18+ಜೀವನ ಶೈಲಿ

ಪ್ರತಿ ಭಾರತೀಯ ಪುರುಷನೂ ತಿಳಿದುಕೊಳ್ಳಬೇಕಾದ ಐದು ಕಾಮಸೂತ್ರ ಪಾಠಗಳು

ಪ್ರತಿ ಭಾರತೀಯ ಪುರುಷನೂ ತಿಳಿದುಕೊಳ್ಳಬೇಕಾದ ಐದು ಕಾಮಸೂತ್ರ ಪಾಠಗಳು

ಕಾಮಸೂತ್ರ ಜಗತ್ತಿನಾದ್ಯಂತ ಶೃಂಗಾರವನ್ನು ಅಣು ಅಣುವಾಗಿ ವಿಭಜಿಸಿ ಸಂಪೂರ್ಣವಾಗಿ ವಿವರಿಸಿದ ಒಂದು ದೊಡ್ಡ ಗ್ರಂಥ. ಭಾರತ ದೇಶದ ಸಂಪತ್ತು. ಆದರೆ ಇದು ನಮಗೆ ಉಪಯೋಗಕ್ಕೆ ಬರುತ್ತಿದೆಯೇ? ಪಾಶ್ಚಾತ್ಯ ದೇಶಗಳು ಕಾಮಸೂತ್ರ ಪುಸ್ತಕವನ್ನು ಅತ್ಯಂತ ಹೆಮ್ಮೆಯಿಂದ ಸ್ತುತಿಸುತ್ತಿವೆ. ಅದರ ಸಾರಾಂಶವನ್ನು ತಿಳಿಸುತ್ತಿವೆ. ಕನಿಷ್ಠ ಕೆಲವು ಪಾಠಗಳನ್ನಾದರೂ ಕಲಿಯಬೇಕಲ್ಲವೇ. ಹಾಗಾಗಿ ನಿಮ್ಮ ಶೃಂಗಾರ ಜೀವನವನ್ನು ಇನ್ನಷ್ಟು ಉತ್ತಮಪಡಿಸುವ ಕೆಲವು ಪಾಠಗಳು.

  1. ಮುತ್ತುಗಳು ಆವೇಶವನ್ನು ಹೆಚ್ಚಿಸುತ್ತವೆ

ಕಾಮಸೂತ್ರದಲ್ಲಿ ಚುಂಬನದ ಬಗ್ಗೆ ಅಲ್ಲದೆ ದಂಪತಿಗಳು ಎಷ್ಟು ರೀತಿಯಲ್ಲಿ ಚುಂಬಿಸಿಕೊಳ್ಳಬಹುದು ಎಂಬುದನ್ನು ತಿಳಿಸಿದೆ. ಯಾವ ರೀತಿಯ ಮನಸ್ಥಿತಿಯವರು, ಎಲ್ಲಿ, ಹೇಗೆ ಚುಂಬಿಸಿದರೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಸವಿವರವಾಗಿ ಇದೆ. ವೃತ್ತಾಕಾರಲ್ಲಿ ಚುಂಬಿಸಿದರೆ, ಶೀಘ್ರದಲ್ಲೇ ಸೆಕ್ಸ್ ಮೂಡ್‌ ಗೆ ಬರುತ್ತಾರೆ. ನಿಮ್ಮ ಬಯಕೆಯನ್ನು ತಿಳಿಸುವ ರೀತಿಯಲ್ಲಿ ತುಂಬಾ ಗಾಢವಾಗಿ ಚುಂಬಿಸಿದರೆ, ನಿಮ್ಮ ಸಂಗಾತಿಗೆ ನೀವು ಏನು ಬಯಸುತ್ತಿದ್ದೀರಾ ಎಂದು ಗೊತ್ತಾಗುತ್ತದೆ.

  1. ಪರವಶ ಮಾಡಿಕೊಳ್ಳುವುದು ಒಂದು ಕಲೆ

ಶೃಂಗಾರದಲ್ಲಿ ಮುಖ್ಯವಾಗಿ ನೆನಪಿಡಬೇಕಾದ ಸಂಗತಿ, ನಿಮ್ಮ ಸಂಗಾತಿಯನ್ನು ರೊಚ್ಚಿಗೆಬ್ಬಿಸುವುದು. ಎಂದಾದರೂ ಶೃಂಗಾರ ಆರಂಭಿಸುವ ಮೊದಲು, ಸ್ವಲ್ಪ ಫೋರ್ ಪ್ಲೇ ಇರಬೇಕು. ನಿಮ್ಮ ಫೋರ್ ಪ್ಲೇ ಎಷ್ಟು ರಸವತ್ತಾಗಿರುತ್ತದೋ ನಿಮ್ಮ ಶೃಂಗಾರ ಅಷ್ಟು ಗಾಢವಾಗಿರುತ್ತದೆ. ಕಾಮಸೂತ್ರದಲ್ಲಿ ಈ ಬಗ್ಗೆ ಹೇಳಲಾಗಿದೆ.

  1. ಭಂಗಿಗಳು

ಕಾಮಸೂತ್ರ ಪ್ರಕಾರ ನೀವು ಶೃಂಗಾರದಲ್ಲಿ ಪಾಲ್ಗೊಳ್ಳಲು ಆಯ್ಕೆ ಮಾಡಿಕೊಳ್ಳುವ ಭಂಗಿ, ನಿಮ್ಮ ಸಂಪೂರ್ಣ ಅನುಭವವನ್ನು ನಿರ್ದೇಶಿಸುತ್ತದೆ. ಒಂದೊಂದು ಭಂಗಿ ಒಂದೊಂದು ಅನುಭವ ನೀಡುತ್ತದೆ. ಇದರಲ್ಲಿ ಯಾವುದೇ ನಾಚಿಕೆ ಇರಬಾರದು. ಇಬ್ಬರ ಅಗತ್ಯಗಳನ್ನು ಅವಲಂಭಿಸಿ ಹೊಸ ಭಂಗಿಗಳನ್ನು ಪ್ರಯತ್ನಿಸಬೇಕು.

  1. ಮಾತನಾಡಿ

ನೀವು ಶೃಂಗಾರದಲ್ಲಿ ಪಾಲ್ಗೋಳ್ಳುವಾಗ ನಿಮ್ಮ ಸಂಗಾತಿಯ ಜತೆಗೆ ಮಾತನಾಡಿ. ನೀವು ಏನೂ ಮಾಡಲಿದ್ದೀರಿ ಎಂಬುದನ್ನು ಹೇಳಿ. ಈ ರೀತಿ ಮಾಡುವುದರಿಂದ ಉದ್ರೇಕ ಹೆಚ್ಚುತ್ತದೆ. ಶೃಂಗಾರದಲ್ಲಿ ಸಂಪೂರ್ಣ ಆನಂದ ಅನುಭವಿಸುತ್ತೀರಿ.

  1. ನಿಮ್ಮ ಸಂಗಾತಿಗೆ ಇಷ್ಟವಾದ ರೀತಿಯಲ್ಲಿ

ನಿಮ್ಮ ಸಂಗಾತಿಗೆ ಏನು ಇಷ್ಟವಾಗುತ್ತದೆ, ಏನು ಮಾಡಿದರೆ ಸಂತೋಷವಾಗಿ ಇರುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ಆಗ ನಿಮ್ಮಿಬ್ಬರ ನಡುವೆ ಶೃಂಗಾರ ಚೆನ್ನಾಗಿರುತ್ತದೆ. ನೀವು ಆನಂದವನ್ನು ನೀಡಿದರೆ ಅದಕ್ಕೂ ಮೀರಿದ ಆನಂದ ಪಡೆಯುತ್ತೀರಿ. ಇದೇ ಕಾಮಸೂತ್ರ ಸಾರಾಂಶ.

 

 

 

Tags