ಆರೋಗ್ಯಆಹಾರಜೀವನ ಶೈಲಿ

ಹಲವಾರು ರೋಗಗಳಿಗೆ ಮದ್ದು ನುಗ್ಗೆಕಾಯಿ

ನುಗ್ಗೆಕಾಯಿ.. ಬಹಳ ಜನರಿಗೆ ಇಷ್ಟವಾದ ತರಕಾರಿ. ಈ ತರಕಾರಿಯನ್ನು ತಿನ್ನಲು ಬಲು ಸೊಗಸು. ಇದು ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಇದರ ಸೇವನೆಯಿಂದ ಸಂಧಿವಾತದ ಶೂಲೆ ನಿವಾರಣೆಯಾಗುತ್ತದೆ. ಹೊಟ್ಟೆಯಲ್ಲಿ ಜಂತು ಹುಳಗಳು ಆಗಿದ್ದರೆ ನಾಶ ಹೊಂದುತ್ತವೆ. ನುಗ್ಗೆ ಹೂವಿನ ರಸವನ್ನು ಮಜ್ಜಿಗೆಗೆ ಬೆರಸಿ ಸೇವಿಸುವುದರಿಂದ ಮೂತ್ರ ಸ್ರಾವ ಶಮನವಾಗುತ್ತದೆ. ಬರೀ ಇವಿಷ್ಟೇ ಅಲ್ಲಾ ಈ ತರಕಾರಿಯನ್ನು ತಿನ್ನುವುದರಿಂದ ಹಲವಾರು ಉಪಯೋಗಗಳಿವೆ.

1 ನುಗ್ಗೆಕಾಯಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮೊಡವೆ ಮತ್ತು ಇತರ ಸಂಬಂಧಿತ ಚರ್ಮದ ತೊಂದರೆಗಳು ಕಡಿಮೆಯಾಗುತ್ತವೆ.

2 ನುಗ್ಗೆಕಾಯಿ ಸೋಂಕುಗಳಿಂದ ರಕ್ಷಿಸುತ್ತದೆ. ಹಾಗೂ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

3 ವಿಟಮಿನ್ ಕೊರತೆ ಇರುವವರು ನುಗ್ಗೆಕಾಯಿ ಸೇವನೆಯಿಂದ ಚೇತರಿಸಿಕೊಳ್ಳಲು ಅನುಕೂಲ.

4 ನುಗ್ಗೆ ಗಿಡದ ಬೇರು ಬಹು ಉಪಯುಕ್ತವಿದ್ದು, ಅದು ಮೇಲಿಂದ ಮೇಲೆ ಬರುವ ಜ್ವರ, ಸಂಧಿವಾತ, ಮೂರ್ಛೆ ಉಪ ಶಮನಕ್ಕೆ ಯೋಗ್ಯವಾಗಿದೆ.

5 ನುಗ್ಗೆಯ ಎಲೆಗಳನ್ನು ಅರೆದು ಸ್ವಲ್ಪ ಜೇನಿನೊಡನೆ ಮಿಶ್ರಣ ಮಾಡಿ ಎಳನೀರಿನೊಂದಿಗೆ ಸೇವಿಸುವುದರಿಂದ ಹೊಟ್ಟೆ ಉರಿ ಕಡಿಮೆಯಾಗುತ್ತದೆ.

6 ನುಗ್ಗೆಕಾಯಿ ಮಾತ್ರವಲ್ಲದೆ ಸುಲಭವಾಗಿ ದೊರೆಯುವ ನುಗ್ಗೆಸೊಪ್ಪು ಮತ್ತು ಹೂವನ್ನು ಸೇವಿಸುವುದು ಆರೋಗ್ಯವನ್ನು ಕಾಪಾಡಲು ಪರಿಣಾಮಕಾರಿಯಾಗಿದೆ.

ಚಳಿಗಾಲದಲ್ಲಿ ಒಣಚರ್ಮಕ್ಕೆ ಸರಳ ಮನೆ ಮದ್ದು

#Drumstick #DrumstickHealth #HealthTips

Tags