ಆರೋಗ್ಯಜೀವನ ಶೈಲಿ

ಸರಿಯಾದ ನಿದ್ದೆ ಮಾಡದಿದ್ದರೆ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಗೊತ್ತಾ?

ಒಂದು ಅಧ್ಯಯನದ ಪ್ರಕಾರ ಭಾರತೀಯರ ಪೈಕಿ ಶೇಕಡಾ 92ರಷ್ಟು ಮಂದಿಗೆ ಮಲಗುವ ಭಂಗಿಯಿಂದಲೇ ವಿವಿಧ ರೀತಿಯ  ಸಮಸ್ಯೆಗಳು ಬರುತ್ತವೆಯಂತೆ. ಅದರಲ್ಲೂ ಶೇಕಡಾ72ರಷ್ಟು ಮಂದಿ ಭಾರತೀಯರು ನಿದ್ದೆಯಲ್ಲಿ ಮೂರು ಬಾರಿಗಿಂತಲೂ ಹೆಚ್ಚು ಬಾರಿ ಎದ್ದೇಳುತ್ತಾರಂತೆ. ಹೀಗಾಗಿ ನಿದ್ದೆಯ ಕೊರತೆಯಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಶೇಕಡಾ 87ರಷ್ಟು ಮಂದಿ ದೂರುತ್ತಾರೆ ಎಂದು ಅಧ್ಯಯನ ಹೇಳುತ್ತದೆ. ಇನ್ನೂ ಶೇಕಡಾ 58 ರಷ್ಟು ಮಂದಿ ನಮ್ಮ ಕೆಲಸದ ಕಾರಣದಿಂದಾಗಿ ನಮಗೆ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರಂತೆ. ಒಟ್ಟಾರೆ ಸರಿಯಾಗಿ ನಿದ್ದೆ ಮಾಡದಿದ್ದರೆ ಆರೋಗ್ಯದ ಮೇಲೆ ಬೀರುವ ಪರಿಣಾಮಗಳಿವು.

ರೋಗನಿರೋಧಕ ಶಕ್ತಿಯಲ್ಲಿ ಕುಂಠಿತ

ಕಡಿಮೆ ಪ್ರಮಾಣದಲ್ಲಿ ನಿದ್ದೆ ಮಾಡುವುದರಿಂದ ದೇಹದ ರೋಗನಿರೋಧಕ ಶಕ್ತಿ ಕುಂದುತ್ತದೆ. ಅಲ್ಪಕಾಲದ ನಿದ್ದೆಯಿಂದ ಶೀತ, ಪದೇ ಪದೇ ಜ್ವರ, ಕಫ ಮುಂತಾದ ಸಮಸ್ಯೆಗಳು ಮಾತ್ರವಲ್ಲ.ಪ್ಲೂ ಸೋಂಕು ಹರಡುತ್ತದೆ ಎನ್ನುತ್ತದೆ ಅಧ್ಯಯನ..

ಒಬೆಸಿಟಿ

ಅತೀ ಕಡಿಮೆ ನಿದ್ದೆ ಮಾಡುವುದರಿಂದ ದೇಹದ ತೂಕ ಅಧಿಕವಾಗುತ್ತದೆ. 7 ಗಂಟೆಗಳಿಗಿಂತ ಕಡಿಮೆ ಅವಧಿಯ ನಿದ್ದೆಯಿಂದಾಗಿ ದೇಹದ ತೂಕ ಹೆಚ್ಚಾಗುತ್ತದೆ. ಲ್ಯಾಪ್ಟಿನ್ ಅಂಶ ಹೆಚ್ಚಾಗಿ, ಹಸಿವು ಜಾಸ್ತಿಯಾಗುತ್ತದೆ. ಹೀಗಾಗಿ ಅಧಿಕ ಆಹಾರ ಸೇವನೆಯಿಂದಾಗಿ ದೇಹದ ತೂಕ ಹೆಚ್ಚಾಗುತ್ತದೆ.

ಖಿನ್ನತೆ ಮತ್ತು ಕೋಪ

ರಾತ್ರಿ ಕಡಿಮೆ ನಿದ್ದೆಯಾದರೆ ಮಾನಸಿಕ ಕಿರಿಕಿರಿಯಾಗಿ  ಮರುದಿನ ಮೂಡ್ ಆಫ್ ಆಗಿರುತ್ತದೆ. ಇದೇ ಮುಂದುವರೆದರೆ ಖಿನ್ನತೆ ಮತ್ತು ಅಧಿಕ ಕೋಪಕ್ಕೆ ಕಾರಣವಾಗುತ್ತದೆ. 6 ಗಂಟೆಗಿಂತ  ಕಡಿಮೆ ಅವಧಿಯ ನಿದ್ದೆಯಿಂದಾಗಿ  ಮಾನಸಿಕ  ಸಮಸ್ಯೆ ಆರಂಭವಾಗುತ್ತದೆ.

ಡಯಾಬಿಟಿಸ್

5 ಗಂಟೆಗಳಿಗಿಂತ ಕಡಿಮೆ ಅವಧಿಯ ನಿದ್ದೆಯಿಂದ ಡಯಾಬಿಟಿಸ್ ರಿಸ್ಕ್ ಹೆಚ್ಚಾಗುತ್ತದೆ. ದೇಹದಲ್ಲಿ ಗ್ಲೂಕೋಸ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಡಯಾಬಿಟಿಸ್ ಕಾಯಿಲೆಗೆ ಕಾರಣವಾಗುತ್ತದೆ ಎನ್ನುತ್ತದೆ ಅಧ್ಯಯನ.

ಲೈಂಗಿಕ ಕ್ರಿಯೆಯಲ್ಲಿ ನಿರಾಸಕ್ತಿ        

ಸರಿಯಾದ ಪ್ರಮಾಣದ ನಿದ್ದೆ ಮಾಡದಿದ್ದರೆ, ಇದು ಲೈಂಗಿಕಾಸ್ತಿಯ ಮೇಲೂ ಪರಿಣಾಮ ಬೀರುತ್ತದೆಯಂತೆ. ಸಂಶೋಧನೆಯೊಂದರ ಪ್ರಕಾರ, ಅತೀ ಕಡಿಮೆ ಪ್ರಮಾಣದ ನಿದ್ದೆಯಿಂದಾಗಿ ಪುರುಷರಲ್ಲಿ ಟೆಸ್ಟೋಸ್ಟೋರೆನ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಇದರಿಂದಾಗಿ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ.

 

Tags