ಆರೋಗ್ಯಆಹಾರಜೀವನ ಶೈಲಿ

ಚರ್ಮರೋಗಕ್ಕೆ ರಾಮಬಾಣ ಕೊತ್ತಂಬರಿ ಸೊಪ್ಪು

ಅಡುಗೆಯಲ್ಲಿ ಪರಿಮಳ ನೀಡುವಂತಹ ಸೊಪ್ಪೆಂದರೆ ಅದು ಕೊತ್ತಂಬರಿ ಸೊಪ್ಪು. ಈ ಸೊಪ್ಪಿನ ಉಪಯೋಗ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇದು ರುಚಿಯ ಪದಾರ್ಥಗಳ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಇದಷ್ಟೇ ಅಲ್ಲದೇ ಇದರೊಂದಿಗೆ ಕರಿಬೇವು ಸೊಪ್ಪು ಅನ್ನು ನಮ್ಮ ಭಾರತೀಯ ಅಡುಗೆಗಳಲ್ಲಿ ಬಳಸುತ್ತಾರೆ. ಇದರಿಂದ ಅನೇಕ ಉಪಯೋಗಗಳಿವೆ.

1 ಕೊತ್ತಂಬರಿ ಸೊಪ್ಪಿನಲ್ಲಿ ಮೆದುವಾದ ಮೆಣಸಿನಂತಹ ರುಚಿಯಿದೆ. ಇದು ಆಹಾರಕ್ಕೆ ಅನುಪಮವಾದ ರುಚಿಯನ್ನು ನೀಡುತ್ತದೆ.

2 ಈ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಆಂಟಿ ಆಕ್ಸಿಡೆಂಟ್ ಗಳು ಮತ್ತು ರಂಜಕದಂತಹ ಖನಿಜಗಳು ಯಥೇಚ್ಛವಾಗಿರುತ್ತವೆ. ಇದರಿಂದ  ಕಣ್ಣಿನ ನೋವು ಮತ್ತು ತುರಿಕೆಗಳು ನಿವಾರಣೆಯಾಗುತ್ತವೆ.

3 ಇದರಲ್ಲಿರುವ ಹಲವು ಪೋಷಕಾಂಶಗಳು ಚರ್ಮದಲ್ಲಿ ಸೋಂಕು ಉಂಟುಮಾಡುವುದನ್ನು ತಡೆಯುತ್ತದೆ. ಉತ್ತಮ ನಂಜುನಿವಾರಕವಾಗಿರುವ ಇದು ತುರಿಕೆ ತರಿಸುವ ಇಸಬು, ಒಣಚರ್ಮ, ಬೂಸಿನಿಂದಾಗುವ ಸೋಂಕು ಮೊದಲಾದ ತೊಂದರೆಗಳನ್ನು ತಡೆಯುತ್ತದೆ.

4 ಗರ್ಭಿಣಿಯಾದ ಹೊಸತರಲ್ಲಿ ಹಲವಾರು ಹೆಂಗಸರಿಗೆ ವಾಂತಿ ಮತ್ತು ನಾಸಿಯಾದ ಸಮಸ್ಯೆ ಅಧಿಕವಾಗಿ ಕಾಡುತ್ತದೆ. ಅದಕ್ಕಾಗಿ ಒಂದು ಕಪ್ ಕೊತ್ತಂಬರಿ ಸೊಪ್ಪು, ಒಂದು ಕಪ್ ಸಕ್ಕರೆ ಹಾಗೂ ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ, ನಂತರ ಕುಡಿದರೆ ಶಮನವಾಗುತ್ತದೆ.

5 ಈ ಸೊಪ್ಪನ್ನು ಸೇವಿಸುವುದರಿಂದ ರಕ್ತದೊತ್ತಡವು ಕಡಿಮೆಯಾಗುತ್ತದೆ.

6  ಇದರಲ್ಲಿರುವ ವಿವಿಧ ಖನಿಜಗಳಲ್ಲಿ ಕ್ಯಾಲ್ಸಿಯಂ ಸಹಾ ಒಂದು. ಕ್ಯಾಲ್ಸಿಯಂ ಮೂಳೆಗಳಿಗೆ ಅತ್ಯಂತ ಅಗತ್ಯವಾಗಿದೆ.

7 ಈ ಸೊಪ್ಪನ್ನು ಅಡುಗೆ ಆಗಲಿ ಅಥವಾ ನೇರವಾಗಿ ತಿನ್ನಲು ಮುಂದಾಗಿ ಇದರಲ್ಲಿ ಇರುವ ಪೋಷಕಾಂಶಗಳು ನಮಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ.

ಹಲವಾರು ರೋಗಗಳಿಗೆ ಮದ್ದು ನುಗ್ಗೆಕಾಯಿ

#Coriander #HealthTips #LifeStyle

Tags