ಜೀವನ ಶೈಲಿಫ್ಯಾಷನ್ಸೌಂದರ್ಯ

ಫ್ಯಾಷನ್ ಗೂ ಸೈ ಈ ಶ್ರಗ್…!

ಬೆಂಗಳೂರು, ಮಾ.22:

ಕಾಲಕ್ಕೆ ತಕ್ಕ ಹಾಗೆ ಬದಲಾವಣೆಗೊಳ್ಳುವುದರಲ್ಲಿ ಫ್ಯಾಷನ್ ಕೂಡಾ ಒಂದು. ದಿನನಿತ್ಯ ಹೊಸಹೊಸ ಫ್ಯಾಷನ್ ಗಳು ಕಣ್ಣಿಗೆ ಬೀಳುವುದಂತೂ ಸತ್ಯ. ಇಂದು ಫ್ಯಾಷನ್ ಆಗಿ ಕಂಡದ್ದು ನಾಳೆ ಮಾಯ. ದಿನದಿಂದ ದಿನಕ್ಕೆ ಬದಲಾಗುವ ಫ್ಯಾಷನ್ ಅನ್ನು ನಾವು ಸಂತಸದಿಂದಲೇ ಸ್ವೀಕರಿಸಲೇ ಬೇಕಾಗುತ್ತದೆ. ಅದಕ್ಕೆ ಕಾರಣ ಇಷ್ಟೇ! ಫ್ಯಾಷನ್ ಲೋಕದಲ್ಲಿ ಪ್ರಸ್ತುತವಾಗಿರುವ ಟ್ರೆಂಡ್ ಗಳಿಗೆ ನಾವು ಬದಲಾಗಲೇ ಬೇಕಾಗಿದೆ. ಇಲ್ಲ ಎಂದರೆ ಅದು ಹಳತಾಗಿ ಬಿಡುತ್ತದೆ. ಇಂದು ಫ್ಯಾಷನ್ ಆಗಿ ಕಂಡದ್ದು ಈ ಕ್ಷಣಕ್ಕೆ ಮಾತ್ರ ಸೀಮಿತ! ಯಾಕೆಂದರೆ ನಾಳೆ ಅದು ಇತಿಹಾಸ ಸೇರಿ ಬಿಡಲೂ ಬಹುದು. ದಿನಂಪ್ರತಿ ವಿನೂತನವಾದ ಟ್ರೆಂಡ್ ಬರುವುದು ಸಹಜವಾಗಿ ಬಿಟ್ಟಿದೆ.

ಇತ್ತೀಚಿನ ದಿನಗಳಲ್ಲಿ ಚಳಿ ಇರಲಿ, ಬಿಡಲಿ. ಯಾವುದೇ ದಿರಿಸಿನ ಮೇಲೊಂದು ಶ್ರಗ್ ಧರಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಯಾಕೆಂದರೆ ಚಳಿಯಿಂದ ದೇಹವನ್ನು ರಕ್ಷಿಸಿಕೊಳ್ಳುವುದರ ಜತೆಗೆ ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಶ್ರಗ್ ಧರಿಸುವುದು ಈಗಿನ ಟ್ರೆಂಡ್. ಶ್ರಗ್ ಕೇವಲ ಚಳಿಗಾಲಕ್ಕೆ ಮಾತ್ರ ಸೀಮಿತವಲ್ಲ. ಬದಲಿಗೆ ಅದು ಬೇಸಿಗೆಯಲ್ಲಿಯೂ ಸೂರ್ಯನ ಗಾಢ ಕಿರಣಗಳಿಂದ ಸುಕೋಮಲವಾದ ಕೈಗಳನ್ನು ರಕ್ಷಿಸುತ್ತದೆ.

ಇನ್ನು ಶ್ರಗ್ ಧರಿಸಿದರೆ ದುಪ್ಪಟ್ಟಾ ಬೇಕೆಂದೇನಿಲ್ಲ. ಪಾಶ್ಚಾತ್ಯ ದಿರಿಸಾಗಲಿ, ಸಾಂಪ್ರದಾಯಿಕ ದಿರಿಸಿರಲಿ ಅಥವಾ ಇಂಡೊ ವೆಸ್ಟರ್ನ್‌ ದಿರಿಸಿರಲಿ ಇದೆಲ್ಲದಕ್ಕೂ ಶ್ರಗ್‌ ಗಳು ಅಂದವಾಗಿ ಹೊಂದಿಕೊಳ್ಳುತ್ತವೆ. ಜೀನ್ಸ್- ಟಾಪ್ ಮಾತ್ರವಲ್ಲದೆ ಚೂಡಿದಾರ್ ಮೇಲೂ ಹಾಕಿಕೊಳ್ಳಬಹುದು. ಇವುಗಳನ್ನು ಧರಿಸಿದರೆ ಮಾಡರ್ನ್ ಲುಕ್ ಬರುವುದರಲ್ಲಿ ಎರಡು ಮಾತಿಲ್ಲ‌.

ಉಳಿದಂತೆ ಶ್ರಗ್‌ ಗಳ ಆಕಾರ ಗಾತ್ರಗಳಲ್ಲಿ ಬಹಳಷ್ಟು ವೈವಿಧ್ಯವಿದ್ದು ಇಂದಿನ ಕಾಲಕ್ಕೆ ಚಿಕ್ಕ ಶ್ರಗ್ ಫ್ಯಾಷನ್. ತುಂಬು ಬೆನ್ನಿನ ಇವುಗಳಲ್ಲಿ ಕೆಲವು ತುಂಬು ಫುಲ್ ಸ್ವೀವ್  ನವಾಗಿದ್ದರೆ, ಇನ್ನು ಕೆಲವು ಸ್ಲೀವ್‌ಲೆಸ್‌ ವಿನ್ಯಾಸ ಹೊಂದಿರುತ್ತದೆ. ಅಂದಹಾಗೆ ಕಾಟನ್‌, ನೆಟೆಡ್‌, ಲೈಕ್ರಾ, ಜೆರ್ಸಿ, ಲೇಸ್‌, ಡೆನಿಮ್‌, ಮಿಕ್ಸ್‌ ಅಂಡ್‌ ಮ್ಯಾಚ್‌ ಹಾಗೂ ಕಾಟನ್‌ ಕಾರ್ಗೊ ಹಾಗೂ ಉಲ್ಲನ್‌ ನಿಂದ ಮಾಡಿದ ಶ್ರಗ್‌ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಅನಿತಾ ಬನಾರಿ

ಪೊಲಿಟಿಕಲ್ ಥ್ರಿಲ್ಲರ್ ಕಥೆ: ಪೃಥ್ವಿ ರಾಜ್ –ಲಾಲ್ ಕಾಂಬಿನೇಶನ್ ನಲ್ಲಿ ‘ಲೂಸಿಫರ್’ ಟ್ರೈಲರ್ ಔಟ್!!

#balkaninews #shrugs #shrugsforgirls #shrugsforwomens #shrugsdesigns

Tags

Related Articles