ಆರೋಗ್ಯಜೀವನ ಶೈಲಿ

ಆರೋಗ್ಯಕ್ಕೆ ಪಪ್ಪಾಯಿ ಹಣ‍್ಣು….

ಪಪ್ಪಾಯಿ ಹಣ‍್ಣಿನಲ್ಲಿರುವ ಹಲವಾರು ಒಳ‍್ಳೆಯ ಗುಣಗಳಿಂದಾಗಿ ಇದು ಪ್ರಪಂಚಾದ್ಯಂತ ಜನಪ್ರಿಯವಾಗಿದೆ..

ಪಪ್ಪಾಯಿ ತಿನ್ನುವ ದೊಡ್ಡ ಲಾಭವೆಂದರೆ ಅದರಿಂದ ಜೀರ್ಣಕ್ರಿಯನ್ನು ಚೆನ್ನಾಗಿ ಮಾಡುತ್ತದೆ

ಹೆಚ್ಚಿನ ಹಣ್ಣುಗಳಲ್ಲಿ ವಿಟಮಿನ್, ಪ್ರೋಟೀನ್, ಕಾರ್ಬೋಹೈಡ್ರೇಟ್ಸ್, ಕ್ಯಾಲ್ಸಿಯಂ, ಮೆಗ್ನಿಶಿಯಂ, ಕಬ್ಬಿಣಾಂಶ ಮತ್ತು ಇತರ ಕೆಲವೊಂದು ಪೋಷಕಾಂಶಗಳಿವೆ. ಕೆಲವೊಂದು ಹಣ್ಣುಗಳು ದ್ವಿಪಾತ್ರದಲ್ಲಿ ಕೆಲಸ ಮಾಡುತ್ತವೆ. ಇಂತಹ ಜಾತಿಗೆ ಸೇರುವ ಹಣ್ಣುಗಳಲ್ಲಿ ಪಪ್ಪಾಯಿ ಕೂಡ ಒಂದಾಗಿದೆ.

ಪಪ್ಪಾಯಿ ಹಣ‍್ಣನ್ನು ತಿಳಿಯದವರೇ ಇಲ್ಲ. ಇದು ಹೆಚ್ಚಿನವರಿಗೆ ಅಚ್ಚುಮೆಚ್ಚಿನ ಹಣ‍್ಣು. ಪಪ್ಪಾಯಿ ಹಣ‍್ಣಿನಲ್ಲಿರುವ ಹಲವಾರು ಒಳ‍್ಳೆಯ ಗುಣಗಳಿಂದಾಗಿ ಇದು ಪ್ರಪಂಚಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಅಷ್ಟೇ ಅಲ್ಲದೆ, ಪಪ್ಪಾಯಿ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುವುದರ ಜೊತೆಗೆ ಕೆರೋಟಿನ್‌ಗಳು, ವಿಟಮಿನ್ ಸಿ ಮತ್ತು ಫ್ಲಾವೊನಾಯ್ಡ್‌ಗಳಂತಹ ಪೋಷಕಾಂಶಗಳು ಸಹ ಅಧಿಕ ಪ್ರಮಾಣದಲ್ಲಿರುವುದರಿಂದ, ಇದು ಆರೋಗ್ಯ ಮತ್ತು ಸೌಂದರ್ಯದ ಪ್ರಯೋಜನಗಳನ್ನು ದೇಹಕ್ಕೆ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಹಣ್ಣಿನ ತಿರುಳನ್ನು ಮುಖಕ್ಕೆ ಫೇಶಿಯಲ್ ಆಗಿ ಮತ್ತು ಕ್ರೀಮ್ ಆಗಿ ಹಾಗು ವಿವಿಧ ಬಗೆಯ ಶಾಂಪೂವಾಗಿ ಸಹ ಬಳಸಲಾಗುತ್ತಿದೆ

Image result for papaya

ಜೀರ್ಣಕ್ರಿಯೆಗೆ ಬಹಳ ಉತ್ತಮ

ಪಪ್ಪಾಯಿ ತಿನ್ನುವ ದೊಡ್ಡ ಲಾಭವೆಂದರೆ ಅದರಿಂದ ಜೀರ್ಣಕ್ರಿಯನ್ನು ಚೆನ್ನಾಗಿ ಮಾಡುತ್ತದೆ. ಇದರಲ್ಲಿನ ಪಪೈನ್ ಎನ್ನುವ ಕಿಣ್ವವು ಜೀರ್ಣ ಕ್ರಿಯೆಗೆ ಉತ್ತಮ ಪರಿಣಾಮವನ್ನು ಉಂಟುಮಾಡುತ್ತದೆ. ಪಪ್ಪಾಯಿ ನಿಯಮಿತವಾಗಿ ತಿನ್ನುವುದರಿಂದ ಹೊಟ್ಟೆಯ ಕೆಲವೊಂದು ಸಣ್ಣಪುಟ್ಟ ರೋಗಗಳನ್ನು ಗುಣಪಡಿಸುತ್ತದೆ. ಕ್ಯಾನ್ಸರ್ ರೋಗ ವಿರುದ್ಧ ಹೋರಾಡುವ ಶಕ್ತಿ ಇದಕ್ಕಿದೆ. ಇದು ಎಲ್ಲಾ ರೀತಿಯ ಕ್ಯಾನ್ಸರ್ ಗಳನ್ನು ತಡೆಯಲು ಪರಿಣಾಮಕಾರಿಯಾಗಿದೆ. ಅದರಲ್ಲಿ ಮೇಧೋಜೀರಕ ಗ್ರಂಥಿ ಮತ್ತು ಸ್ತನದ ಕ್ಯಾನ್ಸರ್ ವಿರುದ್ಧ ಇದು ಹೆಚ್ಚು ಪರಿಣಾಮಕಾರಿ. ಕ್ಯಾನ್ಸರ್ ಗೆ ಬಳಸುವ ಕೆಲವೊಂದು ಔಷಧಿಗಳು ಪಪ್ಪಾಯಿಯನ್ನು ಮೂಲ ಅಂಶವಾಗಿ ಬಳಸುತ್ತಿದೆ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.

ಮುಖದ ಕಾಂತಿ ಹೆಚ್ಚಿಸುವಲ್ಲಿ ಪಪ್ಪಯಿ ಎತ್ತಿದ ಕೈ

ಈ ಹಣ್ಣು ತ್ವಚೆಗೆ ಅವಶ್ಯಕವಾದಂತಹ ಪೋಷಕಾಂಶವನ್ನು ಒದಗಿಸುವುದರ ಜೊತೆಗೆ, ತ್ವಚೆಯಲ್ಲಿರುವ ನಿರ್ಜೀವ ಜೀವ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ತ್ವಚೆಗೆ ತಕ್ಷಣ ತಾಜಾತನವನ್ನು ನೀಡುತ್ತದೆ. ಅಲ್ಲದೆ, ಇದರಲ್ಲಿರುವ ಶುದ್ಧೀಕರಣ ಗುಣಗಳಿಂದ ನಿಮ್ಮ ಚರ್ಮದಲ್ಲಿರುವ ಕಲ್ಮಶಗಳನ್ನು ತೆರವುಗೊಳಿಸಲು ಸಹಾಯಮಾಡುತ್ತದೆ, ಹಾಗೂ ಇದರಲ್ಲಿರುವ ವಿಟಮಿನ್ ಸಿ ಚರ್ಮದ ಜೀವಕೋಶಗಳನ್ನು ಬಿಸಿಲಿನ ಹೊಡೆತದಿಂದ ರಕ್ಷಿಸುತ್ತದೆ. ಮೊಡವೆ, ಗುಳ್ಳೆ ಹಾಗೂ ಚರ್ಮದ ಇತರ ಕೆಲವೊಂದು ಸಮಸ್ಯೆಗಳಿಗೆ ಪಪ್ಪಾಯಿ ಅತ್ಯುತ್ತಮ ಔಷಧಿಯಾಗಿದೆ.

ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸುತ್ತದೆ

ವಿಟಮಿನ್ ಎ ಮತ್ತು ಸಿ ಉತ್ತಮ ಪ್ರಮಾಣದಲ್ಲಿರುವ ಪಪ್ಪಾಯಿ ಜ್ಯೂಸ್ ದಿನಾ ಸೇವಿಸುವುದರಿಂದ ದೃಷ್ಟಿನರದ ಪೋಷಣೆಗೆ ನೆರವಾಗುತ್ತದೆ. ತನ್ಮೂಲಕ ಕಣ್ಣಿನ ಆರೋಗ್ಯ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ. ಅಂತೆಯೇ ಕಣ್ಣಿನ ದೃಷ್ಟಿದೋಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಿವಾರಿಸಲು ಸಹಾಯ ಮಾಡುತ್ತದೆ..

ವಯಸ್ಸಾಗುವಿಕೆಯ ಚಿಹ್ನೆಗಳನ್ನು ತಗ್ಗಿಸುತ್ತದೆ

ಈ ಹಣ್ಣಿನಲ್ಲಿರುವ ಆಲ್ಫಾ ಹೈಡ್ರಾಕ್ಸಿಲ್ ಆಮ್ಲಗಳು ವಯಸ್ಸಾಗುವ ಚಿಹ್ನೆಗಳನ್ನು, ಉದಾಹರಣೆಗೆ ಚರ್ಮದ ಸುಕ್ಕುಗಳು ಮತ್ತು ಗೆರೆಗಳು ಇವುಗಳನ್ನು ತಡೆಯಲು ಸತ್ತ ಚರ್ಮದ ಜೀವಕೋಶಗಳನ್ನು ಕರಗಿಸಲು ಸಹಾಯಮಾಡುತ್ತದೆ. ಅಲ್ಲದೆ ಹಣ್ಣಿನಲ್ಲಿರುವ ಆಲ್ಫಾ ಹೈಡ್ರಾಕ್ಸಿಲ್ ಆಮ್ಲಗಳು ವಯಸ್ಸಾಗುವ ಚಿಹ್ನೆಗಳನ್ನು, ಉದಾಹರಣೆಗೆ ಚರ್ಮದ ಸುಕ್ಕುಗಳು ಮತ್ತು ಗೆರೆಗಳು ಇವುಗಳನ್ನು ತಡೆಯಲು ಸತ್ತ ಚರ್ಮದ ಜೀವಕೋಶಗಳನ್ನು ಕರಗಿಸಲು ಸಹಾಯಮಾಡುತ್ತದೆ.

 

Tags

Related Articles