ಆರೋಗ್ಯಆಹಾರಜೀವನ ಶೈಲಿಸೌಂದರ್ಯ

ಅಕ್ಕಿ ತೊಳೆದ ನೀರನ್ನು ಚೆಲ್ಲುವ ಮುನ್ನಾ ಹೀಗೆ ಮಾಡಿ

ಚೀನಾ, ಜಪಾನ್ ಮತ್ತು ಇತರ ಆಗ್ನೇಯ ಏಷ್ಯಾದ ದೇಶಗಳಲ್ಲಿ ಮಹಿಳೆಯರು ಶತಮಾನಗಳಿಂದಲೂ ಅಕ್ಕಿ ತೊಳೆದ ನೀರಿನಲ್ಲಿ ಇರುವ ವಿಟಮಿನ್ ಮತ್ತು ಖನಿಜದ ಅಂಶಗಳಿರುವ ಬಗ್ಗೆ ತಿಳಿದು ಸ್ನಾನಕ್ಕೆ ಇದೇ ನೀರನ್ನು ಬಳಸುತ್ತಿದ್ದಾರೆ.

ಅಕ್ಕಿಯನ್ನು ಮೊದಲು ಅದರಲ್ಲಿರುವ ಕಲ್ಮಶ ಹೋಗುವಂತೆ ತೊಳೆದು, ನಂತರ ಸ್ವಲ್ಪ ನೀರು ಹಾಕಿ ½ ಗಂಟೆ ನೆನೆಸಿಡಿ. ನಂತರ ಆ ನೀರಿನಿಂದ ಮುಖ ತೊಳೆದರೆ ಆಗುವ ಪ್ರಯೋಜನಗಳು ಹೀಗಿದೆ.

ಮುಖದ ಕ್ಲೆನ್ಝರ್

ಅಕ್ಕಿ ನೀರನ್ನು ಹತ್ತಿಯಲ್ಲಿ ಅದ್ದಿ ಚರ್ಮದ ಮೇಲೆ ಹಚ್ಚಿ, 20 ನಿಮಿಷ ಬಿಟ್ಟು ತೊಳೆಯಿರಿ. ವಾರಕ್ಕೆ ಮೂರು ಬಾರಿ ಹೀಗೆ ಮಾಡಿದರೆ ಸಾಕು, ಬಿಗಿಯಾದ, ಹೊಳಪಿನ ಮತ್ತು ಮೃದುವಾದ ಚರ್ಮ ನಿಮ್ಮದಾಗುತ್ತದೆ.

ಮುಖದ ಟೋನರ್

ಮುಖದ ಮೇಲಿನ ರಂಧ್ರ ಕಡಿಮೆಯಾಗುತ್ತದೆ. ಚರ್ಮವನ್ನು ಬಿಗಿಗೊಳಿಸುವುದು. ಜೀವಕೋಶದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ರಕ್ತದ ಹರಿವನ್ನು ಪ್ರಚೋದಿಸುತ್ತದೆ. ತ್ವಚೆಯನ್ನು ಮೃದು ಮತ್ತು ಕಾಂತಿಯುಕ್ತವಾಗಿಸುತ್ತದೆ.

ಚರ್ಮದ ತುರಿಕೆ

ಆಟೋಪಿಕ್ ಡರ್ಮಟೈಟಿಸ್ ಸಮಸ್ಯೆ ಇರುವವರಲ್ಲಿ ಉರಿಯೂತ ಮತ್ತು ಶುಷ್ಕ ಚರ್ಮ ಸಾಮಾನ್ಯವಾಗಿರುತ್ತದೆ. ಅಕ್ಕಿ ನೀರು ಈ ಸಮಸ್ಯೆಯಿಂದ ಕಾಪಾಡುತ್ತದೆ. ಸ್ಕಿನ್‍ ಟ್ಯಾನಿಂಗ್ ಕೂಡ ಹೇಳಹೆಸರಿಲ್ಲದಂತಾಗುತ್ತದೆ.

ಮೊಡವೆ ಚಿಕಿತ್ಸೆ

ಬ್ಯಾಕ್ಟೀರಿಗಳನ್ನು ತ್ವಚೆಯಿಂದ ದೂರ ಮಾಡಿ ಮೊಡವೆಯಿಂದ ರಕ್ಷಿಸುತ್ತದೆ. ಮುಖದಲ್ಲಿನ ಪೋರ್ಸಗಳನ್ನು ಬಿಗಿಗೊಳಿಸುತ್ತದೆ.

ತಲೆಕೂದಲ ಬೆಳವಣಿಗೆಗೆ

ಶ್ಯಾಂಪು ಮಾಡಿದ ನಂತರ ಒಂದೆರಡು ಹನಿ ಬಾದಾಮಿ ಎಣ್ಣೆಗೆ ಅರ್ಧಕಪ್ ಅಕ್ಕಿ ಬೆರೆಸಿ. ಕೂದಲಿನ ಬುಡಕ್ಕೆ ಈ ಮಿಶ್ರಣವನ್ನು ಹಚ್ಚಿ. ಇದರಿಂದ ಕಪ್ಪಾದ, ಹೊಳೆಯುವ, ನೀಳವಾದ ಕೂದಲು ನಿಸ್ಸಂದೇಹವಾಗಿ ನಿಮ್ಮದಾಗುತ್ತದೆ.

ಅಕ್ಕಿ ತೊಳೆದ ನೀರನ್ನು ನಾವು ವೇಸ್ಟ್‍ ಎಂದು ಇಷ್ಟು ದಿನ ಚೆಲ್ಲುತ್ತಿದ್ವೀ ಅಲ್ವಾ. ಇನ್ನು ಮುಂದೆ ಹಾಗೆ ಮಾಡದೇ ಅದರ ಸತ್ವದ ಪ್ರಯೋಜನ ನಿಮ್ಮದಾಗಿಸಿರಿ.

Image result for rice water useful

Image result for rice water useful

ಬಿಸಿ ಬಿಸಿಯಾದ ಕೊಟ್ಟೆ ಕಡುಬು ಸವಿದಿದ್ದೀರಾ?

#ricewater #rice #ricewaterbenefits #healthytips

Tags