ಜೀವನ ಶೈಲಿಫ್ಯಾಷನ್

ಸೀರೆಯ ಫ್ಯಾಶನ್ ಲೋಕ

ಭಾರತೀಯ ಸಾರಿ ಹೆಚ್ಚು 5000 ವರ್ಷಗಳ ಹಳೆಯದು. ಇದು ಮೊದಲ 3000 ಕ್ರಿ.ಪೂ. ಎಲ್ಲೋ ಬರೆದ ಋಗ್ವೇದ, ವಿಶ್ವದಲ್ಲೇ ಅತ್ಯಂತ ಹಳೆಯದಾದ ಸಾಹಿತ್ಯ, ಉಲ್ಲೇಖಿಸಲಾಗಿದೆ. ಸಾರಿ, ಮೂಲತಃ ಮಹಿಳೆಯರು, ಬಹುಶಃ ಮಾನವಕುಲದ ಇತಿಹಾಸದಲ್ಲೇ ಸುದೀರ್ಘವಾದ ಎಡೆಬಿಡದೆ ಬಳಸಿದ ಉಡುಗೆ.ಭಾರತೀಯ ನಾರಿ ಎಂದ ಕೂಡಲೆ ಮೊದಲು ನೆನಪಾಗುವುದು ಚೊಕ್ಕವಾಗಿ ಸೀರೆ ಉಟ್ಟ ಮಹಿಳೆ. ಸೀರೆಯು ನಮ್ಮ ಸಾಂಪ್ರದಾಯಿಕ ತೊಡುಗೆ. ಅವರು ಉಟ್ಟ ಸೀರೆಯನ್ನು ನೋಡಿ ಅವರು ಯಾವ ಪ್ರದೇಶಕ್ಕೆ ಸೇರಿದವರು ಎಂದೆಲ್ಲಾ ಗುರುತಿಸಬಹುದು. ಹಾಗೆಯೇ ಕೊಡವ ಸೀರೆಯನುಟ್ಟವರು  ಕೊಡಗಿನವರು, ಸಾಂಪ್ರದಾಯಿಕವಾಗಿ ಕಚ್ಚೆ ಉಟ್ಟವರು ತಮಿಳಿನವರು, ಕೇರಳದಲ್ಲಿ ಸೆಟ್ಟ್ ಮುಂಡ್, ಗುಜರಾತಿ ಸ್ಟೈಲ್, ಅಸ್ಸಾಂ ಸ್ಟೈಲ್ ಹೀಗೆ ಸೀರೆಯನ್ನು ಸಂಪ್ರದಾಯಕ್ಕೆ ತಕ್ಕಂತೆ ಉಡುತ್ತಾರೆ.

ಅಚ್ಚುಕಟ್ಟಾಗಿ ಸೀರೆ ಉಟ್ಟು,ಸುಂದರವಾಗಿ ಜಡೆ ಕಟ್ಟಿ, ಹಣೆಗೊಂದು ಬೊಟ್ಟು ಇಟ್ಟರೆ ಆಯಿತು.ಮಹಿಳೆಯರ ಅಂದವನ್ನು ಮತ್ತಷ್ಟು ಇಮ್ಮಡಿಗೊಳ‍್ಳಿಸುವ ಸೀರೆ ಯಾವತ್ತು ಔಟ್ ಆಫ್ ಫ್ಯಾಷನ್ ಆಗಿದ್ದಿಲ್ಲ. ಬದಲಿಗೆ ಹೊಸ ಹೊಸ ವಿನ್ಯಾಸವನ್ನು ಹೆಚ್ಚು ಪಡೆದಿದೆ. ಸಲ್ವಾರ್, ಕುರ್ತಾ, ಜೀನ್ಸ್, ಟಿ-ಶರ್ಟ್ ಗಳು ಮಹಿಳೆಯರ ಮನಸ್ಸನ್ನು ಗೆದ್ದಿದ್ದರೂ ಸೀರೆ ಮಾತ್ರ ಅವರ ಮನದಿಂದ ಮರೆಯಾಗಿಲ್ಲ, ಮರೆಯಾಗುವುದೂ ಇಲ್ಲ.ಸೀರೆ ಉಟ್ಟ ನಾರಿಯ ಲಕ್ಷಣವೇ ಬೇರೆ.ಅದನ್ನು ವರ್ಣಿಸಲು ಪದಗಳೇ ಸಿಗದು.

ಸಾಂಪ್ರದಾಯಿಕ ಉಡುಗೆಯಾದ ಸೀರೆಯಲ್ಲಿ ಇದೀಗ ನಾನ ತರಹದ  ವಿನ್ಯಾಸಗಳು ಕಾಣಸಿಗುತ್ತವೆ. ಅದೊಂದು ಕಾಲ ಆಗ ಎಲ್ಲೆಲ್ಲೂ ನೋಡಿದರೂ ಹಾಫ್ ಸಾರಿಯದ್ದೇ ಕಾರುಬಾರು. ಎಲ್ಲೆಲ್ಲೂ ನೋಡಿದರೂ ಹಾಫ್ ಸಾರಿ ಉಟ್ಟು ಮೆರೆದಾಡುತ್ತಿದ್ದ ಹುಡುಗಿಯರದ್ದೇ ಕಾರುಬಾರು. ಇದೀಗ ಹಾಫ್ ಸಾರಿ ಮತ್ತೊಮ್ಮೆ ಮಹಿಳೆಯರ ಮನ ಕದ್ದಿದೆ. ಲೆಹೆಂಗ ಫ್ಯಾಶನ್ ಎಂಬ ನೂತನ ವಿನ್ಯಾಸದ ಈ ಸಾರಿ ಹದಿಹರೆಯದ ಹೆಣ್ಮಕ್ಕಳ ಕಣ್ಮನ ಸೆಳೆದಿದೆ.ಯುವತಿಯರನ್ನು ಕೂಡ ಬಿಟ್ಟಿಲ್ಲ. ಎಲ್ಲೆಲ್ಲೂ ಲೆಹೆಂಗ ಫ್ಯಾಶನ್ ನದ್ದೇ ಸಾಮ್ರಾಜ್ಯ.

ನೋಡಲು ಆಕರ್ಷಕವಾಗಿರುವ ಲೆಹೆಂಗ ಸೀರೆಯ ಹೆಚ್ಚಿಸಿರುವುದು ಅದರಲ್ಲಿ ಹೆಣೆದಿರುವ ಸುಂದರವಾದ ಕಸೂತಿಗಳು. ಧಾರವಾಹಿ, ಸಿನಿಮಾ, ಮದುವೆ ಸಮಾರಂಭಗಳಲ್ಲಂತೂ ಅದೇ ಫ್ಯಾಶನ್ ಆಗಿ ಬಿಟ್ಟಿದೆ. ನಟಿ ಮಣೀಯರಂತೂ ಅದರಲ್ಲೇ ಜಗಮಗಿಸುತ್ತಾರೆ.ಲೆಹೆಂಗ ಸೀರೆ ಕೊಂಚ ದುಬಾರಿಯಾದರೂ ಎಲ್ಲರಿಗೂ ಅಚ್ಚುಮೆಚ್ಚು.ಉತ್ತರ ಭಾರತ ಮತ್ತು ಪಾಕಿಸ್ತಾನ ಒಂದು ಲೆಹೆಂಗ ಸೀರೆ ಮೇಲೆ ಕಸೂತಿ ಕೆಲಸ ಬಹಳಷ್ಟು ಮಾಡಲಾಗುತ್ತದೆ .

ಗುಜರಾತ್ ಮತ್ತು ರಾಜಸ್ಥಾನ ಗ್ರಾಮಾಂತರ ಮಹಿಳೆಯರು ಸಾಮಾನ್ಯವಾಗಿ ಲೆಹೆಂಗ ಜಿಪ್ಸಿ ಸ್ಕರ್ಟ್ ಒಂದು ರೂಪ ಧರಿಸುತ್ತಾರೆ. ಸಾಮಾನ್ಯವಾಗಿ ಈ ಉಡುಪುಗಳನ್ನು ವಿಶೇಷವಾಗಿ ರವಿಕೆ ಕನ್ನಡಿ ಕೆಲಸ ಮತ್ತು ಕಸೂತಿ ಅಲಂಕೃತವಾಗಿವೆ. ಈ ರವಿಕೆ ಮೇಲೆ ಅನೇಕ ಚೋಳಿಗಳನ್ನು ಕತ್ತರಿಸಿ ಜೋಡಿಸಿದಾಗ ಒಂದು ಅಪೇಕ್ಷಣೀಯ ನೋಟ ಹೆಚ್ಚು .

ದಕ್ಷಿಣದಲ್ಲಿ ಕಡಿಮೆ ಪ್ರಮಾಣದ ಲೆಹೆಂಗ ಸೀರೆಗಳು ಬಳಸಲಾಗುತ್ತದೆ . ಉತ್ತರದ ರಾಜ್ಯಗಳಲ್ಲಿ ಭಾರಿ ಗಾತ್ರದ ಫ್ಲಾರಿಂಗ್ ಲಂಗಗಳು, ಅರ್ಧ ಸೀರೆ ಧರಿಸುವುದು ಕುತ್ತಿಗೆಗೆ ವಸ್ತ್ರಧಾರಿ ಸ್ಕಾರ್ಫ್ ಜೊತೆಗೆ ಧರಿಸಲಾಗುತ್ತದೆ.

ಸೀರೆಯಲ್ಲಿ ಅನೇಕ ರೀತಿಯ ಸೀರೆಗಳಿವೆ. ಝರಿ ಸೀರೆ, ಕಾಟನ್ ಸೀರೆ, ಸಿಂತೆಟಿಕ್ ಸೀರೆ ಇತ್ಯಾದಿ.ಸೀರೆಯ ವಿನ್ಯಾಸದಲ್ಲಿ ಅನೇಕ ಸ್ಟೈಲ್ ಬರಬಹುದು ಆದರೆ ಸೀರೆಯನ್ನು ಹೀಗೆಯೇ ಉಡಬೇಕೆಂದಿಲ್ಲ ಯಾವ ಫ್ಯಾಶನ್ ನಲ್ಲಿ ಬೇಕಾದರೂ ಉಡಬಹುದು. ಸೀರೆಯಲ್ಲಿ ಕಂಫರ್ಟ್ ಆದ ಸೀರೆ ಕಾಟನ್ ಸೀರೆ. ಕಾಣಲು ಸರಳ ಹಾಗೂ ಸುಂದರ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಈ ಸೀರೆ ಉಪಯುಕ್ತ. ನೀಟಾಗಿ ಐರನ್ ಹಾಕಿ ಉಟ್ಟರೆ ಆಕರ್ಷಕವಾಗಿ ಕಾಣಬಹುದು. ಆಫೀಸ್ ಗೆ ಹೋಗುವಾಗ ಸರಳ ಸೀರೆ ಉಡಬಹುದು ಹಾಗೂ ಪಾರ್ಟಿ-ಸಮಾರಂಭಗಳಿಗೆ ಹೋಗುವಾಗ ಗ್ರ್ಯಾಂಡ್ ಸೀರೆ ಉಟ್ಟರೆ ಚೆನ್ನ.

ಇನ್ನು ತುಂಬಾ ಬೆಲೆ ಕೊಟ್ಟು ಖರೀದಿಸಿದ ಝರಿ ಸೀರೆ ಹಾಳಾದರೆ ತುಂಬಾ ಬೇಸರವಾಗುತ್ತೆ. ಎಂಬ್ರಾಯ್ಡರಿ, ಝರಿ ಇನ್ನಿತರ ದುಬಾರಿ ಸೀರೆಗಳು ತುಂಬಾ ಸೂಕ್ಷ್ಮ. ಅದರ ನಿರ್ವಹಣೆಯಲ್ಲಿ ಒಂದಿಷ್ಟು ವ್ಯತ್ಯಾಸವಾದರೂ ಲುಕ್ ಕಳೆದುಕೊಳ್ಳುತ್ತೆ. ಸಾಮಾನ್ಯವಾಗಿ ಬ್ಲೌಸ್ ಹಾಕಿ ಸೀರೆ ಉಡಲಾಗುವುದು. ಆದರೆ ಈಗ ಸೀರೆ ಉಟ್ಟು ಅದರ ಮೇಲೆ ಕೋಟ್ ರೀತಿಯ ಬ್ಲೌಸ್ , ಹಾಗೂ ಶಾಲ್ ರೀತಿಯಲ್ಲಿ ಕೂಡ ಹಾಕುವುದು ಈಗಿನ ಟ್ರೆಂಡ್ . ಸೀರೆಗೆ  ತಕ್ಕಂತೆ ಮೇಕಪ್ ಮಾಡಿದರೆ ಪಾರ್ಟಿ-ಸಮಾರಂಭಗಳಲ್ಲಿ ಸುಂದರವಾಗಿ ಕಾಣಿಸಬಹುದು. ಈಗೇನಿದ್ದರೂ ಫ್ಯಾಶನ್ ಲೋಕ ಹೊಸ ಹೊಸ  ಫ್ಯಾಶನ್ ಬಂದರೂ ಮತ್ತೆ ಹಳೆ ಫ್ಯಾಶನ್ ಮರುಕಳಿಸುವುದರಲ್ಲಿ ಸಂಶಯವಿಲ್ಲ.

ಸುಹಾನಿ ಬಡೆಕ್ಕಿಲ.

 

Tags

Related Articles

Leave a Reply

Your email address will not be published. Required fields are marked *