ಜೀವನ ಶೈಲಿಸೌಂದರ್ಯ

ಕಿತ್ತಾಳೆ ಹಣ‍್ಣಿನ ಫೇಸ್ ಪ್ಯಾಕ್ ಮತ್ತು ಹ್ಯಾರ್ ಪ್ಯಾಕ್

ಯುವ ಯುವತಿಯರಿಗೆ ತಮ್ಮ ತ್ವಚೆಯದ್ದೇ ಟೆನ್ ಶ್ಯನ್. ಕಿತ್ತಳೆ ಯಾರಿಗೆ ತಾನೆ ಗೊತ್ತಿಲ್ಲ? ಅದರಲ್ಲಿ ಕಿತ್ತಳೆ ಚಳಿಗಾಲದ ಸೀಸನ್ ಫುಡ್ ಆಗಿದೆ. ಕಿತ್ತಳೆ ತಿಂದರೆ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆಗೂ ಒಳ್ಳೆಯದು. ಕಿತ್ತಳೆಯ ಸಿಪ್ಪೆಯನ್ನು ಬಿಸಾಡದೆ ಅದರಿಂದ ಫೇಸ್ ಮಾಸ್ಕ್ ತಯಾರಿಸಿದರೆ ತ್ವಚೆಯ ಹೊಳಪನನ್ನು ಹೆಚ್ಚಿಸಬಹುದು. ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಕೂದಲಿಗೂ ಇದರ ಪ್ರಯೋಜನಗಳನ್ನು ಬಳಸಿಕೊಳ‍್ಳಬಹುದು.  ಹಣ್ಣು, ರಸ ಅಥವಾ ಸಿಪ್ಪೆಯನ್ನು ಇದಕ್ಕಾಗಿ ಬಳಸಬಹುದು. ಇದರ ಸಿಪ್ಪೆಯನ್ನು ಬಿಸಿಲಲ್ಲಿ ಒಣಗಿಸಿ ತದನಂತರ ಹುಡಿ ಮಾಡಿಟ್ಟುಕೊಳ್ಳಬಹುದು. ಕಿತ್ತಳೆಯಿಂದ ಈ ಕೆಳಗಿನಂತೆ ಫೇಸ್ ಮಾಸ್ಕ್ ಹಾಗೂ ಹ್ಯಾರ್ ಪ್ಯಾಕ್ ಮಾಡಿ ತ್ವಚೆ ಹಾಗೂ ಕೂದಲಿನ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

ಕಿತ್ತಳೆ ರಸದ ಫೇಸ್ ಮಾಸ್ಕ್:

ಕಿತ್ತಳೆ ರಸವನ್ನು ಮುಖಕ್ಕೆ ಹಚ್ಚಿ 5 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಬೇಕು. ಈ ಫೇಸ್ ಪ್ಯಾಕ್ ಮುಖದ ತ್ವಚೆಯನ್ನು ಬಿಗಿಗೊಳಿಸುತ್ತದೆ. ಈ ಫೇಸ್ ಮಾಸ್ಕ್ ಅನ್ನು ಪ್ರತಿದಿನ ಸ್ನಾನ ಮಾಡುವ ಮೊದಲು ಮಾಡಿದರೆ ಮುಖ ದಿನವಿಡೀ ತಾಜಾತನದಿಂದ ಕೂಡಿರುತ್ತದೆ.
ಕಿತ್ತಳೆ ರಸ ಮತ್ತು ಹಾಲಿನಿಂದ ಕ್ಲೆನ್ಸಿಂಗ್ ಮಾಡುವುದು:

ಪ್ರತಿದಿನ ಮುಖವನ್ನು ಕ್ಲೆನ್ಸ್ ಮಾಡಿದರೆ ಮುಖದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸಬಹುದು. ಪ್ರತಿದಿನ ರಾತ್ರಿ ಕಿತ್ತಳೆ ರಸ ಮತ್ತು ಹಾಲನ್ನು ಮಿಶ್ರಣ ಮಾಡಿ ಹತ್ತಿಯನ್ನು ಅದರಲ್ಲಿ ಅದ್ದಿ ಅದರಿಂದ ಮುಖ ಉಜ್ಜಬೇಕು. ಈ ರೀತಿ ಮಾಡಿದರೆ ದೂಳಿನಿಂದ ಮುಖ ಹಾಳಾಗುವುದನ್ನು ತಡೆಯಬಹುದು.

ಕಿತ್ತಳೆ ಸಿಪ್ಪೆ ಮತ್ತು ಮೊಸರು:

ಈ ಫೇಸ್ ಸ್ಕ್ರಬ್ ಅನ್ನು ಮಹಿಳೆಯರು ಮಾತ್ರವಲ್ಲ ಪುರುಷರೂ ಮಾಡಬಹುದು.ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಅದನ್ನು ಅರೆದು ಮೊಸರಿನಲ್ಲಿ ಮಿಶ್ರಣ ಮಾಡಿ, ಅರ್ಧ ಚಮಚ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಬೇಕು. ನಂತರ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ರೀತಿ ವಾರಕ್ಕೊಮ್ಮೆ ಮಾಡುತ್ತಾ ಬಂದರೆ ಮುಖದಲ್ಲಿ ಕಪ್ಪುಕಲೆ, ಮೊಡವೆ ಈ ರೀತಿಯ ಸಮಸ್ಯೆಗಳು ಕಂಡು ಬರುವುದಿಲ್ಲ.

ಕಿತ್ತಳೆ ರಸ, ನಿಂಬೆ ರಸ ಮತ್ತು ಮೊಸರು:

ಈ 3 ವಸ್ತುಗಳನ್ನು ಸಮ ಪ್ರಮಾಣದಲ್ಲಿ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಬೇಕು. ಈ ರೀತಿ ಮಾಡಿದರೆ ಮುಖದ ಅಂದ ಹೆಚ್ಚಾಗುವುದು.

ಕಿತ್ತಳೆ ಸಿಪ್ಪೆ ಮತ್ತು ಓಟ್ಸ್:

ಕಿತ್ತಳೆ ಸಿಪ್ಪೆಯನ್ನು ಪೇಸ್ಟ್ ಮಾಡಿ,ಓಟ್ಸ್ ಅನ್ನು ನುಣ್ಣಗೆ ಪುಡಿ ಮಾಡಿ ಅದನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಇದರಿಂದ ಮುಖವನ್ನು ಸ್ಕ್ರಬ್ ಮಾಡಬಹುದು.

ಕೂದಲು ಉದುರುವಿಕೆ:

ಕಿತ್ತಳೆಯು ವಿಟಮಿನ್ ಸಿ ಮತ್ತು ಬಯೋಫ್ಲೋವಿನೋಡ್ಸ್ ಅನ್ನು ಯಥೇಚ್ಛವಾಗಿ ಹೊಂದಿದ್ದು ಕೂದಲಿನ ಬುಡದ ರಕ್ತಸಂಚಾರವನ್ನು ಹೆಚ್ಚಿಸುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಿ ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಕಿತ್ತಳೆಯಲ್ಲಿರುವ ಫೋಲಿಕ್ ಆಸಿಡ್ ಕೂದಲಿನ ಬೆಳವಣಿಗೆಯನ್ನು ಅಧಿಕಗೊಳಿಸುತ್ತದೆ.

ಹೇರ್ ಕಂಡೀಷನರ್:

ಜೇನಿನೊಂದಿಗೆ ಕಿತ್ತಳೆ ರಸ ಮತ್ತು ನೀರನ್ನು ಮಿಶ್ರ ಮಾಡಿಕೊಳ‍್ಳಬೇಕು. ಶ್ಯಾಂಫೂ ಮಾಡಿದ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿಕೊಂಡು 10-15 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ ನೀರಿನಿಂದ ತೊಳೆದುಕೊಳ‍್ಳಬೇಕು.

ತಲೆಹೊಟ್ಟನ್ನು ತೊಲಗಿಸುತ್ತದೆ:

ಕಿತ್ತಳೆ ಸಿಪ್ಪೆಯು ತಲೆಹೊಟ್ಟಿನ ನಿವಾರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಿತ್ತಳೆ ಸಿಪ್ಪೆ ಮತ್ತು ನಿಂಬೆ ರಸದ ಪೇಸ್ಟ್ ಮಾಡಿಕೊಂಡು ತಲೆಬುರುಡೆಗೆ ಹಚ್ಚಿಕೊಳ್ಳಿ. ಶ್ಯಾಂಪೂ ಹಾಕುವ 25 ನಿಮಿಷಕ್ಕಿಂತ ಮುಂಚೆ ಈ ವಿಧಾನವನ್ನು ಅನುಸರಿಸಿ.

ಕೂದಲನ್ನು ಸ್ವಚ್ಛಗೊಳಿಸುತ್ತದೆ:

ಕಿತ್ತಳೆ ಸಿಪ್ಪೆಯು ಕೂದಲನ್ನು ಮತ್ತು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ. ಕಿತ್ತಳೆ ಸಿಪ್ಪೆಯನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಸಿಡಬೇಕು. ಮರುದಿನ ಇದನ್ನು ಕೂದಲು ಮತ್ತು ನೆತ್ತಿಗೆ ಹಚ್ಚಿಕೊಕೊಳ‍್ಳಬೇಕು. 30 ನಿಮಿಷಗಳವರೆಗೆ ಹಾಗೆಯೇ ಬಿಟ್ಟು ನಂತರ ತೊಳೆದುಕೊಳ್ಳಿ.

ಸುಹಾನಿ ಬಡೆಕ್ಕಿಲ.

 

Tags