ಆರೋಗ್ಯಆಹಾರಜೀವನ ಶೈಲಿ

ಸುಲಭವಾಗಿ, ಸರಳವಾಗಿ ಮಾಡಿ ಸವಿ ಸವಿ ಸಜ್ಜೆ ಹಲ್ವ

ಬೆಂಗಳೂರು, ಫೆ.03:

ಸಜ್ಜೆ ಭಾರತದ ಆಹಾರ ಮತ್ತು ಮೇವಿನ ಬೆಲೆಯಾಗಿದೆ. ಇದನ್ನು ಹರಿಯಾಣ, ಗುಜರಾತ್‍, ಮಹಾರಾಷ್ಟ್ರ, ರಾಜಸ್ತಾನಗಳಲ್ಲಿ ಬೆಳೆಯುತ್ತಾರೆ. ಅಕ್ಕಿ, ಗೋಧಿ, ಬೆಳೆಯಲಾಗದ ಒಣ ಪ್ರದೇಶದಲ್ಲಿ ಕಡಿಮೆ ಖರ್ಚಿನಲ್ಲಿ ಬೆಳೆಯಲಾಗುತ್ತದೆ. ಇದನ್ನು ಪರಲ್‍ ವಿಲ್ಲೆಟ್‍, ಬಾಜ್ರ ಎಂದೂ ಕರೆಯುತ್ತಾರೆ. ಇದರಲ್ಲಿ ಸಸಾರಜನಕ ಮತ್ತು ಕಬ್ಬಿಣಾಂಶ ಹೇರಳವಾಗಿ ಲಭಿಸುತ್ತದೆ.

ಹಲ್ವ ಎಂದರೆ ಎಲ್ಲರ ಬಾಯಲ್ಲೂ ನೀರೂರಿಸುವ ಸಿಹಿ ಖಾದ್ಯ. ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಹೀಗಿವೆ:

ಸಜ್ಜೆ ಹಿಟ್ಟು – 1 ಕಪ್‍

ಬೆಲ್ಲದ ಪುಡಿ ಅಥವಾ ಕಲ್ಲುಸಕ್ಕರೆ ಪುಡಿ – 1 ಕಪ್‍

ಏಲಕ್ಕಿ ಪುಡಿ – 1 ಟೀ ಚಮಚ

ಗೋಡಂಬಿ, ದ್ರಾಕ್ಷಿ – ಸ್ವಲ್ಪ

ತುಪ್ಪ – ಸ್ವಲ್ಪ

ಮಾಡುವ ವಿಧಾನ:

ಬಾಣಲೆಗೆ 1 ಚಮಚ ತುಪ್ಪ ಹಾಕಿ ಸಜ್ಜೆಯ ಹಿಟ್ಟನ್ನು ಹುರಿಯಿರಿ. 3 ಕಪ್‍ ನೀರಿಗೆ 1 ಕಪ್‍ ಕಲ್ಲುಸಕ್ಕರೆ ಪುಡಿ ಸೇರಿಸಿ. ಇದಕ್ಕೆ ನಿಧಾನವಾಗಿ ಸಜ್ಜೆ ಹಿಟ್ಟನ್ನು ಹಾಕಿ. ಉಂಡೆ ಅಥವಾ ಗಂಟು ಬಾರದಂತೆ 8-10 ನಿಮಿಷ ಕಲೆಸಿ. ಮಧ್ಯದಲ್ಲಿ 1 ಚಮಚ ತುಪ್ಪ ಮತ್ತು ಏಲಕ್ಕಿ ಪುಡಿ ಹಾಕಿದರೆ ಸಜ್ಜೆ ಹಲ್ವ ರೆಡಿ.

ಬೆಲ್ಲದ ಹಲ್ವ ತಯಾರಿಸಲು ಬೆಲ್ಲದ ಪಾಕ ಮಾಡಿಕೊಳ್ಳಬೇಕು. ಹುರಿದ ಸಜ್ಜೆ ಹಿಟ್ಟನ್ನು ಬೆಲ್ಲದ ಪಾಕದಲ್ಲಿ ಮಿಶ್ರಣ ಮಾಡಿದರೆ, ಬಿಸಿಯಾದ ಬೆಲ್ಲದ ಸಜ್ಜೆ ಹಲ್ವ ಸಿದ್ಧ. ಅಂತಿಮವಾಗಿ ದ್ರಾಕ್ಷಿ, ಗೋಡಂಬಿ, ಕಿಸಿಮಿಸ್‍ ಹಾಕಿ ಅಲಂಕರಿಸಿ.

ಈ ಬಾರಿಯ ದೀಪಾವಳಿಗೆ ಸುಲಭವಾಗಿ ಮಾಡಬಹುದಾದ ವಿಶೇಷವಾದ ತಿನಿಸು, ಒಮ್ಮೆ ಟ್ರೈ ಮಾಡಿ ನೋಡಿ

#Pearlmillethalwa #sajjehalwa #healthyfoods #sweetfoods #millethalwa #balkaninews

Tags

Related Articles