ಜೀವನ ಶೈಲಿಸಂಬಂಧಗಳು

ಸೆಕ್ಸ್ ಅನ್ನು ಹೆಚ್ಚಿನ ಹೊತ್ತು ಅನುಭವಿಸಲು ಇಲ್ಲಿವೆ ಉಪಾಯಗಳು

ಅತಿ ಹೆಚ್ಚಿನ ಸಮಯ ಕಾಮಕ್ರೀಡೆಯಲ್ಲಿ ತೊಡಗಿಕೊಳ್ಳಬೇಕೇ..??

ಕಾಮಕ್ರೀಡೆಯು ಅತೀ ಹೆಚ್ಚಿನ ಹೊತ್ತು ಸಾಗುವಂತೆ ಮಾಡಲು ಈ ಎರಡುಉಪಾಯಗಳ ಜೊತೆಗೆ ಹೆಚ್ಚು ಹೊತ್ತು ಫೋರ್ ಪ್ಲೇ ಮಾಡುವುದರಿಂದ ಬಾಳಸಂಗಾತಿಯನ್ನು ಹೆಚ್ಚಾಗಿ ಸಂತೃಪ್ತಿ ಪಡಿಸುವುದರ ಜೊತೆಗೆ ವೀರ್ಯಸ್ಖಲನದ ಸಮಯವನ್ನು ಹೆಚ್ಚಿಸಬಹುದು.

ಬೆಂಗಳೂರು, ಆ.24: ಕಾಮಕ್ರೀಡೆಯಲ್ಲಿ ಪಾಲ್ಗೊಳ್ಳುವ ಸಮಯದಲ್ಲಿ ಬಹಳಷ್ಟು ಮಂದಿ ಪುರುಷರು ಎದುರಿಸುವ ಪ್ರಮುಖ ಸಮಸ್ಯೆ ಎಂದರೆ ಮೊದಲೇ ವೀರ್ಯ ಸ್ಖಲನ ಆಗುವುದು. ಆತುರ ಸೇರಿದಂತೆ ಇತರೇ ಕಾರಣಗಳಿಂದ ಯಾವುದೋ ಒಂದು ಸಮಯದಲ್ಲಿ ಪುರುಷರು ಈ ಸಮಸ್ಯೆಗೆ ಸಿಲುಕುತ್ತಾರೆ. ಕಾಮಕ್ರೀಡೆ ಆರಂಭಿಸಿದ 30 ಸೆಕೆಂಡ್ ಗಳಿಂದ 4 ನಿಮಿಷಗಳಲ್ಲಿ ವೀರ್ಯ ಸ್ಖಲನ ಆದರೆ ಅದನ್ನು ಪ್ರೀಮೆಚ್ಯೂರ್ ಎಜಾಕುಲೇಷನ್ ಎನ್ನುತ್ತಾರೆ. ಈ ಸಮಸ್ಯೆಯಿಂದ ಒಬ್ಬೊಬ್ಬರು ಒಂದೊಂದು ರೀತಿ ಹೊರ ಬೀಳಬಹುದು.

ದಪ್ಪಗಿರುವ ಕಾಂಡೋಮ್

ಕಾಮಕ್ರೀಡೆಯನ್ನು ಇತ್ತೀಚೆಗೆ ಆರಂಭಿಸಿರುವವರು ಮೊದಲು ದಪ್ಪಗಿರುವ ಕಾಂಡೋಮ್ ಬಳಸುವ ಮೂಲಕ ಹೆಚ್ಚು ಹೊತ್ತು ಸೆಕ್ಸ್ ಎಂಜಾಯ್ ಮಾಡಬಹುದು. ಉಳಿದವರು ಸ್ಟಾರ್ಟ್-ಸ್ಟಾಪ್, ಸ್ವ್ವೀಜ್ ಟೆಕ್ನಿಕ್ ಗಳನ್ನು ಬಳಸುವ ಮೂಲಕ ಈ ಸಮಸ್ಯೆಯಿಂದ ಹೊರಬೀಳಬಹುದು.

ಸ್ಟಾರ್ಟ್-ಸ್ಟಾಪ್ ಟೆಕ್ನಿಕ್

ಬಹಳಷ್ಟು ಮಂದಿ ಸ್ಟಾರ್ಟ್-ಸ್ಟಾಪ್ ಟೆಕ್ನಿಕ್ ನ್ನು ಸುಲಭವಾಗಿ ಪಾಲಿಸಬಹುದು ಎಂದು ಭಾವಿಸುತ್ತಾರೆ. ಈ ವಿಧಾನದಲ್ಲಿ ವೀರ್ಯ ಹೊರಬರುತ್ತಿದೆ ಎಂಬ ಭಾವನೆ ಉಂಟಾದ ಕೂಡಲೆ ಪುರುಷಾಂಗವನ್ನು ಸ್ವಲ್ಪ ಸಮಯ ಯೋನಿಯಿಂದ ಹೊರಗೆ ತೆಗೆಯಬೇಕು. 30-60 ಸೆಕೆಂಡ್ ಆದ ಬಳಿಕ ಮತ್ತೆ ರತಿಕ್ರೀಡೆಯನ್ನು ಮುಂದುವರೆಸಬೇಕು. ಈ ರೀತಿ 4-5 ಸಲ ಮಾಡುವುದರಿಂದ ಸ್ಖಲನ ತಡವಾಗುವಂತೆ ನೋಡಿಕೊಳ್ಳಬಹುದು.

ಪ್ರೀಮೆಚ್ಯೂರ್ ಎಜಾಕ್ಯುಲೇಷನ್

ಇನ್ನು ಸ್ವೀಜಿಂಗ್ ಟೆಕ್ನಿಕ್ ನಲ್ಲಿ ವೀರ್ಯ ಸ್ಖಲನ ಆಗುತ್ತಿದೆ ಎಂದು ಭಾವಿಸಿದಾಗ ಪುರುಷಾಂಗದ ಕೊನೆಯ ಭಾಗವನ್ನು ಗಟ್ಟಿಯಾಗಿ ಅಮುಕಿ ಹಿಡಿದುಕೊಳ್ಳಬೇಕು. 30 ಸೆಕೆಂಡ್ ಗಳ ಕಾಲ ಆ ರೀತಿ ಮಾಡಿದ ಬಳಿಕ ಮತ್ತೆ ಕಾಮಕ್ರೀಡೆ ಮುಂದೆವರೆಸಬೇಕು. ಈ ರೀತಿ 4-5 ಸಲ ಮಾಡಬಹುದು. ಈ ಎರಡು ಟೆಕ್ನಿಕ್ ಗಳನ್ನು ಬೆರೆಸಿ ಪಾಲಿಸುವುದರಿಂದ ಅಥವಾ ವೀರ್ಯ ಸ್ಖಲನಕ್ಕೂ ಮೊದಲು ದೀರ್ಘವಾಗಿ ಉಸಿರಾಟ ತೆಗೆದುಕೊಳ್ಳುವುದರಿಂದ ಪ್ರೀಮೆಚ್ಯೂರ್ ಎಜಾಕ್ಯುಲೇಷನ್ನಿಂದ ಹೊರ ಬೀಳಬಹುದು.

ಈ ಟೆಕ್ನಿಕ್ ಗಳ ಜೊತೆಗೆ ಹೆಚ್ಚು ಹೊತ್ತು ಫೋರ್ ಪ್ಲೇ ಮಾಡುವುದರಿಂದ ಬಾಳಸಂಗಾತಿಯನ್ನು ಹೆಚ್ಚಾಗಿ ಸಂತೃಪ್ತಿ ಪಡಿಸುವುದರ ಜೊತೆಗೆ ವೀರ್ಯಸ್ಖಲನದ ಸಮಯವನ್ನು ಹೆಚ್ಚಿಸಬಹುದು.

Tags