18+ಜೀವನ ಶೈಲಿ

ನಾಲ್ಕು ಸಲ ರತಿಕ್ರೀಡೆಯಲ್ಲಿ ಪಾಲ್ಗೊಂಡರೆ ಅದಕ್ಕೆ ಮೀರಿದ ಔಷಧ ಇನ್ನೊಂದಿಲ್ಲ…!!!

ಕಿಡ್ನಿಯಲ್ಲಿನ ಕಲ್ಲು ಕರುಗಿಸಲು ಇಲ್ಲಿದೆ ಉಪಾಯ

ಬೆಂಗಳೂರು, ಅ,06: ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡ ಕೂಡಲೇ ಕೆಲವು ಜನರು ಆಸ್ಪತ್ರೆ ಸುತ್ತಲೂ ತಿರುಗುತ್ತಾರೆ. ಕಲ್ಲನ್ನು ಕರಗಿಸುವ ಡಯಟ್ ಫಾಲೋ ಆಗುತ್ತದೆ. ಯುರೀನ್ ಹೆಚ್ಚಿಸುವ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಕಿಡ್ನಿಯಲ್ಲಿ ಕಲ್ಲು ತೊಲಗಬೇಕೆಂದರೆ ರತಿಕ್ರೀಡೆಗಿಂತ ಮಿಗಿಲಾದ ಔಷಧ ಇಲ್ಲ ಎನ್ನುತ್ತಿದ್ದಾರೆ ಸಂಶೋಧಕರು. ವಾರದಲ್ಲಿ ಮೂರು, ನಾಲ್ಕು ಸಲ ರತಿಕ್ರೀಡೆಯಲ್ಲಿ ಪಾಲ್ಗೊಂಡರೆ ಚಿಕ್ಕ ಪ್ರಮಾಣದ ಕಲ್ಲುಗಳು ಕರಗುತ್ತವಂತೆ.

ಶೃಂಗಾರದಲ್ಲಿ ಪಾಲ್ಗೊಳ್ಳಿ

ಈ ಸಂಶೋಧನೆಯ ಭಾಗವಾಗಿ ಕಿಡ್ನಿ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವ ಪುರುಷರನ್ನು ಮೂರು ತಂಡಗಳಾಗಿ ವಿಭಜಿಸಲಾಯಿತು. ಮೊದಲ ತಂಡಕ್ಕೆ ವಾರದಲ್ಲಿ ಮೂರು ಸಲ ಶೃಂಗಾರದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಎರಡನೇ ತಂಡವರಿಗೆ ಯೂರಿನೇಷನ್ ಹೆಚ್ಚಿಸುವ ಔಷಧಿಗಳನ್ನು, ಮೂರನೇ ತಂಡಕ್ಕೆ ಕಲ್ಲು ಕರಗಿಸುವ ಔಷಧಿ ಸೂಚಿಸಿದರು.

ಕಿಡ್ನಿಯಲ್ಲಿನ ಕಲ್ಲು

ಎರಡು ವಾರಗಳ ಬಳಿಕ ಎರಡು, ಮೂರನೇ ತಂಡಕ್ಕಿಂತ ಮೊದಲ ತಂಡದವರಲ್ಲಿ ಕಲ್ಲಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿರುವುದನ್ನು ಸಂಶೋಧಕರು ಗುರುತಿಸಿದರು. ಈ ತಂಡದಲ್ಲಿ 31 ಮಂದಿ ಇದ್ದರೆ, 26 ಮಂದಿಯಲ್ಲಿ ಕಿಡ್ನಿಯಲ್ಲಿ ಕಲ್ಲು ತೊಲಗಿದವೆಂದು ಅವರು ತಿಳಿಸಿದ್ದಾರೆ.

ಕಿಡ್ನಿಯಲ್ಲಿ ಉಂಟಾಗುವ ಚಿಕ್ಕ ಕಲ್ಲುಗಳು (6 ಎಂಎಂಗಿಂತಲೂ ಕಡಿಮೆ ದಪ್ಪ ಇರುವ) ಶೃಂಗಾರದ ಕಾರಣದಿಂದ ಹೊರಗೆ ಬರುವ ಅವಕಾಶಗಳು ಹೆಚ್ಚು ಎಂದಿದ್ದಾರೆ. ಒಟ್ಟಾರೆ ಕಿಡ್ನಿ ಕಲ್ಲುಗಳಿಂದ ನರಳುತ್ತಿರುವವರು ವಾರದಲ್ಲಿ ಕನಿಷ್ಠ ಮೂರು ಸಲ ಸೆಕ್ಸ್‌ ನಲ್ಲಿ ಪಾಲ್ಗೊಂಡರೆ ಸಾಕು ಎಂದಿದ್ದಾರೆ.

 

Tags