ಆರೋಗ್ಯಆಹಾರಜೀವನ ಶೈಲಿ

ಆರೋಗ್ಯಕ್ಕೆ ಹಾನಿಕರ ಫ್ರೀಜ್ ನೀರು!

ಬೇಸಿಗೆಯ ಬಿರು ಬಿಸಿಲಿಗೆ ಆಗುವ ದಾಹಕ್ಕೆ ಅದೆಷ್ಟು ನೀರು ಕುಡಿದರೂ ಸಾಲದು. ನೀರಿನ ಜೊತೆಗೆ ಎಳನೀರು, ಕಬ್ಬಿನ ಹಾಲು, ಮಜ್ಜಿಗೆ, ತಾಜಾ ಹಣ್ಣಿನ ಜ್ಯೂಸ್ ಎಲ್ಲವನ್ನು ಕುಡಿಯುತ್ತಾರೆ. ಜೊತೆಗೆ ನಾವು ಹೆಚ್ಚಾಗಿ ತಣ್ಣನೆಯ ನೀರು ಸೇವಿಸಲು ಇಷ್ಟಪಡುತ್ತೇವೆ. ತಣ್ಣನೆಯ ನೀರು ಕುಡಿಯುವುದು ಒಳ್ಳೆಯದೆ.  ಆದರೆ ಫ್ರಿಜ್ ನಲ್ಲಿಟ್ಟಿರುವ ನೀರನ್ನು ಆದಷ್ಟು ಕುಡಿಯದಿರುವುದು ಒಳ್ಳೆಯದು.

ಬಿರುಬಿಸಿಲಿನ ಬೇಗೆಗೆ ಫ್ರಿಜ್ ನೀರು ಒಂದು ಕ್ಷಣಕ್ಕೆ ಹಿತ ಎನಿಸಬಹುದು. ಆದರೆ ಅದು ಆರೋಗ್ಯಕ್ಕೆ ಅಷ್ಟೇ ಹಾನಿಕರ.

ಪ್ರತಿದಿನ ಫ್ರಿಜ್ ನೀರು ಕುಡಿಯುವುದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೇ ಫ್ರಿಜ್ ನೀರು ಕುಡಿಯುವುದರಿಂದ ಮಲಬದ್ಧತೆ ಹಾಗೂ ಗ್ಯಾಸ್ ಸಮಸ್ಯೆ ಬರುತ್ತದೆ. ಮಾತ್ರವಲ್ಲ ಇದರಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.

ಆಹಾರ ಸೇವಿಸಿದ ತಕ್ಷಣ ಕೋಲ್ಡ್ ನೀರು ಕುಡಿಯಲೇಬಾರದು. ಯಾಕೆಂದರೆ ಇದು ಜೀರ್ಣಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ. ಮಾತ್ರವಲ್ಲ ಇದು ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಫ್ರಿಜ್ ನಲ್ಲಿಟ್ಟ ನೀರು ಕುಡಿಯುವುದರಿಂದ ವಸಡಿನ ನೋವು ಪ್ರಾರಂಭವಾಗುತ್ತದೆ. ಇದರಿಂದ ಹಲ್ಲುಗಳು ಸಡಿಲವಾಗುವ ಸಾಧ್ಯತೆಯೂ ಜಾಸ್ತಿ ಇರುತ್ತದೆ. ಮುಖ್ಯವಾದ ಸಂಗತಿ ಎಂದರೆ ಹೆಚ್ಚಾಗಿ ಫ್ರೀಜ್ ನಲ್ಲಿಟ್ಟ ನೀರು ಕುಡಿಯುವುದರಿಂದ ಗಂಟಲಿನ ರಕ್ಷಣಾತ್ಮಕ ಪದರದ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ. ಮಾತ್ರವಲ್ಲ ಇದರಿಂದಾಗಿ ಗಂಟಲಿನ ಸೋಂಕು ಕಾಣಿಸಿಕೊಳ್ಳಬಹುದು.

Image result for refrigerated water that is harmful to health!

ಅಕ್ಕಿ ತೊಳೆದ ನೀರನ್ನು ಚೆಲ್ಲುವ ಮುನ್ನಾ ಹೀಗೆ ಮಾಡಿ

#balkaninews #refrigeratedwater #fridgewater

Tags