ಆರೋಗ್ಯಆಹಾರಜೀವನ ಶೈಲಿ

ಸಂಕ್ರಾಂತಿ ಸುಗ್ಗಿಗೆ ಮನೆಯಲ್ಲಿಯೇ ಮಾಡಿ ಸಿಹಿ ಸಕ್ಕರೆ ಅಚ್ಚು

ಬೆಂಗಳೂರು, ಜ.14: ಸಂಕ್ರಾಂತಿ ಹಬ್ಬ ಎಂದರೆ ಸಾಕು ಮನಸ್ಸಿಗೆ ಮೊದಲು ಬರುವುದೇ ಎಳ್ಳು ಬೆಲ್ಲ ಮತ್ತು ಸಕ್ಕರೆ ಅಚ್ಚು. ಇವುಗಳಿಲ್ಲದೇ ಹಬ್ಬವೇ ಆಗುವುದಿಲ್ಲ. ಎಳ್ಳು ಬೆಲ್ಲವನ್ನು ಸುಲಭವಾಗಿ ತಯಾರಿಸಬಹುದು. ಆದರೆ ಸಕ್ಕರೆ ಅಚ್ಚು ತಯಾರಿ ರೇಜಿಗೆ ಕೆಲಸ ಎಂದು ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕಯುಕ್ತ ಅಚ್ಚುಗಳನ್ನೇ ಕೊಂಡುಕೊಳ್ಳುತ್ತೇವೆ.

ಆದರೆ ಇದರ ತಯಾರಿಕೆಗೆ ಸ್ವಲ್ಪ ತಾಳ್ಮೆ ಮತ್ತು ಸಮಯ ನೀಡಿದರೆ ಆರೋಗ್ಯಕರವಾದ, ರುಚಿಕರವಾದ ಅಚ್ಚುಗಳನ್ನು ಮನೆಯಲ್ಲೇ ಮಾಡಬಹುದು.ಸಕ್ಕರೆ ಅಚ್ಚಿಗೆ ಬೇಕಾದ ಪದಾರ್ಥಗಳು:

ಸಕ್ಕರೆ ಅಚ್ಚು ತಯಾರಿಸುವ ಮರದ ಅಚ್ಚುಗಳನ್ನು ಹಿಂದಿನ ರಾತ್ರಿಯಿಂದಲೇ ನೀರಿನಲ್ಲಿ ನೆನೆಸಿ. ಸಕ್ಕರೆ ಅಚ್ಚು ಮಾಡುವ ಮುನ್ನಾ ಬಟ್ಟೆಯಿಂದ ಚೆನ್ನಾಗಿ ಒರೆಸಿ ನೀರಿಲ್ಲದೇ ಸ್ವಚ್ಛಗೊಳಿಸಿ. ನಂತರ ಅದರ ಜೊತೆ ಜೊತೆಗೆ ಅಚ್ಚುಗಳನ್ನು ರಬ್ಬರ್ ‍ಬ್ಯಾಂಡ್‍ ಹಾಕಿ ಸಿದ್ಧ ಮಾಡಿಟ್ಟುಕೊಳ್ಳಿ.

ಸಕ್ಕರೆ- 1 ಕಪ್‍

ಹಾಲು- ¼ ಕಪ್‍

ಮೊಸರು – ¼ ಕಪ್‍

ನೀರು – ¼ ಲೋಟ

ಶೋಧಿಸಲು ಬಿಳಿಯ ಶುದ್ಧ ಬಟ್ಟೆ.

ಮಾಡುವ ವಿಧಾನ:

ದಪ್ಪ ತಳದ ಪಾತ್ರೆಯಲ್ಲಿ 1 ಕಪ್‍ ಸಕ್ಕರೆಯೊಂದಿಗೆ ¼ ಕಪ್‍ ನೀರು ಹಾಕಿ ಕರಗಿಸಿ, ಕುದಿಸಿ. ಅದು ಕುದ್ದ ನಂತರ ¼ ಕಪ್‍ ಹಾಲು ಹಾಕಿ ಕುದಿಸಿದ ನಂತರ ಮತ್ತೆ ¼ ಕಪ್‍ ಮೊಸರು ಹಾಕಿ ಕುದಿಸಿ. ನಂತರ ಶುದ್ಧ ಬಿಳಿ ಬಟ್ಟೆಯ ಸಹಾಯದಿಂದ ಶೋಧಿಸಿದರೆ, ಸಕ್ಕರೆ ಅಚ್ಚಿನ ಸಿರಪ್‍ ಸಿದ್ಧ.

ಈ ಸಿರಪ್‍ ನ ಅರ್ಧ ಭಾಗವನ್ನು ಮತ್ತೊಂದು ಪಾತ್ರೆಗೆ ಹಾಕಿ ಕುದಿಸಿ. ಅದು ಯಾವ ಹದಕ್ಕೆ ಕುಯಬೇಕೆಂದರೆ ಚಮಚದಲ್ಲಿ ಸಿರಪ್‍ ತೆಗೆದುಕೊಂಡು ನೋಡಿದಾಗ, ಅದರಲ್ಲಿನ ಕುದಿಯುವ ಗುಳ್ಳೆ ಸ್ವಲ್ಪ ಹೊತ್ತು ಹಾಗೆ ಚಮಚದಲ್ಲಿ ನಿಲ್ಲುವಂತಿರಬೇಕು. ಅಲ್ಲಿಯತನಕ ಒಲೆಯ ಮೇಲಿಟ್ಟು ಸ್ವಲ್ಪ ಹೊತ್ತು ಕುದಿಸಿ. ಹರಳೆಣ್ಣೆಯ ಹದ ಬಂದ ನಂತರ ಈ ಸಿರಪ್‍ ಅನ್ನು ಮೌಲ್ಡ್‍ಗೆ ಹಾಕಿ. 5-10 ನಿಮಿಷ ಬಿಟ್ಟು ಟೂತ್‍ಪಿಕ್‍ ಸಹಾಯದಿಂದ ಅಚ್ಚುಗಳನ್ನು ತೆಗೆದರೆ ವಿಭಿನ್ನ ಆಕಾರದ ರುಚಿಕರ ಸಕ್ಕರೆ ಅಚ್ಚು ಸಿದ್ದ.

ಒಗ್ಗರಣೆ:

ಬೇಕದಾರೆ ಪೂರ್ತಿ ಸಿರಪ್‍ ಸಿದ್ಧವಾದ ಮೇಲೆ ಅದಕ್ಕೆ ಅರಿಶಿನ, ಕೇಸರಿ. ಕೊಬ್ಬರಿ ಪುಡಿ ಹೀಗೆ ನಿಮಗೆ ಇಷ್ಟವಾಗುವ ಫ್ಲೇವರ್ ಅನ್ನು ಹಾಕಿ ಮೌಲ್ಡ್ ‍ಗೆ ಹಾಕಿದರೆ ಕಲರ್-ಕಲರ್ ಅಚ್ಚು ಸಿದ್ದವಾಗುತ್ತದೆ.

ಟಿಪ್ಸ್:

ಮಾಡುವಾಗ ಅಚ್ಚು ಪುಡಿಯಾದರೆ ಅದನ್ನು ಸಕ್ಕರೆ ಪಾಕದ ಜೊತೆ ಮಿಶ್ರಣ ಮಾಡಿ ಪುನಃ ಬಳಕೆ ಮಾಡಿಕೊಳ್ಳಬಹುದು. ಗಟ್ಟಿ ಎನಿಸಿದರೆ ಸ್ವಲ್ಪ ನೀರು ಹಾಕಿ ಕುದಿಸಿ ಸಿರಪ್‍ ತಯಾರಿಸಿ ಸಕ್ಕರೆ ಅಚ್ಚು ತಯಾರಿಸಬಹುದು. 

#sakkareachchu #sankrantispecial #foods #balkaninews

Tags