18+ಜೀವನ ಶೈಲಿ

ಸೆಕ್ಸ್‌ ಗೆ ಒಳ್ಳೆ ಮೂಡ್ ಬರುವ ವಾರಗಳು ಇವೇ ನೋಡಿ..!

ಸೆಕ್ಸ್ ಬಗೆಗಿನ ಕುತೂಹಲಕಾರಿ ವಿಷಯಗಳು

ಬೆಂಗಳೂರು: ಬೇರೆ ದೇಶಗಳಲ್ಲಿ ಸೆಕ್ಸ್ ಎಂಬುದು ಎಲ್ಲರಿಗೂ ಬಹಿರಂಗ ವಿಚಾರ. ಆದರೂ ನಮ್ಮ ದೇಶದಲ್ಲಿ ಮಾತ್ರ ಇದು ಇನ್ನೂ ರಹಸ್ಯ ವಿಷಯವಾಗಿ ಇದೆ. ಆದರೆ ಶೃಂಗಾರದಲ್ಲಿ ಯಾವಾಗ ಪಾಲ್ಗೊಳ್ಳಬೇಕು, ಯಾವ ದಿನ ಒಳ್ಳೆಯದು ಎಂಬ ಸಂಗತಿಗಳ ಬಗ್ಗೆ ಸಂಸ್ಥೆಯೊಂದು ಸಮೀಕ್ಷೆ ನಡೆಸಿತು. ಈ ಸಮೀಕ್ಷೆಯಲ್ಲಿ ಅನೇಕ ಕುತೂಹಲಕರ ಸಂಗತಿಗಳು ಬೆಳಕು ಕಂಡಿವೆ. ಆ ವಿವರಗಳು ಈ ರೀತಿ ಇವೆ.

ದಿನಗಳು

ಸೆಕ್ಸ್ ಟಾಯ್ಸ್ ತಯಾರಿಸುವ ‘ಲವ್ ಹನಿ’ ಎಂಬ ಸಂಸ್ಥೆ ಸುಮಾರು ಮೂರು ಸಾವಿರ ಮಂದಿ ಮೇಲೆ ಈ ಸಮೀಕ್ಷೆ ನಡೆಸಿತು. ಆ ಸಮೀಕ್ಷೆ ಪ್ರಕಾರ ವಾರದಲ್ಲಿ ಉಳಿದ ದಿನಗಳಿಗೆ ಹೋಲಿಸಿದರೆ ಶೇ.44ರಷ್ಟು ಮಂದಿ ದಂಪತಿಗಳು ಶನಿ, ಭಾನುವಾರಗಳಲ್ಲಿ ಸೆಕ್ಸ್‌‍ ನಲ್ಲಿ ಹೆಚ್ಚಾಗಿ ಇಷ್ಟಪಡುತ್ತಿರುವ ಸಂಗತಿ ಗೊತ್ತಾಗಿದೆ. ಭಾನುವಾರ ಶೇ.16 ಮಂದಿ, ಶುಕ್ರವಾರ ಶೇ.23ಮಂದಿ ಸೆಕ್ಸ್ ಬಗ್ಗೆ ಆಸಕ್ತಿ ತೋರಿದ್ದಾರೆ.

ಶನಿವಾರದ ದಿನ

ಶನಿವಾರ ಸಂಜೆ 7.30 ಸಮಯಕ್ಕೆ ಬಹಳಷ್ಟು ಮಂದಿ ದಂಪತಿಗಳು ಸೆಕ್ಸ್‌ ಲೈಫ್ ಎಂಜಾಯ್ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಬೆಳಗ್ಗೆ ನಿದ್ದೆಯಿಂದ ಏಳುವ ಸಮಯದಲ್ಲಿ ಪುರುಷರಲ್ಲಿ ಶೃಂಗಾರ ಬಯಕೆಗಳು ಹೆಚ್ಚಾಗಿ ಇರುತ್ತವಂತೆ. ಆದರೆ ಕೆಲವು ಸಲ ಸಂಜೆ 4.30 ಗಂಟೆಗೆ ಸಹ ಅಂತಹ ಬಯಕೆಗಳು ಹುಟ್ಟುತ್ತಿವೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಕೆಲಸಗಳ ಒತ್ತಡ

ಬೆಳಗಿನ ಜಾವ ಸೆಕ್ಸ್‌ ಎಂಜಾಯ್ ಮಾಡಲು ಶೇ.10 ಮಂದಿ ಪುರುಷರು ಸಿದ್ದವಾಗುತ್ತಿದ್ದಾರೆ. ಎಲ್ಲಕ್ಕಿಂತಲೂ ಮಂಗಳವಾರ ಅತಿ ಕಡಿಮೆ ಮಂದಿ ಶೃಂಗಾರದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರುತ್ತಿದ್ದಾರಂತೆ. ಅದರ ಬಳಿಕದ ಸ್ಥಾನದಲ್ಲಿ ಗುರುವಾರ ಇದೆ.

ಉಳಿದ ವಾರಗಳಾದರೆ ಸೋಮವಾರ ಶೇ.8ರಷ್ಟು ಮಂದಿ, ಬುಧವಾರ ಶೇ.7ರಷ್ಟು ಮಂದಿ ಶೃಂಗಾರದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ವಾರದಲ್ಲಿ ನಾಲ್ಕು ಸಲ ಶೃಂಗಾರದಲ್ಲಿ ಪಾಲ್ಗೊಳ್ಳುವ ದಂಪತಿಗಳು ಸಹಜವಾದ ವಯಸ್ಸಿಗಿಂತ ಹತ್ತು ವರ್ಷ ಚಿಕ್ಕವರಾಗಿ ಕಾಣುತ್ತಿದ್ದಾರೆ ಎಂಬುದು ಸಂಶೋಧನೆಯಲ್ಲಿ ಗೊತ್ತಾಗಿದೆ.

Tags