ಆರೋಗ್ಯಆಹಾರಜೀವನ ಶೈಲಿ

ಚುಕ್ಕಿ ಬಾಳೆಹಣ್ಣು ತಿನ್ನುವುದರಿಂದ ಆಗುವ ಲಾಭಗಳಿವು

ಬಡವರ ಹಣ್ಣು ಎಂದು ಪ್ರಸಿದ್ದವಾಗಿರುವ ಬಾಳೆ ಹಣ್ಣು ಕಂಡರೆ ಎಲ್ಲರಿಗೂ ಇಷ್ಟ. ಸಲೀಸಾಗಿ ಮತ್ತು ಕಡಿಮೆ ಬೆಲೆಯಲ್ಲಿ ಸಿಗುವ ಈ ಹಣ್ಣಿನಲ್ಲಿ ನೂರಾರು ಪ್ರಭೇದಗಳಿಲ್ಲ. ಆದರೆ, ಬೆರಳುದ್ದದ ಪುಟ್ಟ ಬಾಳೆಯಿಂದ ಆರಂಭಿಸಿ, ಮಾರುದ್ದದ ಚುಕ್ಕಿ ಬಾಳೆಯವರೆಗೂ ವೈವಿದ್ಯಗಳಿವೆ.

ಇನ್ನು ಚುಕ್ಕಿ ಬಾಳೆ ಹಣ್ಣು ತಿನ್ನುವುದರಿಂದ ಅನೇಕ ಲಾಭಗಳಿವೆ. ಅವುಗಳ ಬಗ್ಗೆ ನಾವೀಗ ಹೇಳುತ್ತೇವೆ.

1 ವೇಗವಾಗಿ ಜೀರ್ಣವಾಗುವ ಈ ಹಣ್ಣು ಮಲಬದ್ಧತೆ, ಖಿನ್ನತೆ, ಎದೆಯುರಿಯನ್ನು ಕಡಿಮೆ ಮಾಡುತ್ತದೆ. ಕಬ್ಬಿಣಾಂಶ ಹೆಚ್ಚಿರುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

2 ಬಾಳೆಹಣ್ಣಿನಲ್ಲಿ ಸೋಡಿಯಂ ಅಂಶ ಹೆಚ್ಚಾಗಿರುವುದರಿಂದ ದೇಹದಲ್ಲಿ ರಕ್ತದ ಒತ್ತಡವನ್ನು ಕಡಿಮೆ ಮಾಡುವಂತಹ ಶಕ್ತಿ ಇದಕ್ಕಿದೆ.

3 ಇನ್ನು ಚುಕ್ಕೆ ಬಾಳೆಹಣ್ಣು ತಿನ್ನುವುದರಿಂದ ಮಲಬದ್ಧತೆಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಏಕೆಂದರೆ ಇದರಲ್ಲಿ ಇರುವಂತಹ ನಾರಿನ ಅಂಶ ಮಲಬದ್ಧತೆಯನ್ನು ಆಗದೆ ಇರಲು ತುಂಬಾ ಸಹಕಾರಿಯಾಗುತ್ತದೆ.

4 ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ನಿಮಗೆ ಉರಿತ ಕಂಡುಬಂದಲ್ಲಿ ಕೇವಲ ಚುಕ್ಕೆ ಬಾಳೆಹಣ್ಣನ್ನು ತಿನ್ನುವುದರಿಂದ ಅವುಗಳನ್ನು ಕಡಿಮೆ ಮಾಡಿಕೊಳ್ಳಬಹುದು.

5 ನಿಮ್ಮ ಹೊಟ್ಟೆಯು ಹುಣ್ಣುಗಳಿಂದ ಬಳಲುತ್ತಿದ್ದರೆ ಚುಕ್ಕಿ ಬಾಳೆಹಣ್ಣು ತಿನ್ನಬೇಕು. ಇದರಿಂದ ನಾಶಕಾರಿ ಆಮ್ಲಗಳು ಮತ್ತು ಕಿರಿ ಕಿರಿ ತಪ್ಪುತ್ತದೆ.

6 ಈ ಹಣ್ಣಿನಲ್ಲಿ ಟಿ.ಎನ್.ಎಫ್ ಅಂಶವಿದ್ದು,  ಇದು ಕ್ಯಾನ್ಸರ್ ವಿರುದ್ದ ಹೋರಾಡುತ್ತದೆ.

ಕುತ್ತಿಗೆ ನೋವಿಗೆ ಇಲ್ಲಿದೆ ಸರಳ ಪರಿಹಾರ

#HealthTips #Banana  #ChukkiBanana,

Tags