ಸಂಬಂಧಗಳುಸುದ್ದಿಗಳು

“..ಮನುಷ್ಯನ್ನ ಗುಲಾಮರಾಗಿ ನೋಡುವ  ಒಬ್ಬೊಬ್ಬರ ಎದೆಗೂ ಕತ್ತಿ ಇಳಿಸೋದೆ ಇದಕ್ಕುತ್ತರ..” -ಭೈರವ

ಭೈರವ ಗೀತಾ ಟ್ರೇಲರ್ ಲಾಂಚ್ ಕಾರ್ಯಕ್ರಮ

 

 

ಡಾಲಿ ಟಗರು ಆದ, ಇನ್ನಾಗ್ತಾನೆ ಅವನು ಭೈರವ…

ಬೆಂಗಳೂರು, ನ-3: ಇಂದು ಬೆಂಗಳೂರಿನಲ್ಲಿ ಭೈರವ ಗೀತಾ ಅಫಿಷಿಯಲ್ ಟ್ರೇಲರ್ ಲಾಂಚ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಡಾಲಿ ಅಂತಾನೇ ಫೇಮಸ್ ಆದ ನಟ ಧನಂಜಯ್. ಟಗರು ಸಿನಿಮಾ ಮೂಲಕವೇ ಫೇಮಸ್ ಆದ ನಟ. ಈ ಸಿನಿಮಾದ ನಂತರ ರಾಮ್ ಗೋಪಾಲ್ ವರ್ಮಾ ಅವರ ದೊಡ್ಡ ಪ್ರಾಜೆಕ್ಟ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡ ನಟ ಸದ್ಯ ಭೈರವ ಗೀತಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಂದು ಭೈರವ ಗೀತಾ ಸಿನಿಮಾದ ಅಫಿಷಿಯಲ್ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೀತು. ಕಾರ್ಯಕ್ರಮ ದಲ್ಲಿ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಭಾಸ್ಕರ್ ರಾಶಿ, ನಿರ್ದೇಶಕ ಸಿದ್ದಾರ್ಥ, ನಟ ಧನಂಜಯ್, ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಬಾ.ಮಾ .ಹರೀಶ್ ಭಾಗಿಯಾಗಿದ್ದರು.

ಅಧೀಕೃತವಾಗಿ ಟ್ರೇಲರ್ ರಿಲೀಸ್

ಇಂದು ಅಧೀಕೃತವಾಗಿ ಟ್ರೇಲರ್ ಕೂಡ ರಿಲೀಸ್ ಮಾಡಲಾಯ್ತು. ಈ ಹಿಂದೆ ಕೂಡ ಈ ಟೀಸರ್ ರಿಲೀಸ್ ಆಗಿತ್ತು . ಅಷ್ಟೆ ಅಲ್ಲ, ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಇದೀಗ ಅಧೀಕೃತವಾಗಿ  ಟ್ರೇಲರ್ ರಿಲೀಸ್ ಆಗಿದೆ. ಈಗಾಗಲೇ ಈ ಟ್ರೇಲರ್ ನಲ್ಲಿ ಧನಂಜಯ್ ಹಾಗೂ ಇರಾ ಅದ್ಬುತವಾಗಿ ನಟಿಸಿದ್ದಾರೆ. ವಿರೋಧಗಳ ನಡುವಿನ ಪ್ರೀತಿ ಉಕ್ಕಿ, ಆ ಪ್ರೀತಿ ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿಗಳು, ಸಂದರ್ಭಗಳು ನಿಜಕ್ಕೂ ಮೈ ನವಿರೇಳಿಸುವಂತಿದೆ.

ಬಿಡುಗಡೆ ಸನ್ನಿಹಿತದಲ್ಲಿ’ ಭೈರವ ಗೀತಾ’

 

ಇನ್ನು ಇಂದು ಬಿಡುಗಡೆಯಾಗಿದ್ದ ಟ್ರೇಲರ್ ೨ ನಿಮಿಷ ೧೪  ಸೆಕೆಂಡ್ ಇದೆ. ಸಮಾಜದಲ್ಲಿ ಆಗುವ ಮೇಲು-ಕೀಳುಗಳನ್ನು ಎಳೆ ಎಳೆಯಾಗಿ ತೋರಿಸಲಾಗಿದೆ. ಧನಂಜಯ್ ಕೂಡ ಆಕ್ಷನ್ ಲುಕ್ ನಲ್ಲಿ ಅಧ್ಬುತವಾಗಿ ಕಾಣಿಸಿದ್ದಾರೆ. ಸದ್ಯ ಈ ಸಿನಿಮಾ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲೆಯಾಳಂ ನಲ್ಲಿ ಕೂಡಾ ಬಿಡುಗಡೆಗೆ ಸಜ್ಜಾಗುತ್ತಿದೆ‌.

Tags