18+ಜೀವನ ಶೈಲಿ

ಸೆಕ್ಸ್ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸತ್ಯ ಸಂಗತಿಗಳು

ಸೆಕ್ಸ್ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸತ್ಯ ಸಂಗತಿಗಳು

ಸೆಕ್ಸ್ ಬಗ್ಗೆ ನಮಗೆ ಎಲ್ಲವೂ ಗೊತ್ತು ಎಂದು ಬಹಳಷ್ಟು ಮಂದಿ ದೊಡ್ಡದಾಗಿ ಹೇಳಿಕೊಳ್ಳುತ್ತಾರೆ. ನಿಜವಾಗಿ ಸೆಕ್ಸ್ ನಲ್ಲಿ ಅದೆಷ್ಟೋ ಗೊತ್ತಿಲ್ಲದ ಸಂಗತಿಗಳಿವೆ. ಅಚ್ಚರಿಗೊಳಿಸುವ ವಾಸ್ತವಗಳು, ನಿಜವೇ ಎಂದು ಅನ್ನಿಸುವ ನಿಜಗಳು ಸಹ ಬಹಳಷ್ಟಿವೆ. ಅವುಗಳಲಿ ಕೆಲವು ನಿಮಗಾಗಿ.

* ಆರೋಗ್ಯಕರವಾದ ಪುರುಷನ ದೇಹದಿಂದ ಎರಡು ವಾರಗಳಲ್ಲಿ ಉತ್ಪತ್ತಿಯಾಗುವ ವೀರ್ಯದಲ್ಲಿ ಜಗತ್ತಿನಲ್ಲಿ ಇರುವ ಸ್ತ್ರೀಯರಿಗೆಲ್ಲರಿಗೂ ಗರ್ಭಧಾರಣೆ ಮಾಡಬಹುದು.

* ವೀರ್ಯಾಣುಗಳು ದೇಹದಿಂದ ಹೊರಗೆ ಕೆಲವು ಗಂಟೆಗಳ ಕಾಲ ಮಾತ್ರ ಜೀವಿಸುತ್ತವೆ. ಅದೇ ರೀತಿ ಸ್ತ್ರೀ ಜನನಾಂಗದಲ್ಲಿ ಪ್ರವೇಶಿಸಿದರೆ 3 ರಿಂದ 5 ದಿನಗಳ ಕಾಲ ಜೀವಿಸುತ್ತವೆ.

* ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಮಾಡಿದರೆ ಮೂತ್ರನಾಳದಲ್ಲಿ ಬರುವ ಸೋಂಕನ್ನು ತಕ್ಕಮಟ್ಟಿಗೆ ತಡೆಯಬಹುದು. ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸೆಕ್ಸ್ ಸಾಕಷ್ಟು ಸಹಕರಿಸುತ್ತದೆ. ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡ ಬಳಿಕ ರಕ್ತದ ಒತ್ತಡ ಕಡಿಮೆಯಾಗುತ್ತದೆ, ಆಯಾಸ ಸಹ ನಿವಾರಣೆಯಾಗುತ್ತದೆ.

* ತಲೆನೋವು ಕಡಿಮೆ ಮಾಡುವ ಸಹಜ ಔಷಧ ಸೆಕ್ಸ್. ಮಹಿಳೆಯರ ಮುಟ್ಟು (ಪೀರಿಯಡ್ಸ್) ಬರುವ ಮೊದಲ ದಿನಗಳಲ್ಲಿ ಸೆಕ್ಸ್ ಬಗ್ಗೆ ತುಂಬಾ ಆಸಕ್ತಿ ತೋರುತ್ತಾರೆ. ಸೆಕ್ಸ್ನಲ್ಲಿ ಭಾವಪ್ರಾಪ್ತಿ ಪಡೆಯುವ ಸಮಯದಲ್ಲಿ ಹೃದಯ ನಿಮಿಷಕ್ಕೆ 140 ಸಲ ಹೊಡೆದುಕೊಳ್ಳುತ್ತದೆ.

* ಸ್ತ್ರೀಯರು ಸ್ವಯಂ ತೃಪ್ತಿ ಪಡೆಯುವಾಗ 4 ನಿಮಿಷಗಳಲ್ಲೇ ಭಾವಪ್ರಾಪ್ತಿ ನಡೆಯುತ್ತದೆ. ಅದೇ ಸೆಕ್ಸ್ನಲ್ಲಿ ಪಾಲ್ಗೊಂಡಾಗ 10 ರಿಂದ 20 ನಿಮಿಷಗಳು ಬೇಕಾಗುತ್ತದೆ. ಹೆಚ್ಚು ಮಂದಿ ಸ್ತ್ರೀಯರು ತುಂಬಾ ಬೆಳಕಿರುವ ಕೋಣೆಗಿಂತ ಕಡಿಮೆ ಬೆಳಕಿರುವ ಅಥವಾ ಕತ್ತಲು ಇರುವ ಕೋಣೆಯಲ್ಲಿ ಸೆಕ್ಸ್ ಮಾಡಲು ಇಷ್ಟಪಡುತ್ತಾರೆ.

Tags