ಜೀವನ ಶೈಲಿಫ್ಯಾಷನ್

ಮಳೆಗಾಲಕ್ಕೆ ರೈನ್ ಕೋಟ್…

ಮಳೆ ಬಂತೆಂದರೆ ಸಾಕು ಕೆಲವರಿಗೆ ಅದೇನೋ ಖುಷಿ ಮತ್ತೆ ಕೆಲವರಿಗೆ  ಬೇಜಾರು ಮಳೆಗೆ ಒದ್ದೆಯಾಗಿ ಹೋಗೋದಾದರು ಹೇಗೆಂದು. ಮಳೆಯಲ್ಲಂತೂ ನೆನದರೆ ಜ್ವರ ಅಥವಾ ಶೀತ ಗ್ಯಾರೆಂಟಿ. ಹಾಗಾಗಿ ಇದನ್ನೆಲ್ಲಾ ಪಕ್ಕಕ್ಕಿಟ್ಟು ನಾವು ನಮ್ಮ ಸುರಕ್ಷತೆಯ ಕಡೆ ಗಮನ ನೀಡಬೇಕು. ಆದ್ದರಿಂದ ಮನೆಯಿಂದ ಹೊರಡುವ ಮುನ್ನ ಕೊಡೆ ಅಥವಾ ರೈನ್ ಕೋಟ್ ಧರಿಸಿ ಹೋಗುವುದು ಉತ್ತಮ.

ಫ್ಯಾಶನ್ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಇರುತ್ತದೆ, ಮಳೆಗಾಲಕ್ಕೆ ರೈನ್ ಕೋಟ್ ಹೇಳಿ ಮಾಡಿಸಿದ್ದು. ನೋಡಲು ಒಂದೇ ರೀತಿ ಕಂಡರೂ ಅದರ ವಿನ್ಯಾಸ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಇರುತ್ತದೆ. ಮೊದಲೆಲ್ಲಾ ಒಂದೇ ತರಹದ ರೈನ್ ಕೋಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತಿತ್ತು. ಆದರೆ ಈಗ ಹಾಗಿಲ್ಲ ನಾಳೆಯಾಗುವಷ್ಟರಲ್ಲಿ ಹೊಸ ಸ್ಟೈಲ್ ರೈನ್ ಕೋಟ್ ಮಾರುಕಟ್ಟಗೆ ಲಗ್ಗೆಯಿಟ್ಟಿರುತ್ತವೆ.

ಇಂದು ಬಟ್ಟೆಯಲ್ಲಿ ಮಾಡಿದ ರೈನ್ಕೋಟ್ಗಳಲ್ಲಿ ಅನೇಕ ವಿಧಗಳಿವೆ. ಯಾವುದೇ ಹವಾಮಾನಕ್ಕೆ ಧರಿಸಬಹುದಾದ್ದರಿಂದ ತೆಗೆದುಹಾಕಬಹುದಾದ ಪದರವನ್ನು ಹೊಂದಿದೆ. ವಿನೈಲ್ ನಿಂದ ಮಾಡಿದ ರೈನ್ಕೋಟ್ಗಳಿಗೆ ವಿನೈಲ್ ಅಥವಾ ಒಂದು ವಿನೈಲ್ ಫಿನಿಶ್ ಹೊಂದಿದ ಬಟ್ಟೆಯಿಂದ ತಯಾರಿಸಲಾಗುತ್ತದೆ. ಟ್ರೆಂಚ್ ಕೋಟ್ಸ್ ಪುರುಷರು ಮತ್ತು ಮಹಿಳೆಯರು ಧರಿಸುತ್ತಾರೆ, ಮತ್ತು ಸಾಮಾನ್ಯವಾಗಿ ಹಗುರವಾದ ಹತ್ತಿ ಅಥವಾ ಪಾಲಿಯೆಸ್ಟರ್ ಫ್ಯಾಬ್ರಿಕ್ ನಿಂದ ಮಾಡಲ್ಪಟ್ಟಿವೆ.

ರೈನ್ ಕೋಟ್ ಉತ್ಪಾದನೆಯ ಮುಖ್ಯ ಕೆಲಸ ಜಲನಿರೋಧಕ ಆಗಿದೆ. ರೈನ್ ಕೋಟ್ ಬಟ್ಟೆಗಳಿಗೆ ನೀರು ಹೀರಿಕೊಳ್ಳುವ ಅಥವಾ ನೀರು  ನಿವಾರಕ ಎರಡೂ ಗುಣಗಳಿವೆ ಇವೆ. ಅತ್ಯುತ್ತಮ ರೈನ್ಕೋಟ್ಗಳಿಗೆ ಬಿಗಿಯಾಗಿ ಹೆಣೆದ ಬಟ್ಟೆಯಿಂದ ತಯಾರಿಸಲಾಗುತ್ತದೆ.

ಮಕ್ಕಳಿಗೆ ಕಾರ್ಟೂನೆಂದರೆ ಬಲು ಇಷ್ಟ ಹಾಗಾಗಿ ಮಕ್ಕಳ ಮನಸೆಳೆಯುವಂತ ನಾನಾರೀತಿಯ ಬಣ‍್ಣ ಬಣ‍್ಣದ ಚಿತ್ರ, ಕಾರ್ಟೂನ್ ಹೀಗೆ ಹಲವು ವಿನ್ಯಾಸದಿಂದ ರೈನ್ ಕೋಟ್ ಕೂಡಿರುತ್ತದೆ.

ರೈನ್ ಕೋಟ್ ಫ್ಯಾಶನ್ ಗೆ ಮಾತ್ರ ಸೀಮಿತವಲ್ಲ. ಧೋ ಎಂದು ಸುರಿಯುವ ಮಳೆಗೆ ಶಾಲೆಗೆ ಮೈ, ಪುಸ್ತಕವನ್ನು ಒದ್ದೆ ಮಾಡಿಕೊಂಡು ಹೇಗೆ ಹೋಗುವುದೆಂದು ತಲೆಬಿಸಿ ಮಾಡಬೇಕಿಲ್ಲ ಕೊಡೆ ಹಿಡಿಯುವ ಬದಲಾಗಿ ರೈನ್ ಕೋಟ್ ಧರಿಸಿದರೆ ಆರಾಮದಾಯಕ ಹಾಗೂ ನಮ್ಮನ್ನು ಒದ್ದೆಯಾಗುವುದರಿಂದ ರಕ್ಷಿಸುತ್ತದೆ.

ಮೊದಲೆಲ್ಲಾ ರೈನ್ ಕೋಟ್ ತುಂಬಾ ಭಾರವಾಗಿತ್ತು , ಸರಿಯಾಗಿ ನಮ್ಮ ಸೈಜ್ಗೆ ಸಿಗುತ್ತಿರಲಿಲ್ಲ ಆದರೆ ಈಗ  ಲೈಟ್ ವೈಟ್ ಇರುವ ಹಾಗೂ ನಮ್ಮ ಸೈಜ್ಗೆ ತಕ್ಕಂತ್ತಿರುವ ರೈನ್ ಕೋಟ್ ದೊರೆಯುತ್ತವೆ.

ಫಂಕಿ ರೈನ್ ಕೋಟ್, ಫಂಕಿ ಫೆಸ್ಟಿವಲ್ ರೈನ್ ಕೋಟ್, ಲೇಡಿಸ್ ಹಾಗೂ ಪುರುಷರ ಇಂಡೋ ರೈನ್ ಕೋಟ್ ಹೀಗೆ ಹಲವಾರು ಫ್ಯಾಶನ್ ರೈನ್ ಕೋಟ್ ಗಳು ಲಭ್ಯವಿದೆ. ರೈನ್ ಕೋಟ್ ನ ಹವಾ ಒಂದೆಡೆಯಾದರೆ ಮತ್ತೊಂದೆಡೆ ಜಾಕೆಟ್ ನ ಹವಾ ಎಲ್ಲಡೆ ಜೋರಾಗಿಯೇ ಇದೆ. ಇದು ಎಂಥವರನ್ನೂ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ.ಇದು ಸ್ಟೈಲಿಶ್ ಲುಕ್ ನೀಡುವುದಲ್ಲದೆ, ಮಳೆಗಾಲ ಹಾಗೂ ಚಳಿಗಾಲಕ್ಕೂ ಉಪಯುಕ್ತ.

ಕಾರ್ಡೂರಾಯ್ ಜಾಕೆಟ್:

ಕಂದು ಬೂದಿ, ಬಿಸ್ಕೆಟ್ ಬಣ‍್ಣದ ಜಾಕೆಟ್ ಗಳನ್ನುಮಿಡಿ ಜೀನ್ಸ್ ಮತ್ತು ಟಾಪ್ ಹಾಕಿಕೊಂಡಾಗ ಧರಿಸಿದರೆ ಬಹಳ ಚೆನ್ನಾಗಿ ಕಾಣುತ್ತದೆ.

ಲೆದರ್ ಜಾಕೆಟ್:

ಉದ್ದದ ಲೆದರ್ ಜಾಕೆಟ್ ಔಟ್ ಆಫ್ ಫ್ಯಾಶನ್ ಆಗಿದ್ದರೂ ಬಿಗಿಯಾದ ಲೆದರ್ ಜಾಕೆಟ್ ಧರಿಸುವುದು ಈಗಿನ ಟ್ರೆಂಡ್ ಕೂಡ ಹೌದು.

ಸ್ಯೂಡ್ ಜಾಕೆಟ್:

ಈ ಜಾಕೆಟನ್ನು ಮೊದಲೆಲ್ಲಾ ಗಂಡಸರು ಧರಿಸುತಿದ್ದರು , ಈಗ ಇದರಲ್ಲಿ ವಿನ್ಯಾಸ ಬದಲಾಗಿದ್ದು ಮಹಿಳೆಯರಿಗೂ ಧರಿಸುವಂತಿದೆ.

ಸುಹಾನಿ ಬಡೆಕ್ಕಿಲ.

 

Tags

Related Articles

Leave a Reply

Your email address will not be published. Required fields are marked *