ಆಹಾರಜೀವನ ಶೈಲಿ

ಉಪ್ಪಿನಲ್ಲಿ ಸೇರಿಸುವ ’ಸಿಂಥೆಟಿಕ್ ಅಯೋಡಿಯನ್’ ಮಾರಕ

ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಮಾತೆ ಇದೆ. ಆದರೆ ಇಂದು ಉಪ್ಪು ನಾನಾ ಸಮಸ್ಯೆಗಳನ್ನು ತರುತ್ತಿದೆ. ರಕ್ತದ ಒತ್ತಡ ಹೆಚ್ಚಿಸುವ, ಆರೋಗ್ಯಕ್ಕೆ ಮಾರಕವಾಗುವ ಕಾಯಿಲೆಗಳನ್ನು ತಂದೊಡ್ಡುತ್ತಿದೆ. ಟೇಬಲ್ ಸಾಲ್ಟ್ ಹೆಚ್ಚಾಗಿ ಬಳಸುತ್ತಿದ್ದಾರೆ ಇದರಿಂದ ಆರೋಗ್ಯ ಕೈಕೊಡುತ್ತಿದೆ. ಹಾಗಿದ್ದರೆ ಉಪ್ಪು ಹೆಚ್ಚಾದರೆ ಏನೆಲ್ಲಾ ಆಗುತ್ತದೆ ಎಂಬುದನ್ನು ಈಗ ನೋಡೋಣ.

ನಾವು ಬಳಸುವ ಟೇಬಲ್ ಸಾಲ್ಟ್ ಕೆಲವೊಮ್ಮೆ ವಿಷಕಾರಿಯಾಗುತ್ತದೆ, ಈ ಉಪ್ಪು ರುಚಿಯಲ್ಲಿ ನೈಸರ್ಗಿಕವಾಗಿ ಸಿಗುವ ಉಪ್ಪಿನಂತೆಯೇ ಇದ್ದರು ಇದನ್ನು ತಯಾರಿಸುವ ವಿಧಾನ ಭಿನ್ನವಾಗಿದೆ.

ಇದನ್ನು ಕಚ್ಚಾ ತೈಲವನ್ನು 1200 ಡಿಗ್ರಿ ಫ್ಯಾರನ್ ಹೀಟ್ ಉಷ್ಣತೆಗೆ ಕುದಿಸಿ ಅದರಿಂದ ಉಪ್ಪನ್ನು ಬೇರ್ಪಡಿಸಿ ತಯಾರಿಸಲಾಗುವುದು. ಈ ಉಪ್ಪನ್ನು ಕುದಿಸಿದಾಗ ಇದರಲ್ಲಿ ಸುಮಾರು 80 ಖನಿಜಾಂಶಗಳು ಬಿಡುಗಡೆಯಾಗುತ್ತವೆ.

ಈ ಉಪ್ಪಿನಲ್ಲಿ ಏನಿರುತ್ತದೆ ಹಾಗೂ ಅದು ವಿಷಕಾರಿಯಾಗುವುದು ಹೇಗೆ?

ಮಾರ್ಕೆಟ್ನಲ್ಲಿ ದೊರೆಯುವ ಟೇಬಲ್ ಸಾಲ್ಟ್ನಲ್ಲಿ ನೈಸರ್ಗಿಕವಾಗಿ ದೊರೆಯುವ ಅಯೋಡಿಯನ್ ಅಂಶ ಇಲ್ಲದ ಕಾರಣ ಸಿಂಥೆಟಿಕ್ ಅಯೋಡಿಯನ್ ಸೇರಿಸಲಾಗುವುದು. ಈ ಸಿಂಥೆಟಿಕ್ ಅಯೋಡಿಯನ್ ಅನ್ನು ಕೆಲವೊಂದು ಉಪ್ಪು ಉತ್ಪಾದಕರು ನೈಸರ್ಗಿಕ ಉಪ್ಪಿನ ಜತೆಯೂ ಸೇರಿಸುತ್ತಾರೆ. ನೈಸರ್ಗಿಕವಾದ ಅಯೋಡಿಯನ್ನ ಕೊರತೆ ಉಂಟಾದಾಗ ಥೈರಾಯ್ಡ್ ಗ್ರಂಥಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಇದರಿಂದ ಚಯಪಚಯ ಕ್ರಿಯೆಗೆ ತೊಂದರೆ ಉಂಟಾಗುತ್ತದೆ.

ನೈಸರ್ಗಿಕ ಉಪ್ಪಿನ ಬಣ್ಣ
ನೈಸರ್ಗಿಕವಾಗಿ ದೊರೆಯುವ ಉಪ್ಪು ಬಿಳಿ ಬಣ್ಣದಾಗಿರುವುದಿಲ್ಲ. ಇದನ್ನು ಬ್ಲೀಚ್ ಬಳಸಿ ಬಿಳಿ ಬಣ್ಣಕ್ಕೆ ತಿರುಗುವಂತೆ ಮಾಡಲಾಗುವುದು.

ಟೇಬಲ್ ಸಾಲ್ಟ್ ನಲ್ಲಿರುವ ಸೋಡಿಯಂ ಕ್ಲೋರೈಡ್ ದೇಹದಲ್ಲಿ ನೀರಿನಂಶದ ಅಸಮತೋಲನ ಉಂಟು ಮಾಡುತ್ತದೆ. ಇದರಿಂದ ಕಿಡ್ನಿಗೆ ತೊಂದರೆ ಉಂಟಾಗುತ್ತದೆ. ಅಲ್ಲದೆ ಟೇಬಲ್ ಸಾಲ್ಟ್ನಲ್ಲಿರುವ ಅಲ್ಯುಮಿನಿಯಂ ಹೈಡ್ರೋಕ್ಸೈಡ್ನಿಂದ ಅಲ್ಜೈಮರ್ಸ್ ಕಾಯಿಲೆ ಉಂಟಾಗುವುದು.

ಈ ಟೇಬಲ್ ಸಾಲ್ಟ್ ಅಧಿಕವಾಗಿ ಬಳಸುವುದರಿಂದ ಕೈ ಕಾಲುಗಳಲ್ಲಿ ಊತ, ಹೈಪರ್ ಟೆನ್ಷನ್, ಹೃದಯ ಸಂಬಂಧಿ ಕಾಯಿಲೆಗಳು, ರಕ್ತದೊತ್ತಡ ಮುಂತಾದ ಸಮಸ್ಯೆ ಕಂಡು ಬರುವುದು.

ಟೇಬಲ್ ಸಾಲ್ಟ್ ಬಳಕೆ ಒಂದು ಚಟ

ಟೇಬಲ್ ಸಾಲ್ಟ್ ಬಳಸಲಾರಂಭಿಸಿದರೆ ಅದು ನಮಗೆ ಚಟವಾಗುವುದು, ಸಮುದ್ರ ಉಪ್ಪಿಗಿಂತ ಈ ಉಪ್ಪು ರುಚಿ ಅನಿಸುವುದು. ಆರೋಗ್ಯ ದೃಷ್ಟಿಯಿಂದ ಸಮುದ್ರ ಉಪ್ಪು ಬಳಸುವುದು ಒಳ್ಳೆಯದು.

Tags

Related Articles

Leave a Reply

Your email address will not be published. Required fields are marked *