18+ಜೀವನ ಶೈಲಿ

ಸೆಕ್ಸ್ ಎಂದರೆ ಕೆಲವು ಮಹಿಳೆಯರು ’ಛೀ’ ಎನ್ನುತ್ತಾರೆ ಯಾಕೆ?

ಮೂಡಿಯಾಗಿ ಇರುವವರು ಸೆಕ್ಸ್ ಸಮಯದಲ್ಲಿ ಆಸಕ್ತಿ ತೋರಿಸಲ್ಲ...

ಲೈಂಗಿಕತೆ ಎಂದರೆ ಕೆಲವು ಮಹಿಳೆಯರು ’ಛೀ’ ಎನ್ನುತ್ತಾರೆ ಯಾಕೆ?

ಸೆಕ್ಸ್  ಯಾ ಲೈಂಗಿಕತೆ ಎಂದ ಕೂಡಲೆ ಕೆಲವು ಮಹಿಳೆಯರ ಬಾಯಿಂದ ’ಛೀ’… ಎಂಬ ಉದ್ಗಾರ ಹೊರಡುತ್ತದೆ ಎಂದು ಕೆಲವು ಗಂಡದಿರು ಆರೋಪಿಸುತ್ತಿರುತ್ತಾರೆ. ಇಷ್ಟಕ್ಕೂ ಈ ರೀತಿ ಯಾಕೆ ವರ್ತಿಸುತ್ತಿರುತ್ತಾರೆ ಎಂದು ತಜ್ಞರನ್ನು ಕೇಳಿದರೆ, ಅವರು ಈ ರೀತಿ ವಿವರ ನೀಡುತ್ತಾರೆ.

ಬಹಳಷ್ಟು ಮಂದಿ ಹುಡುಗಿಯರಿಗೆ ಚಿಕ್ಕಂದಿನಿಂದ ಲೈಂಗಿಕತೆ ಎಂಬ ಪದ ಮೇಲೆ ತುಂಬಾ ವಿರೋಧ ಭಾವ ಇರುತ್ತದೆ. ಹಾಗಾಗಿ ಮಹಿಳೆ ಎಲ್ಲಾ ರೀತಿಯಲ್ಲೂ ಆರೋಗ್ಯವಾಗಿದ್ದರೂ ಶೃಂಗಾರದ ಬಗ್ಗೆ ಚರ್ಚೆ, ಆ ಪದ ಕೇಳಿದರೆ ಅಸಹ್ಯ ಪಡುತ್ತಿರುತ್ತಾರೆ.

ಸೆಕ್ಸ್ ಎಂದರೆ ತಪ್ಪಾಗಿ ಭಾವಿಸುತ್ತಾರೆ. ಅಷ್ಟೇ ಅಲ್ಲ ಚಿಕ್ಕಂದಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದವರಲ್ಲಿ ಇಂತಹ ಸಮಸ್ಯೆ ಇನ್ನಷ್ಟು ಹೆಚ್ಚಾಗಿ ಕಾಣಿಸುತ್ತದೆ. ಇಂತಹವರು ವಿವಾಹವಾದರೂ ಆ ಭಾವನೆಯಿಂದ ಹೊರಬರದೆ ಒದ್ದಾಡುತ್ತಿರುತ್ತಾರೆ.

ಇನ್ನೂ ಕೆಲವು ಮಹಿಳೆಯರು ಸಂತೃಪ್ತಿಯಾಗಿ ಸೆಕ್ಸ್‌ನಲ್ಲಿ ಪಾಲ್ಗೊಂಡರೂ ಒಳಗೊಳಗೆ ಭಯ ಉಂಟಾಗುವುದರಿಂದ ಆ ಸಮಯದಲ್ಲಿ ಅವರಿಂದ ಸ್ರಾವಗಳು ಬಿಡುಗಡೆಯಾಗಲ್ಲ. ಇದರಿಂದ ಲೈಂಗಿಕತೆಯಲ್ಲಿ ಪಾಲ್ಗೊಳ್ಳೋಣ  ಎಂದರೂ ಆನಂದ ಅವರಲ್ಲಿ ಕಾಣಿಸಲ್ಲ. ಚಿಕ್ಕಂದಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗುವುದು, ಲೈಂಗಿಕ ಪರಿಜ್ಞಾನ ಇಲ್ಲದಿರುವುದು ಇನ್ನಿತರೆ ಕಾರಣಗಳು ಇದಕ್ಕೆ ಪ್ರಮುಖ ಕಾರಣ ಎನ್ನುತ್ತಿದ್ದಾರೆ ತಜ್ಞರು.

ಇವೆಲ್ಲಕ್ಕಿಂತಲೂ ಮುಖ್ಯವಾಗಿ, ಅನಾನುಕೂಲತೆ ಯಾ ಚಡಪಡಿಕೆಯಿಂದಿರುವುದು, ಮೂಡಿಯಾಗಿ ಇರುವುದರಿಂದ ಸೆಕ್ಸ್ ಸಮಯದಲ್ಲಿ ಆಸಕ್ತಿ ತೋರಿಸಲ್ಲ. ಇಂತಹ ಸಮಸ್ಯೆಗಳಿಂದ ಹೊರಬರಲು ತಜ್ಞರ ಬಳಿ ಕೌನ್ಸೆಲಿಂಗ್ ತೆಗೆದುಕೊಂಡರೆ ಉತ್ತಮ ಫಲಿತಾಂಶ ಪಡೆಯಬಹುದು.

 

Tags