18+ಜೀವನ ಶೈಲಿ

ಕಾಮಕೇಳಿಯಲ್ಲಿ ಪಾಲ್ಗೊಳ್ಳಲು ಸೂಕ್ತ ಸಮಯ….???

 

ಕಾಮಕೇಳಿಯಲ್ಲಿ ಪಾಲ್ಗೊಳ್ಳಲು ಸೂಕ್ತ ಸಮಯ ಯಾವುದು?

ಜಗತ್ತಿನಾದ್ಯಂತ ಇರುವ ಹೆಚ್ಚು ಮಂದಿ ಸಂಗಾತಿಗಳು ಕೇವಲ ರಾತ್ರಿ ಹೊತ್ತು ಮಾತ್ರ ಶೃಂಗಾರದಲ್ಲಿ ಪಾಲ್ಗೊಳ್ಳುತ್ತಾರೆ. ಇನ್ನೂ ಕೆಲವರು ಹೌದು, ಕೆಲವರು ಬೆಳಗ್ಗೆ, ಸಂಜೆ… ಹೀಗೆ ಸಂಗಾತಿಗಳು ತಮ್ಮ ಇಷ್ಟ, ಅಭಿರುಚಿಗಳಿಗೆ ಅನುಗುಣವಾಗಿ ಶೃಂಗಾರದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ನಿಜವಾಗಿಯೂ ಆಧುನಿಕ ವಿಜ್ಞಾನ, ಆಯುರ್ವೇದ ಹೇಳುತ್ತಿರುವ ಪ್ರಕಾರ ಕಾಮಕೇಳಿಗೆ  ಸೂಕ್ತ ಸಮಯ ಯಾವುದು ಗೊತ್ತಾ?

ಆಯುರ್ವೇದದ ಪ್ರಕಾರ ನಡುರಾತ್ರಿಗೆ ಮುನ್ನ ಲ್ಲಿ ಪಾಲ್ಗೊಂಡರೆ ಉತ್ತಮ. ಇದರಿಂದ ಶೃಂಗಾರಕ್ಕೆ, ನಿದ್ದೆಗೆ ಒಳ್ಳೆಯ ಸಮಯ ಇರುತ್ತವೆ. ಚಂದ್ರನು ಆಗಸದಲ್ಲಿ ಇರುವ ಹುಣ್ಣಿಮೆ ಸಮಯದಲ್ಲಿ ಶೃಂಗಾರದಲ್ಲಿ ಪಾಲ್ಗೊಳ್ಳಬೇಕೆಂದು ಆಯುರ್ವೇದ ಹೇಳುತ್ತದೆ. ಇನ್ನು ವಿಜ್ಞಾನದ ಪ್ರಕಾರ ಕಾಮಕೇಳಿಯಲ್ಲಿ ಪಾಲ್ಗೊಳ್ಳಲು ಈ ಕೆಳಗಿನ ಸಮಯ ಸೂಕ್ತ ..:

ಬೆಳಗ್ಗೆ 6 ರಿಂದ 8ರ ನಡುವೆ

ಈ ಸಮಯದಲ್ಲಿ ಪುರುಷರಿಗೆ ಶೃಂಗಾರ ವಾಂಛೆ ಹೆಚ್ಚಾಗಿ ಇರುವುದಷ್ಟೇ ಅಲ್ಲ, ಆ ಸಮಯದಲ್ಲಿ ಅವರ ಪವರ್ ಸಹ ಚೆನ್ನಾಗಿರುತ್ತದೆ. ಆದರೆ ಮಹಿಳೆಯರಿಗೆ ಆ ಸಮಯ ಅಷ್ಟಾಗಿ ಆಸಕ್ತಿ ಇರುವುದಿಲ್ಲ. ಆದಕಾರಣ ಈ ಸಮಯ ಸಂಗಾತಿಗಳಿಗೆ ಅಷ್ಟಾಗಿ ಸೂಕ್ತವಾಗಿರಲ್ಲವಂತೆ.

ಬೆಳಗ್ಗೆ 8 ರಿಂದ 10 ಗಂಟೆ ನಡುವೆ

ಈ ಸಮಯದಲ್ಲಿ ಎಂಡಾರ್ಫಿನ್ ಹಾರ್ಮೋನ್ ಬಿಡುಗಡೆಯಿಂದ ಮಹಿಳೆಯರಲ್ಲಿ ಶೃಂಗಾರ ವಾಂಛೆ ಹೆಚ್ಚುತ್ತದಂತೆ. ಆದರೆ ಪುರುಷರಲ್ಲಿ ಅದೇ ಸಮಯದಲ್ಲಿ ಸ್ವಲ್ಪ ಆ ವಾಂಛೆ ಕಡಿಮೆಯಾಗಿರುತ್ತದೆ. ಆದರೆ ಇಬ್ಬರೂ ಅಂಗೀಕರಿಸಿದರೆ ಈ ಸಮಯದಲ್ಲಿ ಶೃಂಗಾರ ಎಂಜಾಯ್ ಮಾಡಬಹುದು.

ಮಧ್ಯಾಹ್ನ 12 ರಿಂದ 2 ಗಂಟೆ ನಡುವೆ

ಈ ಸಮಯದಲ್ಲಿ ಮಹಿಳೆ, ಪುರುಷರು ಇಬ್ಬರೂ ಬಿಝಿಯಾಗಿ ಇದ್ದು ಶೃಂಗಾರ ವಾಂಛೆ, ಪವರ್ ಕಡಿಮೆಯಾಗುತ್ತದೆ. ಆದಕಾರಣ ಈ ಸಮಯ ಜೋಡಿಗಳಿಗೆ ಅಷ್ಟು ಸೂಕ್ತ ಅಲ್ಲ.

ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಗಳ ನಡುವೆ

ಈ ಸಮಯದಲ್ಲಿ ಮಹಿಳೆಯ ಸಂತಾನೋತ್ಪತ್ತಿ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ಪುರುಷರಿಂದ ಬಿಡುಗಡೆಯಾಗುವ ವೀರ್ಯ ಸಹ ಗುಣಮಟ್ಟದಿಂದ ಕೂಡಿರುತ್ತದೆ. ಆದಕಾರಣ ಈ ಸಮಯದಲ್ಲಿ ಶೃಂಗಾರದಲಿ ಪಾಲ್ಗೊಂಡರೆ ಮಕ್ಕಳಾಗುವ ಅವಕಾಶ ಹೆಚ್ಚು. ಅದೇ ಅವರಿಗೆ ಮಕ್ಕಳು ಬೇಡ ಎಂದಿದ್ದರೆ ಈ ಸಮಯದಲ್ಲಿ ಪಾಲ್ಗೊಳ್ಳಬಾರದು.

ಸಂಜೆ 4 ರಿಂದ 8 ಗಂಟೆ ನಡುವೆ

ಈ ಸಮಯದಲ್ಲಿ ಸ್ತ್ರೀ, ಪುರುಷರಿಬ್ಬರಿಗೂ ಚೆನ್ನಾಗಿ ಹಸಿವಾಗುತ್ತಿರುತ್ತದೆ. ಅಷ್ಟೇ ಅಲ್ಲ ಶೃಂಗಾರ ವಾಂಛೆ, ಪವರ್ ಕಡಿಮೆ ಇರುತ್ತದಂತೆ. ಆದಕಾರಣ ಈ ಸಮಯದ ಸಹ ಶೃಂಗಾರಕ್ಕೆ ಅಷ್ಟು ಸೂಕ್ತ ಅಲ್ಲ.

ರಾತ್ರಿ 8 ರಿಂದ 10 ಗಂಟೆ ನಡುವೆ

ಈ ಸಮಯದಲ್ಲಿ ಇಬ್ಬರಲ್ಲೂ ಶಕ್ತಿ ಸಂಗ್ರಹ ಹೆಚ್ಚಾಗಿ ಶೃಂಗಾರಕ್ಕೆ ಸೂಕ್ತವಾಗಿರುತ್ತದೆ. ಆದಕಾರಣ ಈ ಸಮಯ ಶೃಂಗಾರಕ್ಕೆ ಹೆಚ್ಚು ಸೂಕ್ತವಾದದ್ದು.

ರಾತ್ರಿ 10 ರಿಂದ 12 ಗಂಟೆ ನಡುವೆ

ಸ್ತ್ರೀ-ಪುರುಷರು ಶೃಂಗಾರದಲ್ಲಿ ಪಾಲ್ಗೊಳ್ಳಲು ಇದು ಸಹ ಸೂಕ್ತವಾದ ಸಮಯವಂತೆ. ಯಾಕೆಂದರೆ ಆ ಸಮಯದಲ್ಲಿ ಹಾರ್ಮೋನ್ ಗಳು ಚೆನ್ನಾಗಿ ಕೆಲಸ ಮಾಡುತ್ತಿರುತ್ತವಂತೆ.

ಬೇಸಿಗೆ ಕಾಲಕ್ಕಿಂತ ಚಳಿಗಾಲದಲ್ಲಿ ಹೆಚ್ಚು ಶೃಂಗಾರದಲ್ಲಿ ಪಾಲ್ಗೊಳ್ಳಬೇಕೆಂದು ಆಯುರ್ವೇದ ಹೇಳುತ್ತದೆ. ಅಷ್ಟೇ ಅಲ್ಲ ಸ್ತ್ರೀಯರು ಗರ್ಭಿಣಿಯಾ ಬಳಿಕ, ಮುಟ್ಟಿನ ಸಮಯದಲ್ಲಿ, ಚೆನ್ನಾಗಿ ಊಟ ಮಾಡಿದ ಬಳಿಕ ಶೃಂಗಾರದಲ್ಲಿ ಪಾಲ್ಗೊಳ್ಳಬಾರದಂತೆ. ಆ ರೀತಿ ಮಾಡಿದರೆ ಗ್ಯಾಸ್ ಸಮಸ್ಯೆ ಉಂಟಾಗುತ್ತದಂತೆ.

Tags