ಜೀವನ ಶೈಲಿಫ್ಯಾಷನ್ಸೌಂದರ್ಯ

ಕಾಲುಗಳ ಅಂದ ಹೆಚ್ಚಿಸುವ ಪೆಡಿಕ್ಯೂರ್

ಬೆಂಗಳೂರು, ಮಾ.26:

ಸೌಂದರ್ಯ ಎಂದರೆ ಕೇವಲ ಮುಖದ ಸೌಂದರ್ಯ ಮಾತ್ರವಲ್ಲ. ಎಲ್ಲಾ ಅಂಗಾಂಗಗಳು ಸ್ವಚ್ಛ, ಸುಂದರವಾಗಿದ್ದರೆ ಮಾತ್ರ ಸೌಂದರ್ಯಕ್ಕೊಂದು ಅರ್ಥ. ಅಂಗಾಂಗ ಯಾವುದೇ ಆಗಿರಲಿ, ಅದಕ್ಕೆ ಅದರದೇ ಆದ ಆರೈಕೆ ಅಗತ್ಯ. ಹಾಗೆಯೇ ದೇಹದ ಆಧಾರಸ್ತಂಭವಾದ ಕಾಲು ಮತ್ತು ಅಂದದ ಕೈಗಳಿಗೂ ಕೂಡ ಪ್ರತ್ಯೇಕವಾದ ಆರೈಕೆಯಿದೆ. ಆದರೆ ಕೆಲಸದ ಬಿಡುವಿನಲ್ಲಿ ಕೆಲವರು ಅದನ್ನು ಮರೆತರೆ, ಇನ್ನು ಕೆಲವರಿಗೆ ಕೈಕಾಲುಗಳಿಗೇಕೆ ಆರೈಕೆ ಎಂಬ ತಾತ್ಸಾರ. ಇನ್ನು ಕೆಲವರಿಗೆ ಅದರ ಆರೈಕೆಯ ಬಗ್ಗೆ ಗೊತ್ತಿರುವುದಿಲ್ಲ.

ಉಗುರುಗಳಲ್ಲಿ ಮಣ್ಣು ಮತ್ತು ಕೊಳೆ ತುಂಬಿಕೊಂಡರೆ ಮುಗಿಯಿತು, ಸಹಿಸಲಾರದ ನೋವು ಕಾಣಿಸಿಕೊಳ್ಳುತ್ತದೆ. ನೋವು ವಿಪರೀತವಾದರೆ ಸೋಂಕು ತಗಲುವ ಸಾಧ್ಯತೆ ಅಧಿಕ. ಕೀವು, ಕೆಟ್ಟ ವಾಸನೆ, ಇಡೀ ದಿನ ಸಿಡಿತ, ಕೊನೆಗೆ ಹೆಜ್ಜೆ ಇಡಲು ಆಗದಂತ ಸ್ಥಿತಿ ಮುಂತಾದ ತೊಂದರೆಗಳಿಗೆ ಬಲಿಯಾಗಬೇಕಾದೀತು. ಅದರಿಂದ ಕಾಪಾಡಿಕೊಳ್ಳಲು ಇರುವಂತಹ ಸುಲಭ ಪರಿಹಾರವೆಂದರೆ ಪೆಡಿಕ್ಯೂರ್ ಮತ್ತು ಮೆನಿಕ್ಯೂರ್.

ಕೈಕಾಲು ಅಂದವಾಗಿರಬೇಕು ಅಂದ ಮಾತ್ರಕ್ಕೆ ಉಗುರುಗಳನ್ನು ಕತ್ತರಿಸುವುದು ಮಾತ್ರವಲ್ಲ. ಬದಲಿಗೆ ಪೆಡಿಕ್ಯೂರ್ ಗೆ ಮೊರೆ ಹೋದರೆ ಕೈ ಕಾಲುಗಳ ಅಂದವನ್ನು ಇಮ್ಮಡಿಗೊಳಿಸಬಹುದು. ಇದರಿಂದ ಕೈ ಕಾಲುಗಳು ಆರೋಗ್ಯದಿಂದ ಇರುವುದು ಮಾತ್ರವಲ್ಲದೆ ಸೌಂದರ್ಯವು ಜಾಸ್ತಿಯಾಗುತ್ತದೆ.

ಪೆಡಿಕ್ಯೂರ್ನಲ್ಲಿ ಹಲವು ವಿಧಗಳಿವೆ.

* ಬಿಸಿ ನೀರಿನ ಪೆಡಿಕ್ಯೂರ್ : ಬಕೆಟ್ ಗೆ ಕಾಲು ಹಾಕಲು ಸಾಧ್ಯವಾದಷ್ಟು ಬಿಸಿಯಾದ ನೀರನ್ನು ಹಾಕಿ ಅದಕ್ಕೆ ಸುಗಂಧಭರಿತ ಎಣ್ಣೆ ಮತ್ತು ಉಪ್ಪು ಹಾಕಿ ಅದರಲ್ಲಿ ಕಾಲುಗಳನ್ನು ಇಡಬೇಕು. ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಡಿ. ನಂತರ ಕಾಲನ್ನು ಸ್ಕ್ರಬ್ ಮಾಡಬೇಕು. ಇದರಿಂದ ಕೊಳೆ ಮಾಯವಾಗುತ್ತದೆ.

* ಪ್ಲೋರಲ್ ಪೆಡಿಕ್ಯೂರ್ : ನೀರಿನಲ್ಲಿ ಕಾಲುಗಳನ್ನು ನೆನಸುವ ಮೊದಲು ಅದಕ್ಕೆ ಸುವಾಸನೆಯುಳ್ಳ ಹೂವುಗಳನ್ನು ಹಾಕುತ್ತಾರೆ. ಹೂಗಳಿಂದ ಪಾದಗಳು ಮೃದುವಾಗುತ್ತದೆ.

* ಫಿಶ್ ಪೆಡಿಕ್ಯೂರ್ : ಅಕ್ವೇರಿಯಂ ನಲ್ಲಿ ಕಾಲುಗಳನಿಟ್ಟು ಕೂರಬೇಕು. ಮೀನುಗಳು ಕಾಲಿನಲ್ಲಿರುವ ಕೊಳೆಗಳನ್ನು ಮತ್ತು ಸತ್ತ ಚರ್ಮಗಳನ್ನು ತಿನ್ನುತ್ತದೆ. ಇದರಿಂದ ಕಾಲುಗಳಲ್ಲಿರುವ ಬ್ಯಾಕ್ಟೀರಿಯಾ ನಾಶವಾಗಿ ಕಾಲಿನ ಶುಚಿತ್ವ ಹೆಚ್ಚುತ್ತದೆ.

ಕೈ ಕಾಲುಗಳ ಅಂದ ಹೆಚ್ಚಿಸುವ ಪೆಡಿಕ್ಯೂರ್ ಅನ್ನು ಕಡೇ ಪಕ್ಷ ತಿಂಗಳಿಗೊಮ್ಮೆ ಮಾಡಿದರೆ ಒಳ್ಳೆಯದು. ಕೆಲವರಿಗೆ ಅದನ್ನು ಮಾಡಿಸಿಕೊಳ್ಳುವ ಮನಸ್ಸಿದ್ದರೆ, ಅದಕ್ಕಾಗೀ ಬ್ಯೂಟಿಪಾರ್ಲರ್ ಗೆ ಅಲೆಯಲು ಇಷ್ಟವಿರುವುದಿಲ್ಲ. ಹಾಗಾಗಿ ಅದರಿಂದ ಕೊಂಚ ದೂರವಿರುತ್ತಾರೆ. ಆದರೆ ಪೆಡಿಕ್ಯೂರ್ ಅನ್ನು ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದು. ಇದು ತುಂಬಾ ಕಷ್ಟದ ಕೆಲಸವೇನಲ್ಲ.

* ಮೊದಲಿಗೆ ಕೈ ಕಾಲುಗಳಿಗೆ ಹಚ್ಚಿರುವಂತಹ ಬಣ್ಣಗಳನ್ನು ತೆಗೆಯಬೇಕು. ನಂತರ ನೀಟಾಗಿ ಉಗುರುಗಳನ್ನು ಕತ್ತರಿಸಬೇಕು. ಉಗುರು ಕತ್ತರಿಸುವಾಗ ಅಡ್ಡದಿಡ್ಡಿ ಆದರೆ ಕಾಲಿನ ಅಂದ ಹಾಳಾಗುತ್ತದೆ.

* ನಂತರ ಸ್ಕ್ರಬ್ ಸಹಾಯದಿಂದ ಕಾಲಿನ ಒಣಚರ್ಮಗಳನ್ನು ತಿಕ್ಕಿ ತೆಗೆಯಬೇಕು.

* ಒಳ್ಳೆಯ ಕ್ರೀಮ್ ನಿಂದ ಕಾಲುಗಳನ್ನು ಚೆನ್ನಾಗಿ ಮಾಲಿಶ್ ಮಾಡಿಕೊಳ್ಳಬೇಕು.

*  ಟಬ್ ಗೆ ಉಗುರು ಬೆಚ್ಚಗೆ ನೀರು ಹಾಕಿ, ಅದಕ್ಕೆ ಚಿಡಿಕೆ ಉಪ್ಪು ಮತ್ತು ಸುಗಂಧಯುಕ್ತವಾದ ಎಣ್ಣೆ ಹಾಕಿ ಅದರಲ್ಲಿ ಕಾಲು ಮತ್ತು ಕೈಗಳನ್ನು ನೆನೆಸಿಡಬೇಕು. ಹತ್ತರಿಂದ ಹದಿನೈದು ನಿಮಿಷ ಹಾಗೆ ಇಡಬೇಕು.

* ನೀರಿನಲ್ಲಿ ನೆನೆದ ಕಾರಣ ಕಾಲಿನ ಹಿಮ್ಮಡಿಯ ಒಣಚರ್ಮ ಮೆತ್ತನೆಯಾಗಿರುತ್ತದೆ. ಫ್ಯೂಮಿಕ್ ಸ್ಟೋನ್ ಹಾಕಿ ಹಿಮ್ಮಡಿಯನ್ನು ತಿಕ್ಕಿ ಒಣಚರ್ಮವನ್ನು ತೆಗೆಯಬೇಕು.

* ಕೊನೆಗೆ ಟವೆಲ್ ನಿಂದ ಕಾಲುಗಳನ್ನು ಚೆನ್ನಾಗಿ ಉಜ್ಜಿಕೊಂಡು, ನೈಲ್ ಪಾಲಿಶ್ ಹಾಕಿದರೆ ಆಯಿತು.

ಅನಿತಾ ಬನಾರಿ

ಕಿತ್ತಳೆ ಹಣ‍್ಣಿನ ಫೇಸ್ ಪ್ಯಾಕ್ ಮತ್ತು ಹೇರ್ ಪ್ಯಾಕ್

#pedicure #pedicureimages #pedicuredesings #pedicurekit #pedicurechair #pedicuretreatment

Tags