ಆರೋಗ್ಯಜೀವನ ಶೈಲಿಫ್ಯಾಷನ್

ಹೀಗೊಂದು ಪೆಟ್ಸ್ ಪುರಾಣ!!

ಆಧುನಿಕ ಯುಗದಲ್ಲಿ ಪೆಟ್ಸ್ ಸಾಕುವುದು ಫಾಶ್ಯನ್.

ಬೆಂಗಳೂರು, ಅ.10: ಮನೆಯಲ್ಲಿ ಮುದ್ದಾದ ಬೆಕ್ಕೋ, ನಾಯಿಯೋ, ಗಿಳಿಯೋ ಅಥವಾ ಲವ್ ಬರ್ಡ್ಸ್ ಇದ್ದರೆ ಎಷ್ಟು ಚೆಂದ? ಅವುಗಳ ಒಡನಾಟದಲ್ಲಿ ಸಮಯ ಕಳೆಯುವುದು ಬಿಡಿ, ದಿನ ಕಳೆಯುವುದು ಗೊತ್ತಾಗುವುದಿಲ್ಲ. ಹೌದು. ಇಂದಿನ ಆಧುನಿಕ ಯುಗದಲ್ಲಿ ಪೆಟ್ಸ್ ಸಾಕುವುದು ಫಾಶ್ಯನ್. ಹಿಂದಿನ ಕಾಲದಲ್ಲಿ ಮನೆಯನ್ನು ಕಾಯುವುದಕ್ಕೆ ನಾಯಿ ಮತ್ತು ಮನೆಯಲ್ಲಿನ ಇಲಿಗಳ ಹಾವಳಿ ಕಡಿಮೆ ಮಾಡಲು ಬೆಕ್ಕನ್ನು ಸಾಕುತ್ತಿದ್ದರು. ಅಷ್ಟು ಮಾತ್ರವಲ್ಲ, ಹಳ್ಳಿ ಮನೆಗಳ ಚಿತ್ರಣ ನಮ್ಮ ಕಣ್ಣ ಮುಂದೆ ಬರುವಾಗ ಅಲ್ಲಿ ಕಡ್ಡಾಯವಾಗಿ ನಾಯಿ, ಬೆಕ್ಕುಗಳು ಬರಲೇ ಬೇಕು. ಅಕಸ್ಮಾತ್ ಬಂದಿಲ್ಲವೆಂದಾದರೆ ಹಳ್ಳಿಯ ಚಿತ್ರಣ ಅಪೂರ್ಣವಾದಂತೆ!ಪೆಟ್ಸ್ ಗಳೊಂದಿಗೆ ಅವೀನಭಾವ ಸಂಬಂಧವನ್ನು ಹೊಂದುವ ಜನರು

ಆದರೆ ಇಂದು ಕಾಲ ಬದಲಾಗಿದೆ. ಪೆಟ್ಸ್ ಗಳ ಬಗೆಗೆ ಜನರ ಮನೋಭಾವ ಬದಲಾಗಿದೆ. ತಾವು ಇಷ್ಟಪಟ್ಟ ಪೆಟ್ ಬೇಕಾದರೆ ಸಾವಿರಾರು ಬಿಡಿ ಲಕ್ಷ ರೂಪಾಯಿಗಳನ್ನು ಕೊಟ್ಟು ಕೊಳ್ಳುವವರಿದ್ದಾರೆ. ಜೊತೆಗೆ ವಿವಿಧ ತಳಿಯ ನಾಯಿ, ಬೆಕ್ಕಿನ ಮರಿಗಳನ್ನು ಮನೆಗೆ ತಂದು ಸಾಕುವುದು ಕೂಡಾ ಕೆಲವರ ಹವ್ಯಾಸವೂ ಹೌದು. ಒತ್ತಡದ ಜೀವನ ಶೈಲಿಯಲ್ಲಿ ಮಾನಸಿಕ ಆನಂದವನ್ನು ನೀಡುವ ಪೆಟ್ಸ್ ಗಳು ಮನೆಯವರೊಂದಿಗೆ ಪ್ರೀತಿ ಮತ್ತು ನಂಬಿಕೆ ಇಟ್ಟಿರುತ್ತಾರೆ. ಜೊತೆಗೆ ಒಂಟಿತನವನ್ನು ನೀಗಿಸುತ್ತವೆ.

ಒಳ್ಳೆಯ ತಳಿಯ ನಾಯಿ, ಬೆಕ್ಕನ್ನೋ ತಂದು ಸಾಕಿ ಸಲಹುವವರಿಗೇನೋ ಕಡಿಮೆಯಿಲ್ಲ. ಪೆಟ್ಸ್ ಗಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುವುದು, ಅದಕ್ಕೆ ಬೇಕಾದ ಆಹಾರ, ಅಗತ್ಯ ಬಿದ್ದಾಗ ಪಶು ವೈದ್ಯರ ಬಳಿ ಚಿಕಿತ್ಸೆ ಮಾತ್ರವಲ್ಲದೇ ಸಂಜೆ ಹೊತ್ತಿನಲ್ಲಿ ವಾಕಿಂಗ್ ಹೀಗೆ ಒಟ್ಟಾರೆಯಾಗಿ ಮನೆಯ ಸದಸ್ಯನಿಗೆ ಬೇಕಾದ ಸೌಲಭ್ಯಗಳನ್ನು ಮುದ್ದಿನ ಪೆಟ್ಸ್ ಗೆ ನೀಡುತ್ತಿದ್ದಾರೆ. ಕೆಲಸದ ಕಾರಣದಿಂದಾಗಿ ಮನೆಯಿಂದ ದೂರವಿರುವವರಿಗೆ ಪೆಟ್ಸ್ ಸಾಕಬೇಕೆಂದರೆ ಅದು ಮರೀಚಿಕೆಯೇ ಸರಿ. ಯಾಕೆಂದರೆ ಅವರಿಗೆ ಪೆಟ್ಸ್ ಸಾಕುವುದು ಮಾತ್ರವಲ್ಲ, ಅವುಗಳೊಂದಿಗೆ ಸಮಯ ಕಳೆಯುವುದಲ್ಲೂ ಪುರುಸೊತ್ತು ಇರುವುದಿಲ್ಲ. ಅದರ ಹೊರತಾಗಿ ಸದಾ ಕಾಲ ಮನೆಯಲ್ಲೇ ಇರುವವರಿಗೆ, ಒಂಟಿತನ ಕಾಡುವವರಿಗೆ ಪೆಟ್ಸ್ ನೆಮ್ಮದಿಯನ್ನು ನೀಡುವುದಂತೂ ಸತ್ಯ.  ಮನೆಯಲ್ಲಿರುವ ಪ್ರಾಣಿಗಳಿಗೆ ಕುಡಿಯಲು ನೀರು ಕೊಡುವುದು, ಸಮಯಕ್ಕೆ ಸರಿಯಾಗಿ ಆಹಾರ ಕೊಡುವುದು, ಹೊರಗಡೆ ಕರೆದುಕೊಂಡು ಹೋಗುವುದು ಹೀಗೆ ಸ್ವಲ್ಪ ಸಮಯ ಅವುಗಳೊಂದಿಗೆ ಕಳೆಯುವಂತಾಗುತ್ತದೆ.

 

Tags