ಆರೋಗ್ಯಆಹಾರಜೀವನ ಶೈಲಿ

ದುಬಾರಿ ಮಸಾಲಾ ಪದಾರ್ಥ “ಕೇಸರಿ” ಯ ಆರೋಗ್ಯ ಗುಣಗಳು

ಬೆಂಗಳೂರು, ಮೇ.26:

ಅಡುಗೆಮನೆಯಲ್ಲಿ ಸದಾ ಮಸಾಲೆ ಪದಾರ್ಥಗಳದ್ದೇ ಕಾರುಬಾರು! ಮಸಾಲೆಗಳ ಪೈಕಿ ಅತ್ಯಂತ ದುಬಾರಿಯಾದ ಮಸಾಲೆ ಎಂದರೆ ಕೇಸರಿ! ಕೆನ್ನೀಲಿ ಮತ್ತು ಹಳದಿ ಬಣ್ಣದ ಕೇಸರಿಯನ್ನು ಕ್ರೋಕಸ್ ಸ್ಯಾಟಿವಸ್ ಹೂವಿನಿಂದ ಪಡೆಯಲಾಗುತ್ತದೆ. ಕೇಸರಿಯನ್ನು ಬಹಳ ನಾಜೂಕಿನಿಂದ ತೆಗೆದು ನಂತರ ಒಣಗಿಸುತ್ತಾರೆ.

ಕೇಸರಿ ಅಗಾಧವಾದ ಶಕ್ತಿಯ ಆಗರ. ಒಂದು ಚಿಟಿಕೆ ಕೇಸರಿಯಲ್ಲೂ ಉತ್ತಮವಾದ ಆರೋಗ್ಯ ಗುಣಗಳಿವೆ! ತ್ವಚೆಯ ಆರೈಕೆ, ಜೀರ್ಣ ಕ್ರಿಯೆಗೆ ಸಹಾಯ, ಹುಣ್ಣುಗಳನ್ನು ಗುಣಪಡಿಸಲು ಹೀಗೆ ಅನೇಕ ಸಮಸ್ಯೆಗಳಿಗೆ ಔಷಧ ರೂಪದಲ್ಲಿ ಕೇಸರಿಯನ್ನು ಬಳಸಬಹುದು. ಬೆಲೆಬಾಳುವ ಕೇಸರಿಯ ಆರೋಗ್ಯಕರ ಸಂಗತಿಗಳನ್ನು ನಾವಿಂದು ತಿಳಿಯೋಣ.

ಜೀರ್ಣಕ್ರಿಯೆಗೆ ಸಹಾಯ ಮಾಡುವ ಕೇಸರಿಯು ರಕ್ತವನ್ನು ಶುದ್ದೀಕರಿಸುತ್ತದೆ. ಜೊತೆಗೆ ಹೊಟ್ಟೆ ಹುಣ್ಣುವಿಗೆ ಇದು ಉತ್ತಮ ಮದ್ದು. ಏಕಾಗ್ರತೆಯನ್ನು ಹೆಚ್ಚಿಸುವ ಶಕ್ತಿ ಕೇಸರಿಗಿದೆ. ಮರೆವಿನ ಸಮಸ್ಯೆ ಉಂಟಾದರೆ ಕೇಸರಿ ಚಹಾ ಕುಡಿದರೆ ಸಾಕು. ಪಾರ್ಕಿನ್ಸನ್‌ ಕಾಯಿಲೆಗಳನ್ನು ತಡೆಯಲು ಕೂಡಾ ಇದು ಸಹಕಾರಿ.

ಸಾಮಾನ್ಯವಾಗಿ ಕಾಡುವ ಶೀತ ಮತ್ತು ಗಂಟಲುನೋವಿಗೆ ಕೇಸರಿ ದಿವ್ಯೌಷಧಿ. ಇನ್ನೂ ಕೇಸರಿನಲ್ಲಿರುವ ಕ್ಯಾರೊಟಿ ನೈಡ್ ಗಳು ಕಣ್ಣಿನ ರಕ್ಷಣೆ ಮಾಡುತ್ತದೆ. ಕಣ್ಣಿನ ಆರೋಗ್ಯಕ್ಕೆ ಹೆಚ್ಚು ಬೇಕಾಗುವಂತಹ  ವಿಟಮಿನ್ ಎ ಯನ್ನು ಒದಗಿಸುತ್ತದೆ. ಕಣ್ಣಿನ ಪೊರೆ ತಡೆಯುವ ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ಕಣ್ಣುಗಳಿಗೆ ರಕ್ಷಣೆ ನೀಡುತ್ತದೆ.

ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ರಕ್ತಹೀನತೆಯನ್ನು ನಿವಾರಿಸುತ್ತದೆ.ಕೇಸರಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಕೆಟ್ಟ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಹೃದಯಾಘಾತವನ್ನು ತಡೆಯುತ್ತದೆ.

ಗರ್ಭಿಣಿಯರಿಗೂ ಕೂಡಾ ಕೇಸರಿ ಉತ್ತಮ. ಗರ್ಭಿಣಿಯಾದಾಗ ಹಾಲಿಗೆ ಒಂದು ಚಿಟಿಕೆ ಕೇಸರಿ ಹಾಕಿ ಕುಡಿಯುತ್ತಾರೆ.

ಒಟ್ಟಿನಲ್ಲಿ ಚಿಟಿಕೆ ಕೇಸರಿಯೂ ಕೂಡಾ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ನಾವಿಂದು ತಿಳಿದಾಯ್ತು. ದುಬಾರಿಯಾದ ಕೇಸರಿ ಸೇವಿಸಿ ಉತ್ತಮ ಆರೋಗ್ಯ ನಿಮ್ಮದಾಗಿಸಿ.

Image result for saffron and milk

ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ‘ಬಟರ್ ಪರಾಟ’

#safforn #balkaninews #saffronfoods

Tags