18+ಜೀವನ ಶೈಲಿ

ಯುವಕರಲ್ಲಿ ಸೆಕ್ಸ್ ಸಾಮರ್ಥ್ಯ ಕುಗ್ಗಲು ಕಾರಣಗಳು, ಹೆಚ್ಚಿಸಿಕೊಳ್ಳುವುದು ಹೇಗೆ?

ಯುವಕರಲ್ಲಿ ಸೆಕ್ಸ್ ಸಾಮರ್ಥ್ಯ ಕುಗ್ಗಲು ಕಾರಣಗಳು, ಹೆಚ್ಚಿಸಿಕೊಳ್ಳುವುದು ಹೇಗೆ?

ಇಂದಿನ ಯುವಕರಲ್ಲಿ ಶೃಂಗಾರ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣಗಳನ್ನು ಸಹ ಸಮೀಕ್ಷೆಗಳ ತಿಳಿಯುವ ಪ್ರಯತ್ನ  ಮಾಡುತ್ತಿದ್ದಾರೆ. ಲೈಂಗಿಕ ಸಾಮರ್ಥ್ಯ, ಆಸಕ್ತಿ ಕಡಿಮೆಯಾಗಲು ಮಾನಸಿಕ, ದೈಹಿಕ ಆರೋಗ್ಯ ಸಮಸ್ಯೆಗಳು ಸಹ ಕಾರಣವಾಗುತ್ತವೆ. ಬಹಳಷ್ಟು ಮಂದಿಯಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಆಸಕ್ತಿ ಕುಗ್ಗುತ್ತಿರುತ್ತದೆ. ಇದರ ಜತೆಗೆ ಇಂದಿನ ಆಹಾರ ಶೈಲಿ ಸಹ ಇನ್ನೊಂದು ಕಾರಣ. ಕಡಿಮೆಯಾಗುತ್ತಿರುವ ಲೈಂಗಿಕ  ಪಟುತ್ವವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ.

ಈ ಸಮಸ್ಯೆಯಿಂದ ಹೊರಬರಬೇಕಾದ್ದರೆ ಪ್ರತಿ ದಿನ ಕಡ್ಡಾಯವಾಗಿ ವ್ಯಾಯಾಮ ಮಾಡಬೇಕು. ಒತ್ತಡದಿಂದ ದೂರ ಇರಬೇಕು. ತಿನ್ನುವ ಆಹಾರದ ವಿಚಾರದಲ್ಲಿ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ಶರ್ಕರಪಿಷ್ಟಗಳು, ಪ್ರೋಟೀನ್, ಕೊಬ್ಬು, ಖನಿಜಲವಣಗಳು, ಫೈಬರ್ ಅಂಶ ಹೆಚ್ಚಾಗಿರುವ ಆಹಾರವನ್ನು ತೆಗೆದುಕೊಳ್ಳಬೇಕು. ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್‍ ಗಳಿಂದ ಕೂಡಿರುವ ಹಣ್ಣು, ಸೊಪ್ಪುಗಳನ್ನು ಆಹಾರದಲ್ಲಿ ತೆಗೆದುಕೊಳ್ಳಬೇಕು.

ಬಾದಾಮಿ, ಗೋಡಂಬಿ, ಆಕ್ರೋಟ್ಸ್‌ ನಂತಹ ಡ್ರೈಫ್ರೂಟ್ಸ್ ತೆಗೆದುಕೊಳ್ಳಬೇಕು. ಇವುಗಳಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವ ಸೆಲಿನಿಯಂ, ಜಿಂಕ್ ಜತೆಗೆ ಇತರೆ ಪೋಷಕಾಂಶಗಳಿರುತ್ತವೆ. ಇವು ಮಿದುಳಿನಲ್ಲಿನ ಡೋಪಮೈನ್ ಪ್ರಮಾಣವನ್ನು ಹೆಚ್ಚಿಸಲು ಸಹಕಾರಿ. ಈ ಡೋಪಮೈನ್‌ನಿಂದ ಶೃಂಗಾರ ಬಯಕೆಗಳು ಹೆಚ್ಚುತ್ತವೆ.

ಪ್ರೋಟೀನ್ ಹೇರಳವಾಗಿ ಲಭಿಸುವ ಮೊಟ್ಟೆಯನ್ನು ಪ್ರತಿದಿನ ತೆಗೆದುಕೊಂಡರೆ ಆಯಾಸ ದೂರವಗುತ್ತದೆ. ಕಳೆದುಹೋದ ಶಕ್ತಿ ಮತ್ತೆ ಗಳಿಸಲು ಸಹಕಾರಿ. ನಿಮಿರುವ ಸಾಮರ್ಥ್ಯ ಕಡಿಮೆಯಾಗದಂತೆ ರಕ್ಷಿಸುವ ಅಮಿನೋ ಆಮ್ಲಗಳು ಮೊಟ್ಟೆಯ ಮೂಲಕ ಲಭಿಸುತ್ತವೆ.

ಸ್ಟ್ರಾಬೆರಿ ಬೀಜಗಳಲ್ಲಿ ಜಿಂಕ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ವೀರ್ಯ ಉತ್ಪತ್ತಿಗೆ ಅಗತ್ಯವಾದ ಪುರುಷ  ಹಾರ್ಮೋನ್ ಟೆಸ್ಟೋಸ್ಟಿರಾನನ್ನು ಜಿಂಕ್ ನಿಯಂತ್ರಿಸುತ್ತದೆ. ಸೆಕ್ಸ್ ಬಯಕೆಗಳನ್ನು ಉದ್ದೀಪನಗೊಳಿಸುತ್ತದೆ. ಕಾಫಿಯಲ್ಲಿನ ಕೆಫೈನ್ ಮೆಟಾಬಾಲಿಸಂನ್ನು ಉತ್ತಮಪಡಿಸುತ್ತದೆ. ರಕ್ತ ಸಂಚಲವನ್ನು ಹೆಚ್ಚಿಸಿ ಫ್ಯಾಟ್ ಸ್ಟೋರ್ ಅನ್ನು ಬಿಡುಗಡೆ ಮಾಡಿ ರಾತ್ರಿಗೆ ಸರಿಹೊಂದುವ ಶಕ್ತಿಯನ್ನು ನೀಡುತ್ತದೆ

Tags