ಆರೋಗ್ಯಆಹಾರಜೀವನ ಶೈಲಿ

ಕಡಿಮೆ ಸಮಯದಲ್ಲಿ ತಯಾರಿಸಿ ರುಚಿಕರ ಬ್ರೆಡ್ ಲಾಲಿಪಾಪ್

ಬೆಂಗಳೂರು, ಫೆ.17:

ಬ್ರೆಡ್ ನಲ್ಲಿ ವಿಭಿನ್ನ ಲಾಲಿಪಾಪ್ ಮಾಡಲು ಬೇಕಾದ ಪದಾರ್ಥಗಳು ಈ ಕೆಳಕಂಡಂತಿದೆ:

ಕಟ್ ಮಾಡದ ಪೂರ್ತಿ ಬ್ರೆಡ್ (ಸುತ್ತಲಿನ ಕಂದು ಬಣ್ಣದ ಬ್ರೇಡ್‍ ಅನ್ನು ತೆಗೆದು 4 ಭಾಗಗಳಾಗಿ ಮಾಡಿ)

ಸೂಜಿ ರವೆ -1 ಕಪ್

ಮೊಸರು- ½ ಕಪ್

ಈರುಳ್ಳಿ, ಕ್ಯಾರೆಟ್, ಕೆಂಪು, ಹಳದಿ, ಹಸಿರು ದೊಡ್ಡ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಮೆಣಸಿನ ಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ, ಖಾರದಪುಡಿ.

ಮಾಡುವ ವಿಧಾನ:

ರವೆ ಮತ್ತು ಮೊಸರನ್ನು ಕಲೆಸಿ, ½ ಗಂಟೆ ನೆನೆಯಲು ಬಿಡಿ. ನಂತರ ಎಲ್ಲಾ ತರಕಾರಿ ಹಾಕಿ ಮಿಕ್ಸ್‍ ಮಾಡಿ.

ಕಟ್ ಮಾಡಿಟ್ಟುಕೊಂಡ ಬ್ರೆಡ್ ನ ಸುತ್ತಲೂ ಕಲೆಸಿಕೊಂಡಿರುವ ಮಿಶ್ರಣವನ್ನು ಹಚ್ಚಿ, ಅದಕ್ಕೆ ಒಂದು ಸ್ಟಿಕ್ ಮಾಡಿ.

ಇದನ್ನು ತವದ ಮೇಲೆ ನಾಲ್ಕು ಕಡೆ ಬೇಯಿಸಿದರೆ ಬ್ರೆಡ್ ಲಾಲಿಪಾಪ್ ರೆಡಿ.

ಸುಳ್ಳಾಗಿದೆ, ನಿಜವೆಂದು ನಂಬಿದ ಸೌಂದರ್ಯದ ಟಿಪ್ಸ್ ಗಳು

#foods #breadlollipop #lollipop #balkaninews #breadfoods

Tags