ಆರೋಗ್ಯಆಹಾರಜೀವನ ಶೈಲಿಸೌಂದರ್ಯ

ಬೇವಿನ ಎಲೆ ತಿಂದರೆ ಉಪಯೋಗಗಳು ಹಲವು

ಸಾಮಾನ್ಯವಾಗಿ ಬೇವಿನಲ್ಲಿ ಹಲವಾರು ಔಷಧೀಯ ಗುಣಗಳಿವೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಅದೇ ರೀತಿ ಇದರ ಇನ್ನಷ್ಟು ಉಪಯೋಗಗಳ ಬಗ್ಗೆ ನಾವು ತಿಳಿಸಿಕೊಡುತ್ತೇವೆ.

1 ಬೇವಿನ ಮರ 130ಕ್ಕಿಂತಲೂ ಹೆಚ್ಚು ಜೈವಿಕ ಗುಣಗಳನ್ನು ಹೊಂದಿದ್ದು, ಎಲೆಗಳು, ಕೊಂಬೆ, ತೊಗಟೆ, ಬೀಜ, ಬೇರು, ಹಣ್ಣು, ಹೂವುಗಳಲ್ಲಿಯೂ ಕೂಡ ಅನೇಕ ಔಷಧಿ ಗುಣಗಳಿವೆ. ಹೀಗಾಗಿ ಬೇವಿನ ಎಲೆಗಳನ್ನು ಅಗೆದು ತಿನ್ನಬಹುದು.

2 ಬೇವಿನ ಎಲೆಗಳನ್ನು ಅಗೆದು ತಿನ್ನುವುದರಿಂದ ಚರ್ಮದ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಪಡೆದುಕೊಳ್ಳಬಹುದು. ಇದರಿಂದ ಚರ್ಮವು ಹೊಳಪನ್ನು ಪಡೆದುಕೊಳ್ಳುತ್ತದೆ.

3 ಬೇವಿನ ಎಲೆ ತಿನ್ನುವುದರಿಂದ ನಿಮ್ಮ ಕೂದಲಿಗೆ ಉಪಕಾರಿ. ತಲೆ ಹೊಟ್ಟು ನಿವಾರಿಸಲು ಬೇವಿನ ಎಲೆ ತುಂಬಾ ಸಹಾಯ ಮಾಡುತ್ತದೆ.

4 ಬೇವಿನ ತೊಗಟೆಯ ಭಸ್ಮದ ಲೇಪನದಿಂದ ಗಾಯ ಮತ್ತು ಹುಣ್ಣು ವಾಸಿಯಾಗುತ್ತದೆ.

5 ಬೇವಿನೆಣ್ಣೆ ಹೇನನ್ನು ದೂರ ಮಾಡುತ್ತದೆ. ಬೇವಿನ ಸೊಪ್ಪಿನ ರಸಕ್ಕೆ ಜೇನುತುಪ್ಪ ಹಾಕಿ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಕಡಿಮೆಯಾಗುತ್ತದೆ.

6 ಬೇವಿನ ಸೇವನೆಯಿಂದ ರಕ್ತ ಶುದ್ಧೀಕರಣಗೊಳ್ಳುತ್ತದೆ ಹಾಗೂ ರಕ್ತದೊತ್ತಡ ಕಡಿಮೆಯಾಗುತ್ತದೆ. ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ನಿಯಂತ್ರಿಸುವುದರಿಂದ ರಕ್ತಸಂಚಾರ ಉತ್ತಮಗೊಳ್ಳುತ್ತದೆ ಹಾಗೂ ಆರೋಗ್ಯವೂ ಸುಧಾರಿಸುತ್ತದೆ.

ಚರ್ಮರೋಗಕ್ಕೆ ರಾಮಬಾಣ ಕೊತ್ತಂಬರಿ ಸೊಪ್ಪು

#Neem #HealthTips #LifeStyle

Tags