ಮ ಕೋಣೆಯ ನಾಲ್ಕು ಮೂಲೆಯಲ್ಲಿಡಿ ಮತ್ತು ಈರುಳ್ಳಿಯನ್ನು ಕಾಲು ಚೀಲದಲ್ಲಿ ಧರಿಸಿ ಮಲಗಿ ಬೆಳಗ್ಗೆ ಎದ್ದ ಕೂಡಲೆ ಕಾಲುಚೀಲವನ್ನು ತೆಗೆಯಲು ಮರೆಯದಿರಿ ಈ ವಿಧಾನ ಅನುಸರಿಸುವುದರಿಂದ ರೋಗಗಳನ್ನು ಹರಡುವಂತಹ ಬ್ಯಾಕ್ಟೀರಿಯಗಳು ಕಡಿಮೆಗೊಳ್ಳುತ್ತದೆ.

Image result for onion

ಈರುಳ್ಳಿ ಸೂಪ್ ಮಾಡಿ ಸೇವನೆ ಮಾಡಿದ್ದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅಲರ್ಜಿಯನ್ನು ದೂರಮಾಡುತ್ತದೆ.

ಈರುಳ್ಳಿಯ ಸೂಪನ್ನು ತಯಾರಿಸಲು ಟೀ ಸ್ಪೂನಿನಷ್ಟು ಹಿಮಲಯನ್ ಉಪು ,ನಾಲ್ಕು ಕಪ್ ನೀರು ,3 ಈರುಳ್ಳಿ, 3 ಎಸಳು ಬೆಳ್ಳುಳ್ಳಿ.

ಮೊದಲು ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ತುಂಡರಿಸಿ  ಮೇಲೆ ತಿಳಿಸಿರುವಂತಹ ಎಲ್ಲವನ್ನೂ ಮಿಶ್ರಣವನ್ನು ಮಾಡಿ 20 ನಿಮಿಷ ಕುದಿಸಿ ನಂತರ ಕುಡಿಯಿರಿ ಇದು ನಿಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ದರ್ಶನ್ ಹುಟ್ಟುಹಬ್ಬದಲ್ಲಿ ಗಮನಸೆಳೆದ ಈ ಪುಟ್ಟ ಮಕ್ಕಳು

#balkaninews #onion #lifestylle

Tags

Related Articles