ಆರೋಗ್ಯಜೀವನ ಶೈಲಿ

ಅಂಜೂರ ತಿನ್ನಿ..! ರಕ್ತಹೀನತೆ, ಜೀರ್ಣಶಕ್ತಿ, ರಕ್ತದೊತ್ತಡ ಸಮಸ್ಯೆಗಳ ದೂರವಿಡಿ..!!

ಖಾಲಿ ಹೊಟ್ಟೆಗೆ ಅಂಜೂರ ಸೇವಿಸಿದರೆ ದೇಹದ ತೂಕ ಹೆಚ್ಚುತ್ತದೆ

ರಕ್ತಹೀನತೆ, ಜೀರ್ಣಶಕ್ತಿ, ರಕ್ತದೊತ್ತಡ ಸಮಸ್ಯೆಗಳಿಗೆ ದಿವ್ಯೌಷಧಿ ಅಂಜೂರ

ಇಂದು ಬಹಳಷ್ಟು ಮಂದಿ ಜೀರ್ಣಶಕ್ತಿ ಸಮಸ್ಯೆ, ರಕ್ತಹೀನತೆ ಅದರಲ್ಲೂ ಹೆಚ್ಚಾಗಿ ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಧುಮೇಹವೂ ಹೆಚ್ಚು ಜನರನ್ನು ಕಾಡುತ್ತಿದೆ. ರಕ್ತದೊತ್ತಡದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಮನೆಮದ್ದು ಎಂದರೆ ಅಂಜೂರ. ತುಂಬಾ ಕಡಿಮೆ ಬೆಲೆಗೆ ಸಿಗುವ ಅಂಜೂರವನ್ನು ಈ ರೀತಿ ಸೇವಿಸುವ ಮೂಲಕ ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ಈಗ ನೋಡೋಣ.

 

* ಎರಡು ಮೂರು ಅಂಜೂರವನ್ನು ರಾತ್ರಿ ಹಾಲಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ದೇಹದ ತೂಕ ಹೆಚ್ಚುತ್ತದೆ.

* 3 ರಿಂದ 4 ಅಂಜೂರದ ಎಲೆಯ ಕಷಾಯ ಸೇವಿಸಿದರೆ ಶ್ವಾಸ ಕೋಶದ ತೊಂದರೆ ಗುಣವಾಗುತ್ತದೆ .

* ಒಂದು ಚಮಚ ಅಂಜೂರದ ಬೀಜದ ಪುಡಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ, ಮಧುಮೇಹ ನಿಯಂತ್ರಿಸಬಹುದು.

* ಲಿವರ್ ಆರೋಗ್ಯವಾಗಿಡಲು 4 ಅಂಜೂರ ಎಲೆಗಳನ್ನು ಕಲ್ಲುಸಕ್ಕರೆ ಮತ್ತು ನೀರಿನ ಜೊತೆ ಸೇವಿಸಿಬೇಕು.

* ಬಾಯಿ ಹುಣ್ಣಿಗೆ ಒಂದು ಚಮಚ ಅಂಜೂರದ ತೊಗಟೆಯ ಪುಡಿಯನ್ನು ಒಂದು ಲೋಟ ಹಾಲಿನ ಜೊತೆ ಸೇವಿಸಿದರೆ ಬಾಯಿ ಹುಣ್ಣು ಗುಣವಾಗುತ್ತದೆ.

* ಅಂಜೂರದ ಹಣ್ಣುನ್ನು ಪ್ರತಿನಿತ್ಯ ತಿಂದರೆ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದು.

* ಅಂಜೂರ ಹಣ್ಣಿನಲ್ಲಿ ನಾರಿನ ಪದಾರ್ಥವಿರುತ್ತದೆ. ಇದನ್ನು ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.

* ಮಹಿಳೆಯರು ಇದನ್ನು ದಿನನಿತ್ಯ ತಿನ್ನುವುದರಿಂದ ರಕ್ತಹೀನತೆ ಮಾಯವಾಗುತ್ತದೆ.

Tags