ಆಹಾರಜೀವನ ಶೈಲಿ

ಬಿಸಿ ಬಿಸಿಯಾದ ಸ್ಕ್ರಾಂಬಲ್ಡ್ ಎಗ್ ಮಾಡುವ ವಿಧಾನ

ಬಹಳಷ್ಟು ಜನರಿಗೆ ಮೊಟ್ಟೆಯಿಂದ ಮಾಡಿದ ತಿನಿಸುಗಳೆಂದರೆ ಬಹಳ ಇಷ್ಟ. ಕೊನೆಗೆ ಏನೂ ಹದ ಹಾಕದ ಬರೀ ಬೇಯಿಸಿದ ಮೊಟ್ಟೆಯಾದರೂ ಸರಿ ಇಷ್ಟಪಟ್ಟು ತಿನ್ನುವ ಮಂದಿ ಅನೇಕ ಮಂದಿ ಇದ್ದಾರೆ. ಅದಕ್ಕೆ ಇಲ್ಲಿ ಮೊಟ್ಟೆ ಪ್ರಿಯರಿಗಾಗಿ ಬಿಸಿ ಬಿಸಿಯಾದ, ರುಚಿಯಾದ, ಸುಲಭವಾಗಿ ಸ್ಕ್ರಾಂಬಲ್ಡ್ ಎಗ್ ಮಾಡುವುದು ಹೇಗೆ ಎಂಬುದನ್ನು ಕೊಡಲಾಗಿದೆ. ನೀವು ಟ್ರೈ ಮಾಡಿ. ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ…

Image result for scrambled egg

ಬೇಕಾಗುವ ಪದಾರ್ಥಗಳು

ಬ್ರೆಡ್ ಸ್ಲೈಸ್-4, ಬೆಣ್ಣೆ-1/2 ಟೇಬಲ್ ಚಮಚ, ಪುದೀನಾ-2 ಟೇಬಲ್ ಚಮಚ, ಈರುಳ್ಳಿ-1, ಮೊಟ್ಟೆ-2-3, ಮೆಣಸಿನಪುಡಿ-1/2 ಟೇಬಲ್ ಚಮಚ.

ಮಾಡುವ ವಿಧಾನ

ಪ್ಯಾನ್ ನಲ್ಲಿ ಬೆಣ್ಣೆ, ಬ್ರೆಡ್ ಹಾಕಿ ರೋಸ್ಟ್ ಮಾಡಿ ತೆಗೆದಿಡಿ. ನಂತರ ಬೆಣ್ಣೆ, ಹೆಚ್ಚಿದ ಪುದೀನಾ, ಈರುಳ್ಳಿ, ಉಪ್ಪು, ಇಂಗು ಸೇರಿಸಿ ಫ್ರೈ ಮಾಡಿ ನಂತರ ಇದರ ಮೇಲೆ ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಕಲಕಿ. ಕೊನೆಯಲ್ಲಿ ಮೆಣಸಿನ ಪುಡಿ, ಉಪ್ಪು ಸೇರಿಸಿದರೆ ಸ್ಪೈಸಿಯಾದ ಸ್ಕ್ರಾಂಬಲ್ಡ್ ಎಗ್ ಎಗ್ ತಿನ್ನಲು ರೆಡಿ.

ಸ್ವಾದಿಷ್ಟಕರ ಎಳ್ಳು ಹೋಳಿಗೆ ಮಾಡುವ ವಿಧಾನ

#balkaninews #egg #food #deliciousfood #eggrecipe

Tags