ಜೀವನ ಶೈಲಿಫ್ಯಾಷನ್ಸೌಂದರ್ಯ

ಸಾಗರಿಯ ಕಿವಿಯಲ್ಲಿ ರೆಕ್ಕೆ ಪುಕ್ಕದ ಚಿತ್ತಾರ…!!!

ಬೆಂಗಳೂರು, ಮಾ.13:

ಪ್ರತಿದಿನವೂ ಬದಲಾಗುತ್ತಿರುವ ಫ್ಯಾಷನ್ ಅನ್ನು ಇಷ್ಟ ಪಡದವರಾರು ಹೇಳಿ? ಆಗಾಗ ಬರುತ್ತಿರುವ ಹೊಸ ಹೊಸ ಟ್ರೆಂಡ್ ಗಳಿಗೆ ತುಂಬಾ ಬೇಗ ಫ್ಯಾಷನ್ ಪ್ರಿಯರು ಅಪ್ ಡೇಟ್ ಆಗಿ ಬಿಡುತ್ತಾರೆ‌. ಅದರಲ್ಲಿ ಕಿವಿಯೋಲೆಯೂ ಒಂದು. ಹೊಸ ರೀತಿಯ ಕಿವಿಯೋಲೆಗಳನ್ನು ಹಾಕಿಕೊಂಡರೆ ಸಾಕು, ತಾನು ಕೂಡಾ ಅದನ್ನು ತೆಗೆದು, ಧರಿಸಿ ಕನ್ನಡಿ ಮುಂದೆ ನಿಲ್ಲುವ ತನಕ ಆಕೆಗೆ ಸಮಾಧಾನವಿಲ್ಲ. ತಮ್ಮ ಬಳಿ ಎಷ್ಟೇ ರೀತಿಯ ಕಿವಿಯೋಲೆಗಳಿದ್ದರೂ ಹೊಸ ಫ್ಯಾಷನ್ ​ನತ್ತ ಅವರ ಆಕರ್ಷಣೆ ಕಡಿಮೆಯಾಗುವುದೇ ಇಲ್ಲ. ಜುಮಕಿ, ಹ್ಯಾಂಗಿಂಗ್ಸ್, ಸ್ಟಡ್, ಕಫ್ ಇಯರಿಂಗ್ ಹೀಗೆ ಸಾವಿರಾರು ಸ್ಟೈಲ್​ ನ ಕಿವಿಯೋಲೆಗಳು ಮಹಿಳೆಯರೆಲ್ಲರ ಕಿವಿಗಳನ್ನು ಅಲಂಕರಿಸುತ್ತಿವೆ.ಇತ್ತೀಚಿನ ದಿನಗಳಲ್ಲಿ ಲಲನಾ ಮಣಿಯರ ಕಿವಿಯಲ್ಲಿ ರೆಕ್ಕೆ-ಪುಕ್ಕಗಳು ಜೋತಾಡುತ್ತಿರುವುದನ್ನು ನೋಡಿರಬಹುದು. ಹೆಣ್ಮಕ್ಕಳ ಪಾಲಿಗೆ ಅದು ಬರಿಯ ರೆಕ್ಕೆ ಪುಕ್ಕವಲ್ಲ!! ಬದಲಿಗೆ ಅದು  ಫೆದರ್ ಇಯರಿಂಗ್​!!! ಹೌದು. ಪ್ಯಾಷನ್ ಲೋಕದಲ್ಲಿ ಫೆದರ್ ರಿಂಗ್ ಗಳು ಟ್ರೆಂಡ್ ಆಗಿ ಗುರುತಿಸಿಕೊಂಡಾಗಿದೆ. ನಾನಾ ನಮೂನೆಯ ಬಣ್ಣದ ಗರಿಗಳ ಇಯರಿಂಗ್ ಮಾರುಕಟ್ಟೆಯಲ್ಲಿ ಲಭ್ಯ. ಮುಖ್ಯವಾದ ವಿಚಾರವೆಂದರೆ ಇದು ಎಲ್ಲ ರೀತಿಯ ಡ್ರೆಸ್ ​ಗೂ ಹೊಂದುತ್ತದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಕೇವಲ ರೆಕ್ಕೆ ಪುಕ್ಕದ ಇಯರಿಂಗ್ ಗಳಿಗಿಂತ ನವಿಲುಗರಿಯ ಇಯರಿಂಗ್ ಗೆ ಮನಸೋತ ನಾರಿಯರೇ ಹೆಚ್ಚು. ಅಂದದ ನವಿಲುಗರಿಯ ವಿನ್ಯಾಸದ ಇಯರಿಂಗ್ ಧರಿಸಿ ಕನ್ನಡಿ ಮುಂದೆ ನಿಂತರೇ ಸಾಕು, ತನ್ನಷ್ಟು ಚೆಂದ ಬೇರೆ ಯಾರಿರಲು ಸಾಧ್ಯ ಎಂಬ ಫೀಲ್ ಆಕೆಗೆ!! ಒಂದು ಕ್ಷಣ ಕ್ರೇಜಿ ಸ್ಟಾರ್ ನ ಹೇ ನವಿಲೇ, ಹೆಣ್ಣವಿಲೇ.. ಆ ಸೌಂದರ್ಯ ಲೋಕದಿಂದ ಜಾರಿದೆ ಹಾಡು ನೆನಪಾದರೂ ಆದೀತು..ಫೆದರ್ ಹ್ಯಾಂಗಿಂಗ್ಸ್​ ಗಳನ್ನು ಜೀನ್ಸ್ – ಟಾಪ್, ಶರ್ಟ್, ಸ್ಕರ್ಟ್, ಸಲ್ವಾರ್, ಫ್ಯಾನ್ಸಿ ಸೀರೆಗಳ ಜತೆಗೆ ತುಂಬಾ ಚೆನ್ನಾಗಿ ಮ್ಯಾಚ್ ಆಗುತ್ತದೆ.  ಹ್ಯಾಂಗಿಗ್ಸ್ ಗಳಾದರೂ ಇವುಗಳು ತುಂಬಾ  ಹಗುರ. ಆದ ಕಾರಣ ಇವುಗಳನ್ನು ಧರಿಸಿದಾಗ ಹೆವಿ ಅನಿಸುವುದಿಲ್ಲ.

ನವಿಲುಗರಿಯ ಇಯರಿಂಗ್ ಧರಿಸಿ ತಾನೇ ನವಿಲು ಎಂದು ಬೀಗುವ ಲಲನೆಯರು ಮರೆಯದೇ ನೆನಪಿಟ್ಟುಕೊಳ್ಳಬೇಕಾದ ಒಂದು ಸಂಗತಿಯಿದೆ. ಯಾವುದೇ ಕಾರಣಕ್ಕೂ ನೀರಿಗೆ ತಾಗಿಸಬೇಡಿ.  ನೀರಿಗೆ ತಾಗಿದರೆ ಅವು ಅಂಟಿಕೊಂಡು ಕೆಟ್ಟದಾಗಿ ಕಾಣುತ್ತದೆ. ಒಂದು ವೇಳೆ ಡಾರ್ಕ್ ಬಣ್ಣದ ಇಯರಿಂಗ್ ಆಗಿದ್ದರೆ ಬಣ್ಣ ಬಿಟ್ಟು ಅವಾಂತರವಾಗುವ ಸಾಧ್ಯತೆಯೂ ಇದೆ. ಇದರ ಬಗ್ಗೆ ಗಮನವಿರಲಿ.

– ಅನಿತಾ ಬನಾರಿ

ಕಿರುತೆರೆಯ ಶ್ವೇತ ಸುಂದರಿ ‘ಆಶಿತಾ’

#hearing #newstyles #hearingdesigns #balkaninews #peacockfetherhearings #lifestyles

Tags