ಆರೋಗ್ಯಆಹಾರಜೀವನ ಶೈಲಿ

ಸಂಜೆಗೆ ಕಾಫಿಗೆ ತಯಾರಿಸಿ ಗೋಳಿಬಜೆ

ಸಂಜೆ ಮಕ್ಕಳು ಶಾಲೆಯಿಂದ ಬಂದು ಏನಾದರೂ ತಿನ್ನಲು ಕೇಳುವುದು ಸಹಜ. ಅಲ್ಲದೇ ಆಫೀಸ್ ನಿಂದ ಮನೆಗೆ ಬಂದ ಗಂಡನೂ ಬಿಸಿ ಬಿಸಿ ಕಾಫಿ ಅಥವಾ ಚಹಾದ ಜೊತೆಗೆ ಬಿಸಿ ಬಿಸಿ ತಿಂಡಿ ಬಯಸುತ್ತಾರೆ. ಸಂಜೆಯ ವೇಳೆಗೆ ಬಿಸಿ ಬಿಸಿ ಗೋಳಿಬಜೆ ಇದ್ದರೆ ಸವಿಯಲು ಅದೆಷ್ಟು ಚೆನ್ನ!

ಅರೇ, ಇದೀಗ ನಾವು ಗೋಳಿಬಜೆ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಮೈದಾ ಹಿಟ್ಟು – ಒಂದು ಬಟ್ಟಲು

ಮೊಸರು – ಒಂದು ಬಟ್ಟಲು/ ಕಲೆಸಲು ಬೇಕಾಗುವಷ್ಟು

ಸಕ್ಕರೆ ಪುಡಿ – ಅರ್ಧ ಚಮಚ

ಸೋಡ- ಚಿಟಿಕೆ

ಉಪ್ಪು- ರುಚಿಗೆ ಬೇಕಾಗುವಷ್ಟು

ಎಣ್ಣೆ – ಕರಿಯಲು

ಇವಿಷ್ಟು ಸಾಮಾಗ್ರಿಗಳು ಇದ್ದರೆ ಸಾಕು, ಗೋಳಿಬಜೆ ತಯಾರಾದಂತೆ!

ಮೊದಲಿಗೆ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ. ನಂತರ ಮೈದಾಗೆ ಸೋಡಾ ಪುಡಿ,ಉಪ್ಪು,ಸಕ್ಕರೆಪುಡಿ ಹಾಕಿ ಚೆನ್ನಾಗಿ ಬೆರೆಸಿ, ಅದಕ್ಕೆ ಮೊಸರು ಹಾಕಿ ಗಟ್ಟಿಯಾಗಿ ಕಲೆಸಿ. ನೆನಪಿಡಿ, ತುಂಬಾ ತೆಳ್ಳಗೆ ಇರಬಾರದು.

ಎಣ್ಣೆ ಕಾದ ನಂತರ ಕಲೆಸಿದ ಮಿಶ್ರಣವನ್ನು ಕೈನಲ್ಲಿ ತೆಗೆದುಕೊಂಡು ಒಂದೊಂದಾಗಿ ಚಿಕ್ಕದಾಗಿ ಎಣ್ಣೆಯಲ್ಲಿ  ಬಿಡಿ. ಬೋಂಡಾ ತರಹ ಹಾಕಿ, ಬಂಗಾರದ ಬಣ್ಣ ಬರುವವರೆಗೆ ಕರಿದು, ತೆಗೆಯಿರಿ. ಸಾಸ್ ಅಥವ ಚಟ್ನಿ  ಜೊತೆ ಸವಿಯಲು ಸಿದ್ಧ.

Image result for ಗೋಳಿಬಜೆ

ಹರ್ಬಲ್ ಸ್ನಾನ ಟ್ರೈ ಮಾಡಿದ್ದೀರಾ?

#balkaninews #golibaje #mangaloregolibaje #golibaje

Tags