ಆರೋಗ್ಯಆಹಾರಜೀವನ ಶೈಲಿ

ಪುದಿನಾ ಎಲೆಯಿಂದ ಆಗುವ ಹತ್ತು ಹಲವು ಉಪಯೋಗಗಳು

ನಾವುಗಳ ದಿನನಿತ್ಯದ ಆಹಾರದಲ್ಲಿ ಬಳಸಲ್ಪಡುವ ಸೊಪ್ಪುಗಳಲ್ಲಿ ಪುದಿನಾ ಸಹ ಒಂದು. ಇದು ಅಡುಗೆಯ ರುಚಿ ಹೆಚ್ಚಿಸುವುದರ ಜೊತೆಗೆ ಒಳ್ಳೆಯ ಸುವಾಸನೆ ನೀಡುತ್ತದೆ. ಭಾರತೀಯ ಆಹಾರ ಪದ್ಧತಿಯಲ್ಲಿ ಬಳಕೆಯಾಗುವ ಎಷ್ಟೋ ಪದಾರ್ಥಗಳು ಆರೋಗ್ಯದ ದೃಷ್ಟಿಯಿಂದ ತುಂಬಾ ಮಹತ್ವ ಹೊಂದಿರುತ್ತವೆ.

ಅಂದಹಾಗೆ ಪುದಿನಾ ಫ್ಲೇವರ್ ಇರುವ ಟೂಥ್ ಪೇಸ್ಟ್, ಚಾಕೊಲೇಟ್ ಮತ್ತು ಚೂಯಿಂಗ್ ಗಮ್ ಸೇರಿದಂತೆ ಅನೇಕ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಕೀಟಾಣುಗಳನ್ನು ನೈಸರ್ಗಿಕವಾಗಿಯೇ ನಾಶ ಮಾಡುವ ಗುಣ ಹೊಂದಿದೆ. ಅಷ್ಟೇ ಅಲ್ಲದೇ ಇಷ್ಟು ಮಾತ್ರವಲ್ಲದೆ ಪುದಿನಾ ಎಲೆಗಳು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಿ, ಕೆಟ್ಟ ಉಸಿರನ್ನು ತಡೆಯುತ್ತದೆ.

ಅಂದಹಾಗೆ ಈ ಪುದಿನಾ ಎಲೆಗಳು ಮೆಂಥಾಲ್ ಅನ್ನು ಒಳಗೊಂಡಿರುವುದರೊಂದ ಈ ಎಲೆಗಳನ್ನು ನೀರಲ್ಲಿ ನೆನೆ ಹಾಕಿ ಮರುದಿನವೇ ಕುಡಿದರೆ ದೇಹದ ಮೇಲೆ ಮಾತ್ರವಲ್ಲದೇ ಅನೇಕ ಲಾಭಗಳನ್ನು ಪಡೆಯಬಹುದು.

ಹೌದು, ಪುದಿನಾ ಎಲೆಯನ್ನು ನೆನೆಸಿದ ನೀರನ್ನು ಚಹಾದೊಂದಿಗೆ ಬೆರೆಸಿ ಕುಡಿದಾಗ ನೋಯುತ್ತಿರುವ ಗಂಟಲನ್ನು ಸರಿ ಮಾಡಬಹುದು. ಇಷ್ಟೇ ಅಲ್ಲದೇ ಈ ರಸವನ್ನು ನೋವಾದ ಜಾಗಕ್ಕೆ ಹಚ್ಚಿದಾಗ ಬೇಗನೇ ನೋವು ಕಡಿಮೆಯಾಗುತ್ತದೆ.

ಇನ್ನು ಊಟವಾದ ಬಳಿಕ ಎರಡು ಪುದಿನ ಎಲೆಗಳನ್ನು ಜಿಗಿದರೆ ಬಾಯಿಯಿಂದ ಬರಬಹುದಾದ ವಾಸನೆಯನ್ನು ತಡೆಯುತ್ತದೆ. ಇದಷ್ಟೇ ಅಲ್ಲದೇ ಅಜೀರ್ಣ ನಿವಾರಣೆ, ವಾಕರಿಕೆ, ತಲೆನೋವು ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ಎಲೆಯನ್ನು ತಿಂದಾಗ ನಿವಾರಣೆ ಆಗುತ್ತದೆ ಹಾಗೂ ಕಣ್ಣಿನ ಆರೋಗ್ಯಕ್ಕೂ ಉಪಯೋಗಕಾರಿಯಾಗಿದೆ.

ಇನ್ನು ಕೆಲವೊ೦ದು ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ಪುದಿನ ಸೊಪ್ಪಿಗೆ ಕೆಲಬಗೆಯ ಕ್ಯಾನ್ಸರ್ ರೋಗಗಳನ್ನೂ ತಡೆಗಟ್ಟುವ ಸಾಮರ್ಥ್ಯವಿದೆ.ಈ ಕಾರಣಕ್ಕಾಗಿಯೇ ಪುದಿನವನ್ನು ನಿಯಮಿತವಾಗಿ ಬಳಸಿಕೊಳ್ಳುವುದು ಒಳ್ಳೆಯದು.

ಮನೆ ಮಗನನ್ನು ಕೊಂಡಾಡಿದ ಸಂಸದೆ ಸುಮಲತಾ..!!

#Peppermintuses #Pepperminthealth

Tags