ಆರೋಗ್ಯಜೀವನ ಶೈಲಿ

ಸೊಂಪಾದ, ದೃಢವಾದ ಕೂದಲಿಗಾಗಿ ಬಳಸಿ ಪಾಲಾಕ್

ಎಲ್ಲ ಕಾಲದಲ್ಲೂ ಸಿಗುವ ಸೊಪ್ಪು ಎಂದರೆ ಅದು ಪಾಲಾಕ್. ಇದರಲ್ಲಿ ಕಬ್ಬಿಣಾಂಶ ಅಧಿಕವಾಗಿರುತ್ತದೆ. ಹಾಗಾಗಿ ರಕ್ತಹೀನತೆ ಇರುವವರಿಗೆ ಒಳ್ಳೆಯ ಆಹಾರ ಎಂದು ಹೇಳಬಹುದು. ಪಾಲಾಕ್ ತಿನ್ನುವುದರಿಂದ ಇನ್ನೂ ಏನೆಲ್ಲಾ ಲಾಭಗಳಿವೆ ಎಂದು ನೋಡೋಣ ಬನ್ನಿ.

*ಪಾಲಕ್‌ ಸೊಪ್ಪಿನ ಕಷಾಯವನ್ನು ಸೇವಿಸಿದರೆ ರಕ್ತ ಹೀನತೆ ನಿವಾರಣೆಯಾಗುತ್ತದೆ .

*ಹುಳು ಕಡ್ಡಿಯಾಗಿದ್ದರೆ ಒಂದು ಲೋಟ ಪಾಲಕ್‌ ಸೊಪ್ಪಿನ ರಸದ ಜೊತೆ ಒಂದು ಲೋಟ ಕ್ಯಾರೆಟ್‌ ರಸವನ್ನು ಸೇವಿಸಿದರೆ ಹುಳುಕಡ್ಡಿ ಗುಣವಾಗುತ್ತದೆ.

*ಕಾಲು ಲೋಟ ಪಾಲಕ್‌ ಸೊಪ್ಪಿನ ರಸಕ್ಕೆ ಕಾಲು ಲೋಟ ನೀರನ್ನು ಸೇರಿಸಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.

*ಸೊಂಪಾದ ಹಾಗೂ ಧೃಡವಾದ ಕೂದಲಿಗಾಗಿ 15 ರಿಂದ 20 ಪಾಲಾಕ್‌ ಎಲೆಗಳ ಜೊತೆ ಒಂದು ಚಮಚ ಜೇನುತುಪ್ಪ ಅಥವಾ ಕೊಬ್ಬರಿ ಎಣ್ಣೆ ಸೇರಿಸಿ ಕೂದಲ ಬುಡಕ್ಕೆ ಹಚ್ಚಿ ಒಂದು ಗಂಟೆ ನಂತರ ಸ್ನಾನ ಮಾಡಬೇಕು.

*ಪಾಲಕ್‌ ಸೊಪ್ಪಿನ ರಸದ ಜೊತೆ ಎಳನೀರನ್ನು ಸೇರಿಸಿ ಸೇವಿಸಿದರೆ ಮೂತ್ರ ಮಾರ್ಗದ ಸೋಂಕು ಕಡಿಮೆಯಾಗುತ್ತದೆ.

* ಪಾಲಕ್‌ ಸೊಪ್ಪಿನಲ್ಲಿರುವ ಅಂಶಗಳು ಸೋರಿಯಾಸಿಸ್‌, ತುರಿಕೆ ಮತ್ತು ಒಣಚರ್ಮವನ್ನು ತಡೆಯುತ್ತದೆ.

* ಈ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದರಿಂದ ಇದನ್ನು ನಿಯಮಿತವಾಗಿ ಸೇವಿಸಿದರೆ ಕೂದಲ ಉದುರುವಿಕೆಯನ್ನು ತಡೆಯಬಹುದು.

* ಪಾಲಕ್‌ ಸೊಪ್ಪಿನಲ್ಲಿ ವಿಟಮಿನ್‌ ಸಿ ಮತ್ತು ಎ ಇರುವುದರಿಂದ ಇವು ತ್ವಚೆಯ ಕಾಂತಿ ಹೆಚ್ಚಿಸಲು ನೆರವಾಗುತ್ತದೆ.

Tags

One Comment