ಆರೋಗ್ಯಆಹಾರಜೀವನ ಶೈಲಿ

ಶೇಂಗಾ ಬೀಜ ತಿನ್ನುವುದರಿಂದ ಲಾಭಗಳು ಹಲವಾರು

ಬಡವರ ಬಾದಾಮಿ ಎಂದು ಕರೆಯಲ್ಪಡುವ ಶೇಂಗಾ ಬೀಜವನ್ನು ತಿನ್ನುವುದರಿಂದ ಹಲವಾರು ಉಪಯೋಗಗಳಿವೆ. ಇದರಲ್ಲಿಉತ್ತಮ ಪ್ರಮಾಣದ ಪ್ರೋಟೀನ್ ಹಾಗೂ ಇತರ ಖನಿಜಗಳಿವೆ. ಇದನ್ನು ಸಿಪ್ಪೆಸಹಿತ ಹುರಿದು ಅಥವಾ ಬೇಯಿಸಿಯೂ ತಿನ್ನಬಹುದು.

1 ಇದು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳ ಒಳಗೆ ಅಂಟಿಕೊಳ್ಳದಂತೆ ತಡೆಯುವ ಮೂಲಕ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

2 ಇದರಲ್ಲಿರುವ ಟ್ರಿಪ್ಟಾಪ್ಯನ್ ಎಂಬ ಪೋಷಕಾಂಶ ಖಿನ್ನತೆಯ ವಿರುದ್ಧ ಕಾರ್ಯನಿರ್ವಹಿಸುವ ಕಾರಣ ಆಗಾಗ ಒಂದು ಹಿಡಿಯಷ್ಟು ಶೇಂಗಾಬೀಜಗಳನ್ನು ತಿನ್ನುತ್ತಾ ಇರುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು

3 ಶೇಂಗಾಬೀಜದ ಸೇವನೆಯಿಂದ ದೇಹದಲ್ಲಿ ಟ್ರಿಪ್ಟಾಪಾನ್ ಎಂಬ ಪೋಷಕಾಂಶದ ಉತ್ಪತ್ತಿಗೆ ನೆರವಾಗುತ್ತದೆ. ಇದು ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂಟ ಸ್ರವಿಸಲು ನೆರವಾಗುತ್ತದೆ.

4 ಶೇಂಗಾ ಬೀಜಗಳಲ್ಲಿ ಉತ್ತಮ ಪ್ರಮಾಣದ ಸತು ಇರುವ ಕಾರಣ ಮೆದುಳಿಗೆ ಕ್ಷಮತೆ ಹೆಚ್ಚುತ್ತದೆ.

5 ಪ್ರತಿದಿನ ಪುರುಷರು  ಮತ್ತು ಮಹಿಳೆಯರು ಇದನ್ನು ತಿನ್ನುವುದರಿಂದ ಸೆಕ್ಸ್ ಹಾರ್ಮೋನ್ಸ್ ಸಮತೋಲನದಲ್ಲಿರುತ್ತವೆ.

6 ಗರ್ಭಿಣಿಯರಿಗೆ ಇದು ಬಹಳ  ಉಪಯೋಗ, ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಗೆ ಸಹಾಯಕಾರಿ.

ಪೋಷಕಾಂಶಗಳ ಸಾಗರವುಳ್ಳ ಅಕೈ ಹಣ್ಣು

#Peanut #PeanutUse #HealthTips,

Tags