18+ಜೀವನ ಶೈಲಿಸಂಬಂಧಗಳು

ಯಾವ ಸಮಯದಲ್ಲಿ ಸೆಕ್ಸ್ ಒಳ್ಳೆಯದಲ್ಲ ಒಂದಷ್ಟು ಸಲಹೆಗಳು

ಬೆಂಗಳೂರು, ಅ.15: ಸಂತಾನೋತ್ಪತ್ತಿಗೆ ಮಾತ್ರವಲ್ಲ ಗಂಡ-ಹೆಂಡತಿ ಸಂಬಂಧ ಬಲಪಡಿಸುವಲ್ಲಿ ಸೆಕ್ಸ್ ಪ್ರಮುಖ ಪಾತ್ರವಹಿಸುತ್ತದೆ. ಆಯುರ್ವೇದದಲ್ಲಿ ಕೂಡ ಸೆಕ್ಸ್‌ ನ ಮಹತ್ವದ ಬಗ್ಗೆ ಹೇಳಲಾಗಿದೆ. ಸೆಕ್ಸ್‌ ಹೇಗೆ ಒಳ್ಳೆಯದು, ಯಾವಾಗ ಒಳ್ಳೆಯದಲ್ಲ, ಎಷ್ಟು ದಿನಗಳಿಗೊಮ್ಮೆ ಸೆಕ್ಸ್ ಮಾಡುವುದು ಆರೋಗ್ಯಕರ ಎಂಬ ಮಾಹಿತಿ ನೋಡಿ ಇಲ್ಲಿದೆ.

1.  ಕೆಲವೊಂದು ಸಮಯದಲ್ಲಿ ಲೈಂಗಿಕ ಕ್ರಿಯೆ ಮಾಡಿದರೆ ವಾತದೋಷ ಉಂಟಾಗುತ್ತದೆ. ಮುಂಜಾನೆ ಅಥವಾ ಬೆಳಗ್ಗೆ 10 ಗಂಟೆಯೊಳಗೆ ಹಾಗೂ ಸಂಜೆ ಹೊತ್ತು ಲೈಂಗಿಕ ಕ್ರಿಯೆಯಲ್ಲಿತೊಡಗಿಕೊಳ್ಳುವುದು ಒಳ್ಳೆಯದು. ರಾತ್ರಿ ಹೊತ್ತು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಒಳ್ಳೆಯದಲ್ಲ ಎಂದು ಆಯುರ್ವೇದ ಹೇಳುತ್ತದೆ.2. ಚಳಿಗಾಲ ಹಾಗೂ ವಸಂತಕಾಲ ವಾರದಲ್ಲಿ 3-4 ಬಾರಿ ಲೈಂಗಿಕ ಕ್ರಿಯೆ ಮಾಡಬಹುದು. ಬೇಸಿಗೆಯಲ್ಲಿ ವಾರಕ್ಕೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು.

3. ಆರೋಗ್ಯಕರ ಆಹಾರ ಸೇವನೆ ಮಾಡಿ. ತುಪ್ಪ, ತೆಂಗಿನಕಾಯಿ ಹಾಲು, ಹಾಲು ಲೈಂಗಿಕ ಸಾಮರ್ಥ್ಯ ಹೆಚ್ಚಿಸುವುದು.

4. ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ.

5. ಲೈಂಗಿಕ ಕ್ರಿಯೆಯ ಬಳಿಕ ಸ್ನಾನ ಮಾಡಿ ಶುದ್ಧವಾದ ಉಡುಪು ಧರಿಸಿ.

Tags