ಆರೋಗ್ಯಆಹಾರಜೀವನ ಶೈಲಿ

ರುಚಿರುಚಿಯಾಗಿರುವ ಹೀರೆಕಾಯಿ ತಂಬುಳಿ ಮಾಡುವುದು ಹೇಗೆ ಗೊತ್ತೆ?

ನಾರಿನಂಶ ಅಧಿಕವಿರುವ ಹೀರೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪೋಷಕಾಂಶಗಳ ಆಗರವಾಗಿರುವ ಹೀರೆಕಾಯಿಯಿಂದ ತಯಾರಿಸುವ ತಂಬುಳಿಯು ಆರೋಗ್ಯಕ್ಕೆ ಒಳ್ಳೆಯದು.

ಹೀರೆಕಾಯಿ ತಂಬುಳಿಗೆ ಬೇಕಾಗುವ ಸಾಮಗ್ರಿಗಳು:

ಹೀರೆಕಾಯಿ – 1, ಹಸಿಮೆಣಸಿನ ಕಾಯಿ -2, ಎಳ್ಳು – 1 ಚಮಚ

ಜೀರಿಗೆ 1 ಚಮಚ, ತೆಂಗಿನತುರಿ – 1 ಕಪ್,ಮಜ್ಜಿಗೆ – 2 ಕಪ್

ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ – 1/2 ಚಮಚ, ನೀರು – 2 ಕಪ್

ಎಣ್ಣೆ, ಸಾಸಿವೆ 1 ಚಮಚ

ಮಾಡುವ ವಿಧಾನ:

ಹೀರೆಕಾಯಿಯ ಸಿಪ್ಪೆ ತೆಗೆದು, ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಸೇರಿಸಿ ಬೇಯಿಸಬೇಕು. ನಂತರ ಬೇಯಿಸಿದ ಹೀರೆಕಾಯಿಯ ನೀರು ಮತ್ತು ಹೋಳನ್ನು ಬೇರೆ-ಬೇರೆ ಪಾತ್ರೆಯಲ್ಲಿ ಇಡಬೇಕು.

ಈಗ ಒಗ್ಗರಣೆ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಕಾಯಿಸಿ, ಎಳ್ಳು ಮತ್ತು ಜೀರಿಗೆ ಮತ್ತು ಹಸಿಮೆಣಸಿನ ಕಾಯಿಯನ್ನು ಹುರಿಯಬೇಕು. ಹುರಿದ ಸಾಮಗ್ರಿಗಳನ್ನು ಬೇಯಿಸಿದ ಹೀರೆ ಮತ್ತು ತೆಂಗಿನತುರಿಯೊಡನೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.ನೆನಪಿಡಿ, ರುಬ್ಬುವಾಗ ಹೀರೆಕಾಯಿ ಬೇಯಿಸಿದ ನೀರನ್ನು ಬಳಸಿ. ಚೆನ್ನಾಗಿ ನಂತರ ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಮಜ್ಜಿಗೆ ಮತ್ತು ಉಪ್ಪು ಸೇರಿಸಿ ಮಿಶ್ರ ಮಾಡಬೇಕು. ನಂತರ ಒಗ್ಗರಣೆ ಹಾಕಿದರೆ ಹೀರೆಕಾಯಿ ತಂಬುಳಿ ತಿನ್ನಲು ರೆಡಿ.

ಟ್ರೆಂಡ್ ಆಯ್ತು ಹುಡುಗಿಯರ ಫೇವರೆಟ್ ಹೂವುಗಳ ಆಭರಣ

#ridgegourdplant #heereykayi #heerekayirecipe

Tags