ಜೀವನ ಶೈಲಿಸಂಬಂಧಗಳು

ನಿಮ್ಮ ಮುತ್ತಿನಿಂದ ಹೆಚ್ಚಿತು ಆತನ ಆತ್ಮ ಗೌರವ!!

ಆಪ್ತರಿಂದ ಪಡೆದ ಒಂದು ಚುಂಬನದ ಮೂಲಕ ಮನಸ್ಸಿಗೆ ಮುದನೀಡುವ ರಸದೂತಗಳ ಪಡೆಯಿರಿ

ಆತ್ಮಗೌರವ ಹೆಚ್ಚುತ್ತದೆ ನಂಬುತ್ತೀರೋ ಇಲ್ಲವೋ..!?!

ಚುಂಬನದಿಂದ ಆತ್ಮಗೌರವ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಹಲವು ವ್ಯಕ್ತಿಗಳು ತಮ್ಮಲ್ಲಿರುವ ಕೆಲವಾರು ಕೀಳರಿಮೆಗಳಿಂದ ತಮ್ಮ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದು ಈ ವ್ಯಕ್ತಿಗಳ ದೇಹದಲ್ಲಿ ಕಾರ್ಟಿಸೋಲ್ ಹೆಚ್ಚಿನ ಪ್ರಮಾಣದಲ್ಲಿದ್ದುದು ಕಂಡುಬಂದಿದೆ. ಪರಿಣಾಮವಾಗಿ ಇವರಲ್ಲಿ ಮಾನಸಿಕ ಒತ್ತಡ ಹೆಚ್ಚೇ ಇರುತ್ತದೆ. ಈ ವ್ಯಕ್ತಿಗಳೂ ಆಪ್ತರಿಂದ ಪಡೆದ ಒಂದು ಚುಂಬನದ ಮೂಲಕ ಮನಸ್ಸಿಗೆ ಮುದನೀಡುವ ರಸದೂತಗಳನ್ನು ಪಡೆದು ಕಾರ್ಟಿಸೋಲ್ ಮಟ್ಟವನ್ನು ಕಡಿಮೆಗೊಳಿಸುವ ಮೂಲಕ ಹೆಚ್ಚು ಆತ್ಮವಿಶ್ವಾಸದಿಂದ ಮುಂದೆ ಸಾಗಿರುವುದು ಕಂಡುಬಂದಿದೆ. ಇವೆರಡೂ ಪ್ರಕ್ರಿಯೆಗಳಿಂದ ವ್ಯಕ್ತಿ ಅಪಾರವಾದ ಆತ್ಮವಿಶ್ವಾಸವನ್ನೂ ಆತ್ಮಗೌರವವನ್ನೂ ಪಡೆದು ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಲು ಸಾಧ್ಯವಾಗಿದೆ.


ವಾಸ್ತವವಾಗಿ ಒಂದು ಸರಳ ಚುಂಬನವೂ ತಲೆನೋವನ್ನು ಕಡಿಮೆಗೊಳಿಸಬಹುದು!
ತಲೆನೋವನ್ನು ಕಡಿಮೆಗೊಳಿಸುತ್ತದೆ ಸಾಮಾನ್ಯವಾಗಿ ತಲೆನೋವು ಇದ್ದವರು ತಾವು ಕುಡಿಯುವ ಟೀ ಮೂಲಕವೇ ತಲೆನೋವು ವಾಸಿಯಾಗುತ್ತದೆ, ಇನ್ನೇನೂ ಬೇಡ ಎಂದು ತಿಳಿಸುತ್ತಾರೆ. ವಾಸ್ತವವಾಗಿ ಒಂದು ಸರಳ ಚುಂಬನವೂ ತಲೆನೋವನ್ನು ಕಡಿಮೆಗೊಳಿಸಬಹುದು! ಏಕೆ? ಹೇಗೆ? ಎಂದು ಕೇಳಿದವರಿಗೆ ಮೇಲೆ ವಿವರಿಸಿದ ಮಾಹಿತಿಯೇ ಇಲ್ಲಿ ನೆರವಿಗೆ ಬರುತ್ತದೆ. ಚುಂಬನದ ಸಮಯದಲ್ಲಿ ಬಿಡುಗಡೆಯಾಗುವ ಮನಸ್ಸಿಗೆ ಮುದಗೊಳಿಸುವ ರಸದೂತಗಳು ಮನಸ್ಸಿನ ಒತ್ತಡವನ್ನು ನಿವಾರಿಸುವ ಜೊತೆಗೇ ಮೆದುಳಿಗೆ ರಕ್ತ ಹರಿಸುವ ರಕ್ತನಾಳಗಳನ್ನೂ ಸಡಿಲಗೊಳಿಸಿ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಮಾನಸಿಕ ಒತ್ತಡ ಹಾಗೂ ಅಧಿಕ ರಕ್ತದೊತ್ತಡ ತಲೆನೋವಿಗೆ ಪ್ರಮುಖ ಕಾರಣವಾಗಿದ್ದು ಇವೆರಡೂ ಇಲ್ಲದೇ ಹೋದಾಗ ತಲೆನೋವೂ ಸ್ವಾಭಾವಿಕವಾಗಿಯೇ ಕಡಿಮೆಯಾಗುತ್ತದೆ.ಇನ್ನು ಮುಂದೆ ನಿಮಗೆ ತಲೆನೋವಾದರೆ ಏನು ಮಾಡಬೇಕೆಂದು ಈಗ ನಿಮಗೆ ಗೊತ್ತಿದೆ!

Tags