ಜೀವನ ಶೈಲಿಸಂಬಂಧಗಳು

ಸುಖಮಯ ಜೀವನಕ್ಕೊಂದಿಷ್ಟು ಸಲಹೆ..

ಮದುವೆ ಅನ್ನೋದು ಏಳು ಜನ್ಮಜನ್ಮದ ಜೋಡಿ ಎಂದು ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ. ಮದುವೆ ಆದರೆ ಸಾಕು ಜವಬ್ದಾರಿ ಹೆಚ್ಚುತ್ತದೆ. ಆದರೆ ಇನ್ನೊಂದೆಡೆ ಇನ್ನೇನು ವಿವಾಹವಾಗುತ್ತಾರೆ ಎಂಬ ಸೂಚನೆ ಕಂಡು ಬಂದಿದ್ದ ಜೋಡಿಗಳ ನಡುವೆಯೂ ಬಿರುಕು ಮೂಡಿ ಬೇರೆ ಬೇರೆಯಾಗಿರುವುದು ಕಂಡು ಬಂದಿದೆ. ಪ್ರತಿಯೊಂದು ಸಂಬಂಧಗಳಲ್ಲಿ ಏನಾದರೂ ಕುಂದು ಕೊರತೆಗಳು ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಸಂಬಂಧಗಳು ಹಳಸುತ್ತಾ ಬರುವುದನ್ನು ನಾವು ಕಾಣುತ್ತಿದ್ದೇವೆ. ಈ ವೈಯಕ್ತಿಕ ಸಂಬಂಧಗಳಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಒಬ್ಬರಿಗೊಬ್ಬರು ಅರ್ಥೈಸಿಕೊಳ‍್ಳಲು ಬಹಳ ಕಷ್ಟ. ಈ ವೈಯಕ್ತಿಕ ಸಂಬಂಧಗಳು ಒಂದು ತಂತಿಯ ಮೇಲೆ ನಡೆದಂತೆ. ಆದ್ದರಿಂದ ಇಲ್ಲಿ ಪರಸ್ಪರರನ್ನು ಅರಿತುಕೊಂಡು ಸಾಗುವುದು ಬಹಳ ಮುಖ್ಯವಾಗಿರುತ್ತದೆ ಇದು ಪ್ರತಿಯೊಬ್ಬರಿಗೂ ಸಾಧ್ಯವಾಗದೆ ಇರುವ ಕಾರಣದಿಂದ ಕೆಲವು ಸಂಬಂಧಗಳಲ್ಲಿ ವೈಮನಸ್ಸು ಉಂಟಾಗುತ್ತದೆ.

ಪ್ರಪಂಚದಲ್ಲಿ ಅತ್ಯಂತ ಒಳ‍್ಳೆಯ ಗೆಳತಿ ಎಂದು ಹಾಡಿ

ಹೊಗಳಿದಂತಹ ಗೆಳೆಯನನ್ನೇ ಕಳೆದುಕೊಳ‍್ಳುವ ಸಾಧ್ಯತೆಯುಂಟು. ನಂತರ ದುಖಃಕ್ಕೂ ಖಿನ್ನತೆಗೂ ಹೋಗಬಹುದು ಅದಲ್ಲದೆ ಅತಿಶಯೋಕ್ತಿಯಾದ ಪ್ರೀತಿಯಿಂದ ಹೆಚ್ಚು ಕಮ್ಮಿಯಾಗಿ ವ್ಯಕ್ತಿ ಕಾಲ ಕಸಕ್ಕೆ ಸಮನಾಗಬಹುದು. ಹಾಗಾಗಿ ಈ ರೀತಿಯಾಗದಂತೆ ನಮ್ಮ ಸಂಹವನ ಮತ್ತು ಸಂಬಂಧದಲ್ಲಿ ಒಳ‍್ಳೆಯತನಕ್ಕೆ ದಾರಿ ಮಾಡಿ ಕೊಡಲು ಕೆಲವೊಂದು ನಿರ್ದಿಷ್ಟ ಆದರ್ಶಗಳನ್ನು ಇಬ್ಬರಲ್ಲಿಯೂ ಅಳವಡಿಸಿಕೊಂಡಲ್ಲಿ ಒಬ್ಬರಿಗೊಬ್ಬರು ಅರ್ಥೈಸಿಕೊಂಡು ಹೋದಲ್ಲಿ ಸುಖಃ ಜೀವನವನ್ನು ಅನುಭವಿಸಬಹುದು ಮತ್ತು ಪ್ರೀತಿ ಆಧಾರಗಳಿಂದ ಇರಬಹುದು.

* ತಾನು ಮೇಲೆಂಬ ಭಾವನೆಯನ್ನು ಬಿಟ್ಟು ಜೊತೆಜೊತೆಯಲ್ಲಿ ಪ್ರೀತಿಯಿಂದ ಜೀವನ ನಡೆಸಬೇಕು ಮತ್ತು ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ‍್ಳಬೇಕು.

* ಹಗಲುಗನಸು ಕಾಣದೆ ನಿಜ ಜೀವನದತ್ತ ಚಿತ್ತವನ್ನು ಇಡುವುದು

* ನಾವು ಸಮಾಜದಲ್ಲಿರುವ ಒಳ‍್ಳೆಯವರನ್ನು ಆದರ್ಶವಾಗಿ ತೆಗೆದುಕೊಂಡು ಅನವಶ್ಯಕವಾದ ಚಿಂತೆಯನ್ನು ಬಿಟ್ಟು ಆದರ್ಶಯುಕ್ತ ಸ್ನೇಹಿತರಾಗಿ ನಮಗೆ ನಾವೇ ಹೀರೋ ಆಗಿದ್ದುಕೊಂಡು ದಾರಿ ಮಾಡಿ ಕೊಡುವುದು.

* ನಾವು ಕೆಟ್ಟ ರೀತೀಯ ಸಿನಿಮಾ , ಸಾಹಿತ್ಯ ಅಥವಾ ಕಥೆ, ಕಾದಂಬರಿಗಳನ್ನು ಜೀವನಕ್ಕೆ ಅಳವಡಿಸಿಕೊಳ‍್ಳದೆ ಒಳ‍್ಳೆಯ ರೀತೀಯಲ್ಲಿರುವುದು.

* ಒಣ ಪ್ರತಿಷ್ಠೆಯನ್ನು ಬಿಟ್ಟು  ಒಬ್ಬರನ್ನೊಬ್ಬರು ಪ್ರೀತಿ ಪೂರ್ವಕವಾಗಿ ಗೌರವಿಸುತ್ತಾ ಜೀವನದ ಮೌಲ್ಯಗಳಿಗೆ ಬೆಲೆ ಕೊಟ್ಟು ಬಾಳಿದಲ್ಲಿ ಜೀವನವೇ ಹಾಲು ಜೇನಿನಂತಿರುತ್ತದೆ.

* ಒಬ್ಬರನ್ನೊಬ್ಬರು ದೂಷಿಸುವುದಕ್ಕಿಂತ ಒಬ್ಬರನ್ನೊಬ್ಬರು ಅರ್ಥೈಸಿ ನಡೆಯುವುದೇ ಸವಿಜೇನು..

ಸುಹಾನಿ.ಬಡೆಕ್ಕಿಲ

 

 

 

Tags

Related Articles

Leave a Reply

Your email address will not be published. Required fields are marked *