ಆರೋಗ್ಯಜೀವನ ಶೈಲಿ

ರುಚಿಕರ ಮಾತ್ರವಲ್ಲದೆ, ಆರೋಗ್ಯಕ್ಕೂ ಒಳ್ಳೆಯದು ಪಪ್ಪಾಯ ಹಣ್ಣು!!

ಕ್ಯಾಲೊರಿಗಳಲ್ಲಿ ತುಂಬಾ ಕಡಿಮೆ..

ಎಲ್ಲಾ ಕಾಲದಲ್ಲೂ ಸಿಗುವ ಹಣ್ಣು ಪಪ್ಪಾಯ. ಇದರಲ್ಲಿ ವಿಟಮಿನ್ ಸಿ, ಎ, ಪೊಟ್ಯಾಶಿಯಂ ಮತ್ತು ಮೆಗ್ನೀಸಿಯಂ ಅಂಶವಿರುವುದರಿಂದ ಸರ್ವಕಾಲದ ಆರೋಗ್ಯಕರ ಹಣ್ಣು ಎನ್ನಲಾಗುತ್ತದೆ. ಇದು ತಿನ್ನಲು ಎಷ್ಟು ರುಚಿಯೋ ಅಷ್ಟೇ ದೇಹದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇನ್ನು ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳಿವೆ..

ಕೊಲೆಸ್ಟ್ರಾಲ್ ನನ್ನು ಕಡಿಮೆಗೊಳಿಸುತ್ತದೆ….

ಪಪ್ಪಾಯದಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ ಗಳು ಅಪಧಮನಿಗಳಲ್ಲಿ (ಆರ್ಟರೀಸ್) ಕೊಲೆಸ್ಟರಾಲ್ ನನ್ನು ಹೆಚ್ಚಿಸುತ್ತದೆ.. ಹೆಚ್ಚಿನ ಕೊಲೆಸ್ಟರಾಲ್ ರಚನೆ ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡ ಸೇರಿದಂತೆ ಹಲವಾರು ಹೃದ್ರೋಗಗಳಿಗೆ ಕಾರಣವಾಗಬಹುದು.

Related image

ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ

ತೂಕವನ್ನು ಕಳೆದುಕೊಳ್ಳುವವರು ತಮ್ಮ ಆಹಾರದಲ್ಲಿ ಪಪ್ಪಾಯಗಳನ್ನು ಉಪಯೋಗಿಸಬೇಕು.. ಏಕೆಂದರೆ ಇದರಲ್ಲಿ ಕ್ಯಾಲೊರಿಗಳಲ್ಲಿ ತುಂಬಾ ಕಡಿಮೆ. ಪಪ್ಪಾಯದಲ್ಲಿನ ಫೈಬರ್ ಅಂಶವು ತೂಕವನ್ನು ಸುಲಭವಾಗಿ ಕಡಿಮೆ ಮಾಡುವಂತೆ  ಮಾಡುವುದಲ್ಲದೆ,  ಕರುಳಿನ ಚಲನೆಯನ್ನು ತೆರವುಗೊಳಿಸುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗನಿರೋಧಕ ವ್ಯವಸ್ಥೆಯು ವಿವಿಧ ಸೋಂಕುಗಳ ವಿರುದ್ಧ ಕಾರ್ಯನಿರ್ವಹಿಸುತ್ತದೆ.. ಇನ್ನು ಪಪ್ಪಾಯದಲ್ಲಿ ದೈನಂದಿನ ಅಗತ್ಯ ವಿಟಮಿನ್ ಸಿ ಯ 200% ಗಿಂತಲೂ ಹೆಚ್ಚಿನ ಪ್ರಮಾಣವನ್ನು ಹೊಂದಿರುತ್ತದೆ, ಇದು ವಿವಿಧ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ..

Related image

ಮಧುಮೇಹಕ್ಕೆ ಒಳ್ಳೆಯದು

ಪಪ್ಪಾಯವು ಮಧುಮೇಹಕ್ಕೆ ಉತ್ತಮವಾದ ಆಹಾರ, ಇದು ಕಡಿಮೆ ಸಕ್ಕರೆ ಅಂಶವನ್ನು ಹೊಂದಿದ್ದು, ಡಯಾಬಿಟಿಸ್ ಹೊಂದಿದ ಜನರು, ಮಧುಮೇಹ ತಡೆಗಟ್ಟಲು ಪಪ್ಪಾಯಿ ಸೇವಿಸಬಹುದು.

ಪಪ್ಪಾಯ ತ್ವಚೆಗೆ ಒಳ್ಳೆಯದು

ತ್ವಚೆಗೆ ಹೊಂದುವಂತಹ ಪಪ್ಪಾಯ ಫೇಸ್ ಪ್ಯಾಕ್ ಹಾಕಿ ಸತ್ತ ಜೀವಕೋಶಗಳನ್ನು ಹೊಗಲಾಡಿಸಿ ಮುಖದಲ್ಲಿ ಹೊಳಪು ಹೆಚ್ಚಿಸಿಕೊಳ್ಳಲು ಪಪ್ಪಾಯ ಸಹಾಯ ಮಾಡುತ್ತದೆ. ಹಾಗಾಗಿಯೇ ಬ್ಯೂಟಿಪಾರ್ಲರ್‌ಗಳಲ್ಲಿ ಹೆಚ್ಚಾಗಿ ಪಪ್ಪಾಯ ಹಣ್ಣಿನ ಫೇಸ್‌ಪ್ಯಾಕ್ ಬಳಸುತ್ತಾರೆ.

 

Tags