ಆರೋಗ್ಯಆಹಾರಜೀವನ ಶೈಲಿ

ನೆಲ್ಲಿಕಾಯಿ ಜ್ಯೂಸ್ ನಿಂದಾಗುವ ಆರೋಗ್ಯಕರ ಲಾಭಗಳು

ಎಲ್ಲಾ ಕಾಲದಲ್ಲೂ ದೊರೆಯುವ ನೆಲ್ಲಿಕಾಯಿ ಕಂಡರೆ ಎಲ್ಲರಿಗೂ ಇಷ್ಟ.  ಇದನ್ನು ಉಪ್ಪಿನಕಾಯಿಯಾಗಿ ಮತ್ತು ಜ್ಯೂಸ್ ರೂಪದಲ್ಲಿಯೂ ಬಳಸಲಾಗುತ್ತದೆ. ಇದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ಉಪಯೋಗಗಳಿವೆ.

ಅಂದ ಹಾಗೆ ನೆಲ್ಲಿ ಕಾಯಿಯಿಂದ ಆಮ್ಲ ಜ್ಯೂಸ್ ತಯಾರಿಸಲಾಗುತ್ತದೆ, ಯಾವುದೇ ಆರ್ಯುವೇದ ಅಂಗಡಿಗಳಲ್ಲಿ ಕೇಳಿದರೆ ಈ ಜ್ಯೂಸ್ ದೊರೆಯುತ್ತದೆ. ಇದನ್ನು ಪ್ರತಿನಿತ್ಯ ನಿಗದಿತ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು.

1 ಕಣ್ಣು,  ಕೂದಲು ಹಾಗೂ ಜೀರ್ಣಕ್ರಿಯೆಗೆ ಇದು ಒಳ್ಳೆಯದು.

2 ನಿಗದಿತ ಪ್ರಮಾಣದಲ್ಲಿ ಜೇನು ಜೊತೆ ತೆಗೆದುಕೊಳ್ಳುತ್ತಾ ಈ ಜ್ಯೂಸ್ ಕುಡಿದರೆ ಅಸ್ತಮಾ ಕಾಯಿಲೆ ಕಡಿಮೆಯಾಗುವುದು.

3 ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ತ್ವಚೆ ಸಂಬಂಧಿ ಕಾಯಿಲೆಗಳು ದೂರವಾಗುತ್ತದೆ.

4  ಚರ್ಮದ ಮೇಲಿನ ಕಪ್ಪು ಕಲೆಗಳನ್ನು ತೆಗೆದುಹಾಕಲು ನೆಲ್ಲಿಕಾಯಿ ರಸವನ್ನು ಅನ್ವಯಿಸಬಹುದು.

5 ಮಲಬದ್ಧತೆ ಸಮಸ್ಯೆಯಿಂದ ತುಂಬಾ ಕಾಲದಿಂದ ಬಳಲುತ್ತಿರುವವರು ಆಮ್ಲ ಜ್ಯೂಸ್ ಕುಡಿದರೆ ಈ ಸಮಸ್ಯೆ ಗುಣಮುಖವಾಗುವುದು.

6 ಮುಟ್ಟಿನ ಸಮಯದಲ್ಲಿ ತುಂಬಾ ರಕ್ತಸ್ರಾವವಾಗುತ್ತಿದ್ದರೆ ಹಣ್ಣಾದ ಬಾಳೆ ಹಣ್ಣನ್ನು ತಿಂದು ಈ ಆಮ್ಲವನ್ನು ಕುಡಿದರೆ ತುಂಬಾ ರಕ್ತಸ್ರಾವವಾಗುವುದಿಲ್ಲ.

ಮಂಡಿಯ ಆರೋಗ್ಯಕ್ಕೆ ಯೋಗದ ಪರಿಹಾರ

#HealthTips  #GooseberryJuice #LifeStyle

Tags