ಆರೋಗ್ಯಆಹಾರಜೀವನ ಶೈಲಿ

ಪಾಪ್ ಕಾರ್ನ್ ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳಿವು

ಜೋಳವನ್ನು ಬೇಯಿಸಿ, ಸುಟ್ಟು, ಹಾಗೂ ಉಪ್ಪಿಟ್ಟಿನ ರೀತಿಯಲ್ಲಿಯೂ ತಿನ್ನುತ್ತೇವೆ. ಈ ಜೋಳದ ಅಡುಗೆ ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಇವತ್ತು ನಾವು ಜೋಳ ತಿನ್ನುವುದರಿಂದ ಯಾವ ರೀತಿಯ ಆರೋಗ್ಯಕರ ಗುಣಗಳನ್ನು ಪಡೆಯಬಹುದು.

1 ಮೆಕ್ಕೆಜೋಳದಲ್ಲಿ ಆರೋಗ್ಯವನ್ನು ಕಾಪಾಡುವ ಕಾರ್ಬೋ ಹೈಡ್ರೇಟ್ ಗಳು ನಾರಿನಂಶ ಹೆಚ್ಜಿನ ಪ್ರಮಾಣದಲ್ಲಿ ನಮಗೆ ಸಿಗುತ್ತದೆ.

2 ಬೇಯಿಸಿದ ಮೆಕ್ಕೆಜೋಳವನ್ನು ಸೇವಿಸುವುದರಿಂದ ಕರುಳಿನ ಕ್ಯಾನ್ಸರ್ ಬರುವುದನ್ನು ಇದು ತಡೆಗಟ್ಟುತ್ತದೆ .

3 ಇದು ದೇಹ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ಹಸಿವು ಇಂಗಿಸುವುದರಿಂದ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವನೆ ಮಾಡದಂತೆ ತಡೆಯುತ್ತದೆ.

4 ಎರಡರಿಂದ ಮೂರು ಕಪ್ ಪಾಪ್ ಕಾರ್ನ್ ತಿನ್ನುವುದರಿಂದ ನಮ್ಮ ದೇಹದಲ್ಲಿ 4 ಗ್ರಾಂನಷ್ಟು ಪ್ರೊಟೀನ್ ಉತ್ಪಾದನೆಯಾಗುತ್ತದಂತೆ.

5 ಜೋಳದಲ್ಲಿ ಅಧಿಕ ನಾರಿನಂಶವಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

6 ಮಿತಿಮೀರಿ ಪಾಪ್ ಕಾರ್ನ್ ಗಳನ್ನು ತಿನ್ನುವುದರಿಂದ ದಪ್ಪಗಾಗುವುದು. ಅದರ ಬದಲು ಜೋಳದ ರೊಟ್ಟಿ ಅಥವಾ ಉಪ್ಪಿಟ್ಟು ತಿಂದರೆ ಶರೀರದ ತೂಕವನ್ನು ಸಮತೋಲನದಲ್ಲಿಡಬಹುದು.

7 ಗರ್ಭಿಣಿಯರು ಕಾರ್ನ್ ಸೇವಿಸಿದರೆ ಫೋಲಿಕ್ ಆಸಿಡ್ ಕೊರತೆಯನ್ನು ನೀಗಿಸಬಹುದು.

ಮಂಡಿಯ ಆರೋಗ್ಯಕ್ಕೆ ಯೋಗದ ಪರಿಹಾರ

#HealthBenefits #PopCorn  #PopCornBenefits #HealthTips

Tags