ಆರೋಗ್ಯಜೀವನ ಶೈಲಿಮಹಿಳೆ

ಗರ್ಭನಿರೋಧಕ ಮಾತ್ರೆಗಳು ಎಷ್ಟು ಸುರಕ್ಷಿತ?

ಗರ್ಭನಿರೋಧಕ ಮಾತ್ರೆಗಳ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭಿಪ್ರಾಯವಿದೆ. ಮಾತ್ರೆ ತೆಗೆದುಕೊಂಡರೆ ಅಡ್ಡಪರಿಣಾಮ ಹೆಚ್ಚು ಎಂದು ಕೆಲವರು ಹೇಳಿದರೆ, ಮತ್ತೆ ಕೆಲ ತಜ್ಞ ವೈದ್ಯರು ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಇದು ಸಂಪೂರ್ಣ ಸುರಕ್ಷಿತ ಎನ್ನುತ್ತಾರೆ. ಹಾಗಾದರೆ ಯಾವುದು ಸರಿ? ಯಾವುದು ತಪ್ಪು? ಇಲ್ಲಿ ಕೆಲವು ತಜ್ಞರು ಹೇಳಿರುವ ಮಾಹಿತಿಗಳನ್ನು ಕ್ರೋಢಿಕರಿಸಿ ಕೊಡಲಾಗಿದೆ. ಓದಿ, ನಿಮಗೆ ಸರಿ ಎನಿಸದಿದ್ದರೆ ನಿಮ್ಮ ಕುಟುಂಬ ವೈದ್ಯರ ಸಲಹೆ ಪಡೆದು ಆ ನಂತರ ಗರ್ಭನಿರೋಧಕ ಮಾತ್ರೆ ಸೇವನೆ ಮಾಡುವುದು ಒಳಿತು.

Image result for contraceptive pills

ಬಹುತೇಕ ವರದಿಗಳ ಪ್ರಕಾರ ಗರ್ಭ ನಿರೋಧಕಗಳಿಗಿಂತ ಮಾತ್ರೆ ಸೇವನೆ ಒಳ್ಳೆಯದು. ಏಕೆಂದರೆ ಇತರೆ ವಿಧಾನಗಳಲ್ಲಿ ಶೇ. 5ರಷ್ಟು ಗರ್ಭಧರಿಸುವ ಸಾಧ್ಯತೆ ಇರುತ್ತದೆ. ಆದರೆ ಸರಿಯಾದ ಸಮಯ ಹಾಗೂ ಪ್ರತಿ ತಿಂಗಳ 21 ದಿನದವರೆಗೆ ನಿಯಮಿತವಾಗಿ ಮಾತ್ರೆ ಸೇವಿಸಿದರೆ ಶೇ. 100ರಷ್ಟು ಗರ್ಭ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.

ಹಾಗೆಯೇ ಗರ್ಭ ನಿರೋಧಕ ಮಾತ್ರೆಗಳು ಸಂಪೂರ್ಣ ಸುರಕ್ಷಿತವಾಗಿವೆ. ಇದರಿಂದ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಕಾಪರ್ ಟಿ ಎಂಬ ಸಾಧನವನ್ನು ಮಹಿಳೆಯರಿಗೆ ಬೇಡದ ಗರ್ಭಧಾರಣೆಯನ್ನು ತಡೆಯಲು ಗರ್ಭಕೋಶದಲ್ಲಿ ಅಳವಡಿಸಲಾಗುತ್ತದೆ. ಕಾಪರ್ ಟಿ ಧರಿಸಿದ್ದರೂ ಸಹ ಗರ್ಭಧಾರಣೆ ಆಗಿರುವ ಸಾಕಷ್ಟು ಉದಾಹರಣೆಗಳಿವೆ. ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಿದರೆ ಬೇಡದ ಗರ್ಭಧಾರಣೆಯನ್ನು ತಡೆಯಬಹುದು. ಆದರೆ, ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದು ಒಳಿತು.

ಮದ್ಯಪಾನ ಮಾಡೋದ್ರಿಂದ ಹೆಚ್ಚಾಗುತ್ತೆ ಲೈಂಗಿಕ ಸಮಸ್ಯೆಗಳು!

#balkaninews #health #contraceptivepills #lifestyle

Tags