ಆರೋಗ್ಯಜೀವನ ಶೈಲಿಫ್ಯಾಷನ್ಸೌಂದರ್ಯ

ನಿಮ್ಮ ಐಬ್ರೋ ದಪ್ಪವಾಗಿ ಬೆಳೆಯಬೇಕೆ…?

ನಮ್ಮ ಹೆಣ್ಣು ಮಕ್ಕಳು ಹೆಚ್ಚಾಗಿ ಕಾಳಜಿವಹಿಸುವುದು ನಮ್ಮ ಮುಖದ ಬಗ್ಗೆ. ಸದಾ ಕಾಲ ನಮ್ಮ ಸೌಂದರ್ಯ ಚೆನ್ನಾಗಿ ಕಾಣಬೇಕೆಂದು ಹುಡುಗಿಯರು ಬಯಸುತ್ತಾರೆ. ಅದರಂತೆ ಐಬ್ರೋ ನಮ್ಮಅಂದವನ್ನು ಇಮ್ಮಡಿಗೊಳಿಸುತ್ತದೆ. ಆದರೆ ಕೆಲವರಿಗಂತೂ ಐಬ್ರೋ ಇರುವುದಿಲ್ಲ. ಅದಕ್ಕಾಗಿ ಚಿಂತೆ ಪಡಬೇಕಿಲ್ಲ. ನಾವಿಂದು ಹೇಳುತ್ತಿರುವ ಸಲಹೆಯಿಂದ ಕೆಲವೇ ದಿನಗಳಲ್ಲಿ ನೀವು ಕೂಡ ದಪ್ಪನೆಯೇ ಐಬ್ರೋಸ್ ನನ್ನು ಪಡೆಯಬಹುದು.

ಹೌದು, ರಾತ್ರಿಯ ಹೊತ್ತು ಮಲಗುವ ವೇಳೆ ಕಣ್ಣಿನ ಐಬ್ರೋಸ್ ಗಳಿಗೆ ಹರಳೆಣ್ಣೆಯನ್ನು ಹಚ್ಚಿರಿ. ಈ ರೀತಿ ವಾರಕ್ಕೆ ಮೂರು ಅಥವಾ ನಾಲ್ಕು ಬಾರಿ ಹಚ್ಚುವುದರಿಂದ ಐಬ್ರೋಸ್ ನಿಧಾನಗತಿಯಲ್ಲಿ ಬೆಳೆಯುತ್ತದೆ. ಇದರಂತೆ ನೀವು ಕೂಡ ನಿಮ್ಮ ಸ್ನೇಹಿತೆಯರ ರೀತಿ ದಪ್ಪನೆಯ ಐಬ್ರೋಸ್ ನನ್ನು ಪಡೆಯಬಹುದಾಗಿದೆ.ಇಷ್ಟೇ ಅಲ್ಲದೇ ನಿಮ್ಮ ಮನೆಯಲ್ಲಿ ಸಿಗುವ ಬಾದಾಮಿ ಎಣ್ಣೆಯನ್ನು ವಾರದಲ್ಲಿ ಎರಡು ಅಥವಾ ಮೂರು ಬಾರಿ ಮುಖಕ್ಕೆ ಮಸಾಜ್ ಮಾಡುವುದರಿಂದ ನಿಮ್ಮ ಮುಖ ನೈಸ್ ಆಗುತ್ತದೆ. ಹಾಗೂ ನಿಮ್ಮ ಮುಖದಲ್ಲಿ ಹೊಳಪನ್ನು ಸಹ ಕಾಣಬಹುದಾಗಿದೆ.

ಇನ್ನೇಕೆ ತಡ ನೀವು ಕೂಡ ಇದನ್ನೊಮ್ಮೆ ಟ್ರೈ ಮಾಡಿ, ನಿಮ್ಮ ಮುಖದಲ್ಲಾಗುವ ಬದಲಾವಣೆಯನ್ನು ಗಮನಿಸಿ.Image result for badam oil

ಹುಡುಗಿಯರ ಅಂದವನ್ನು ಹೆಚ್ಚಿಸುವ ಸೀಡ್ಸ್ ಜ್ಯುವೆಲ್ಲರಿ

#balkaninewskannada #thickeyebrows #eyebrows #eye #beautybenefits

Tags